ಪುತ್ತೂರು: ಬೀರಮಲೆ ಬೆಟ್ಟ ಅಭಿವೃದ್ಧಿ ಸಮಿತಿಯವರು ಫೆ.3 ರಂದು ನಡೆಸಲಿರುವ ಬಿರುಮಲೋತ್ಸವ-2024 ಅದ್ದೂರಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಜ.22 ರಂದು ಸಮಿತಿ ಸದಸ್ಯರ ಪೂರ್ವಭಾವಿ ಸಭೆಯು ಬಿರುಮಲೆ ಬೆಟ್ಟದಲ್ಲಿ ಜರಗಿತು.
ಈ ಹಿಂದೆಯೂ ಬೀರಮಲೆ ಬೆಟ್ಟ ಅಭಿವೃದ್ಧಿ ಸಮಿತಿಯವರು ಯಶಸ್ವಿಯಾಗಿ ಬಿರುಮಲೋತ್ಸವವನ್ನು ಹಮ್ಮಿಕೊಂಡಿದ್ದು, ಈ ಬಾರಿಯೂ ಅದ್ದೂರಿಯಾಗಿ ಬಿರುಮಲೋತ್ಸವವನ್ನು ಹಮ್ಮಿಕೊಳ್ಳುವುದು ಎಂದು ಸಭೆಯಲ್ಲಿ ತೀರ್ಮಾನವಾಯಿತು. ಅದರಂತೆ ಬಿರುಮಲೋತ್ಸವ ಕಾರ್ಯಕ್ರಮದಲ್ಲಿ ಗಾಳಿಪಟ ಹಾರಿಸುವ ಸ್ಪರ್ಧೆ, ಫುಡ್ ಕೋರ್ಟ್, ಕರೋಕೆ ಹಾಡುಗಳು ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದೆಂದು ನಿರ್ಣಯಿಸಲಾಯಿತು.
ಶಾಸಕರಾದ ಅಶೋಕ್ ಕುಮಾರ್ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಸುರೇಶ್ ಶೆಟ್ಟಿ ಇವೆಂಟ್ಸ್ ನವರು ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುವುದೆಂದು ನಿರ್ಣಯಿಸಲಾಯಿತು.
ಬೀರಮಲೆ ಬೆಟ್ಟ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎ.ಜಗಜ್ಜೀವನ್ ದಾಸ್ ರೈಯವರು ಸಮಿತಿ ಸದಸ್ಯರನ್ನು ಸ್ವಾಗತಿಸಿ ಮುಂಬರುವ ದಿನಗಳಲ್ಲಿ ನಡೆಯಲಿರುವ ಬಿರುಮಲೋತ್ಸವ ಕಾರ್ಯಕ್ರಮಕ್ಕೆ ಸಲಹೆ ಸೂಚನೆಗಳನ್ನು ನೀಡಿ ಯಶಸ್ವಿಗೊಳಿಸೋಣ ಎಂದರು.
ಸಭೆಯಲ್ಲಿ ಸದಸ್ಯರಾದ ರಘುನಾಥ್ ರಾವ್, ಪ್ರೊ|ಝೇವಿಯರ್ ಡಿ’ಸೋಜ, ನಿತಿನ್ ಪಕ್ಕಳ, ಮನೋಜ್ ಶಾಸ್ತ್ರೀ, ಧನ್ವಂತರಿ ಆಸ್ಪತ್ರೆಯ ಡಾ.ರವೀಂದ್ರ, ಈವೆಂಟ್ ಸಂಘಟಕರಾದ
ಸುರೇಶ್ ಶೆಟ್ಟಿ ಉಪಸ್ಥಿತರಿದ್ದು ಸಲಹೆ ಸೋಚನೆಗಳನ್ನು ನೀಡಿದರು. ಕಾರ್ಯದರ್ಶಿ ಎಂ.ಎಸ್ ಅಮ್ಮಣ್ಣಾಯ ವಂದಿಸಿದರು.