ಕುದ್ಮಾರು : ಸ್ಕಂದಶ್ರೀ ಬಾರ್, ರೆಸ್ಟೋರೆಂಟ್ ಉದ್ಘಾಟನೆ

0

ಉದ್ಯಮ ಕ್ಷೇತ್ರದಲ್ಲಿ ಚೆನ್ನಪ್ಪ ಗೌಡರವರು ಯಶಸ್ಸು ಸಾಧಿಸಲಿ- ಸೀತಾರಾಮ ರೈ
ಪ್ರವಾಸದ್ಯೋಮ ಕ್ಷೇತ್ರವಾಗಿ ಈ ಊರು ಅಭಿವೃದ್ಧಿ ಆಗಲಿ- ಸತೀಶ್ ಕುಮಾರ್
ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡುವುದು ನನ್ನ ಗುರಿ- ಚೆನ್ನಪ್ಪ ಗೌಡ


ಪುತ್ತೂರು: ಕುದ್ಮಾರಿನಲ್ಲಿ ಚೆನ್ನಪ್ಪ ಗೌಡ ನೂಜಿಯವರು ಹೊಸದಾಗಿ ಆರಂಭಿಸಿರುವ ಸ್ಕಂದಶ್ರೀ ಬಾರ್ ಮತ್ತು ರೆಸ್ಟೆರೊಂಟ್ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ನೀಡುವ ಮೂಲಕ ಊರ-ಪರವೂರ ಗ್ರಾಹಕ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಬೆಳೆಯಲಿ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿರುವ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ಹೇಳಿದರು.


ಅವರು ಜ. 26 ರಂದು ಕುದ್ಮಾರು ಸ್ಕಂದನಗರದಲ್ಲಿ ಉದ್ಯಮಿ ಚೆನ್ನಪ್ಪ ಗೌಡ ನೂಜಿಯವರ ಮಾಲಕತ್ವದ ಸ್ಕಂದಶ್ರೀ ಬಾರ್, ರೆಸ್ಟೋರೆಂಟ್ ಅನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿ ಸವಣೂರಿನಲ್ಲಿ ನಾನು ಸಮಾಜ ಸೇವೆ ಮಾಡಿದಂತೆ, ಕುದ್ಮಾರು ಭಾಗದಲ್ಲೂ ಚೆನ್ನಪ್ಪ ಗೌಡ ನೂಜಿಯವರು ಸಹ ಉತ್ತಮ ರೀತಿಯ ಸಾಮಾಜಿಕ ಸೇವೆಯಲ್ಲಿ ಭಾಗವಹಿಸಿ, ಊರಿನ ಅಭಿವೃದ್ಧಿಗೆ ಪೂರಕವಾಗಿ ಉದ್ಯಮವನ್ನು ಆರಂಭಿಸಿದ್ದಾರೆ, ಇವರಿಂದ ಮತ್ತಷ್ಟು ಸೇವೆಗಳು ಸಮಾಜಕ್ಕೆ ದೊರೆಯಲಿ ಎಂದು ಹೇಳಿದರು.


ಪ್ರವಾಸದ್ಯೋಮವಾಗಿ ಕುದ್ಮಾರು- ಸತೀಶ್ ಕುಮಾರ್
ಮುಖ್ಯ ಅತಿಥಿಯಾಗಿದ್ದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಯವರು ಮಾತನಾಡಿ
ಪ್ರವಾಸದ್ಯೋಮ ನೆಲೆಯಲ್ಲಿ ಚೆನ್ನಪ್ಪ ಗೌಡರವರು ಕುದ್ಮಾರಿನಲ್ಲಿ ಹೊಸ ಉದ್ಯಮ ಆರಂಭಿಸಿದ್ದಾರೆ. ಈ ಉದ್ಯಮ ಕ್ಷೇತ್ರ ಊರ-ಪರವೂರ ಗ್ರಾಹಕರ ಮೆಚ್ಚುಗೆ ಗಳಿಸಲಿ ಎಂದು ಹಾರೈಸಿ, ಕುದ್ಮಾರು ಪ್ರವಾಸಿಗರ ಅಚ್ಚು ಮೆಚ್ಚಿನ ಊರು ಎಂಬ ಹೆಸರನ್ನು ಪಡೆಯಲಿ ಎಂದು ಆಶಿಸಿದರು.
ಮುಖ್ಯ ಅತಿಥಿ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಆಪನಾ ಸಮಿತಿಯ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿಯವರು ನೂತನ ಸಂಸ್ಥೆಗೆ ಶುಭಹಾರೈಸಿದರು.


ಗ್ರಾಹಕರಿಗೆ ಉತ್ತಮವಾದ ಸೇವೆ- ಚೆನ್ನಪ್ಪ ಗೌಡ ನೂಜಿ
ಸ್ಕಂದಶ್ರೀ ಬಾರ್, ರೆಸ್ಟೋರೆಂಟ್ ಮಾಲಕ ಚೆನ್ನಪ್ಪ ಗೌಡ ನೂಜಿಯವರು ಎಲ್ಲರನ್ನು ಸ್ವಾಗತಿಸಿ, ಮಾತನಾಡಿ ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡುವುದೇ ನನ್ನ ಸಂಸ್ಥೆಯ ಗುರಿಯಾಗಿದ್ದು, ಈ ಹಿಂದೆ ಕುದ್ಮಾರಿನಲ್ಲಿ ಎರಡು ಮೂರು ಅಂಗಡಿಗಳು ಇತ್ತು, ಕಾಲ ಬದಲಾದಂತೆ ಹಲವು ರೀತಿಯ ಸೌಕರ‍್ಯ ಕುದ್ಮಾರು ಭಾಗಕ್ಕೆ ಬಂದಿದೆ, ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಹೊಸ ಉದ್ಯಮವನ್ನು ರೂಪಿಸಲಾಗಿದೆ ಎಂದು ಹೇಳಿದರು, ಚೆನ್ನಪ್ಪ ಗೌಡರವರ ಪತ್ನಿ ಪವಿತ್ರ ಚೆನ್ನಪ್ಪ ಗೌಡ ನೂಜಿ ಯವರು ಕಾರ‍್ಯಕ್ರಮದಲ್ಲಿ ಸಹಕಾರ ನೀಡಿದರು.


ಸಮಾರಂಭದಲ್ಲಿ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕರಾದ ಆಶ್ವಿನ್ ಎಲ್ ಶೆಟ್ಟಿ, ಗಂಗಾಧರ ಪೆರಿಯಡ್ಕ,ಜಯಪ್ರಕಾಶ್ ಕಳುವಾಜೆ, ಮುಖ್ಯಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಉದ್ಯಮಿ ಚಂದ್ರಶೇಖರ್ ಗೌಡ ರಾಶಿ ಬರೆಪ್ಪಾಡಿ, ಅಂಕಲ್ ಸ್ವೀಟ್ಸ್ ಸಂಸ್ಥೆಯ ಮಾಲಕ ಕುಶಾಲಪ್ಪ ಗೌಡ, ಅಬಕಾರಿ ಇಲಾಖೆಯ ನಿವೃತ್ತ ಸಬ್‌ಇನ್ಸ್‌ಪೆಕ್ಟರ್ ಮಹಾಲಿಂಗ ನಾಯ್ಕ್ ನರಿಮೊಗರು, ಬೆಳಂದೂರು ಗ್ರಾ.ಪಂ, ಸದಸ್ಯರುಗಳಾದ ರೋಹಿತಾಕ್ಷ ಕೆಡೆಂಜಿಕಟ್ಟ, ಪ್ರವೀಣ್ ಕೆರೆನಾರು, ಮಾಜಿ ಉಪಾಧ್ಯಕ್ಷ ಹರೀಶ್ ಕೆರೆನಾರು, ಮಾಜಿ ಸದಸ್ಯ ಮೇದಪ್ಪ ಗೌಡ ಕುವೆತ್ತೋಡಿ, ಪ್ರಮುಖರಾದ ಸುರೇಶ್ ರೈ ಸೂಡಿಮುಳ್ಳು, ತಿಮ್ಮಪ್ಪ ಕಡಮಾಜೆ, ವಿಠಲ ಗೌಡ ಕಾಪೆಜಾಲು, ಉಮೇಶ್ ಆಸಿಶಕ್ತಿ ಲಾಡ್ಯರ‍್ಸ್, ಪ್ರಶಾಂತ್ ಬರೆಪ್ಪಾಡಿ, ವೇದಾವತಿ ಕಾಪೆಜಾಲು, ಶಿವನಂದ ಕೆಡೆಂಜಿಕಟ್ಟ, ಲೋಕೇಶ್ ಬಿ.ಎನ್ ಬರೆಪ್ಪಾಡಿ, ರಾಕೇಶ್ ನೂಜಿ, ರಾಜೇಶ್ ನೂಜಿ, ಗಣೇಶ್ ನೂಜಿ, ಲವ ಕುಮಾರ್ ನೂಜಿ, ಹರೀಶ್ ಸೂರಂಜ, ಉಮೇಶ್ ಕೆರೆನಾರು, ಅಶೋಕ್ ಪೂಜಾರಿ, ಕೃಷ್ಣಪ್ಪ ಪೂಜಾರಿ ಪಟ್ಟೆ(ಬೇರಿಕೆ) ಸದಾನಂದ ಸೌತೆಮಾರು ಸೇರಿದಂತೆ ನೂರಾರು ಮಂದಿ ಭಾಗವಹಿಸಿ, ಶುಭಕೋರಿದರು.

LEAVE A REPLY

Please enter your comment!
Please enter your name here