ಪುತ್ತೂರು: ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪುತ್ತೂರು ಮತ್ತು ಸುಳ್ಯದ ವಿದ್ಯಾರ್ಥಿಗಳು 12 ಪ್ರಶಸ್ತಿಗಳೊಂದಿಗೆ ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ಇವರೆಲ್ಲರೂ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದುಕೊಂಡಿರುತ್ತಾರೆ.
ಪ್ರಶಸ್ತಿಗಳ ವಿವರ:
ಕು|ತನಯ(ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ) ಮತ್ತು ಮಾ|ವಿವಾನ್(ರೋಟರಿ ನರ್ಸರಿ ಮತ್ತು ಆಂಗ್ಲ ಮಾಧ್ಯಮ ಶಾಲೆ ಸುಳ್ಯ) ಇವರು ಮಾನಸಿಕ ಅಂಕಗಣಿತದ ತನ್ನ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಚಾಂಪಿಯನ್ ಆಫ್ ಚಾಂಪಿಯನ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. ಮಾ|ಚಿರಾಗ್ ಎಂ.ಎಲ್(ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ) ಇವರು ಅತ್ಯುತ್ತಮ ಗಣಿತ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಚಾಂಪಿಯನ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. ಮಾ|ಕೃಪಾಹರಿ ಎಂ ರೈ (ವಿದ್ಯಾರಶ್ಮಿ ವಿದ್ಯಾಲಯ ಸವಣೂರು), ಕು|ಶಾರ್ವರಿ(ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ), ಕು|ಪ್ರಣತಿ ಬಿ, (ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ) ರವರು ಟಾಪರ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. ಮಾ|ಶೌರ್ಯ ಕಾರ್ತಿಕೇಯ(ವಿವೇಕಾನಂದ ಸೆಂಟ್ರಲ್ ಸ್ಕೂಲ್ ಪುತ್ತೂರು)ರವರು ವಿನ್ನರ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. ಕು|ಗಾನ್ಯ ಬಿ ಎಸ್ (ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯ), ಕು|ಇಚ್ಛಿಕ ಜೈನ್(ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ), ಮಾ|ವಿಹಾನ್ (ಶ್ರೀ ಗಜಾನನ ಪ್ರಾಥಮಿಕ ಶಾಲೆ, ಈಶ್ವರಮಂಗಲ), ಕು|ಆಶ್ವಿಕೃಷ್ಣ (ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆ), ಮಾ|ಆಹನ್ ಜೈನ್(ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆ) ರನ್ನರ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ ಅಲ್ಲದೆ ಮಾ| ಆರ್ಯ(ಸುದಾನ ವಸತಿಯುತ ಶಾಲೆ ಪುತ್ತೂರು), ಮಾ| ಶಾರ್ವಿಲ್ (ಸುದಾನ ವಸತಿಯುತ ಶಾಲೆ ಪುತ್ತೂರು), ಮಾ| ಶ್ರೇಯಾಂಕ್ (ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ) ಇವರು ತಮ್ಮ ಗಮನಾರ್ಹ ಪ್ರದರ್ಶನದ ಮೂಲಕ ಅರ್ಹತಾ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಗೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಪ್ರಫುಲ್ಲಾ ಗಣೇಶ್ ತರಬೇತಿ ಪಡೆದಿರುತ್ತಾರೆ.
ಈ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯನ್ನು ಎಸ್.ಆರ್.ಎಸ್ ಇಂಟರ್ನ್ಯಾಷನಲ್ ಸ್ಕೂಲ್ ತುಮಕೂರು ಮತ್ತು ಟಿ.ಆರ್.ಎಸ್ ಶಿಕ್ಷಣ ಸಂಸ್ಥೆಯು ಜ.21 ರಂದು ತುಮಕೂರು ಜಿಲ್ಲೆಯ
ತಿಪಟೂರಿನಲ್ಲಿ ಆಯೋಜಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ 800ಕ್ಕೂ ಮಿಕ್ಕಿ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಐ.ಆರ್.ಸಿ.ಎಂ.ಡಿ ಶಿಕ್ಷಣ ವಿದ್ಯಾರ್ಥಿಗಳು ಗಮನಾರ್ಹ ಪ್ರದರ್ಶನದ ಮೂಲಕ 12 ಬಹುಮಾನಗಳೊಂದಿಗೆ ಮಾನಸಿಕ ಗಣಿತದ ಜಗತ್ತಿನಲ್ಲಿ ತಮ್ಮ ಛಾಪನ್ನು ಮೂಡಿಸಿರುತ್ತಾರೆ. ಡಾ| ಶ್ರೀ ರುದ್ರಮುನಿ ಸ್ವಾಮಿಗಳು, ಶ್ರೀ ಷಡಕ್ಷರ ಮಠ ತಿಪಟೂರು ಇವರ ಸಮಕ್ಷಮದಲ್ಲಿ ಗಣ್ಯರ ಮುಂದೆ ಬಹುಮಾನವನ್ನು ಪುಟಾಣಿಗಳಿಗೆ ನೀಡಿ ಗೌರವಿಸಲಾಯಿತು.