ಜ.28: ಕೆಯ್ಯೂರಿನಲ್ಲಿ 33ನೇ ವರ್ಷದ ನಗರ ಭಜನೆ ಮತ್ತು ಏಕಾಹ ಭಜನಾ ಮಂಗಲೋತ್ಸವ

0

ಕೆಯ್ಯೂರು : ಶ್ರೀ ದುರ್ಗಾಭಜನಾ ಮಂಡಳಿ, ಕೆಯ್ಯೂರು ಇದರ ವತಿಯಿಂದ ನಡೆಯುವ 33ನೇ ವರ್ಷದ ನಗರ ಭಜನೆಯು ನ19ರಂದು ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಿ ಸನ್ನಿದಿಯಿಂದ ಪ್ರಾರಂಭಗೊಂಡು ಜ:26ರ ತನಕ 69ದಿನಗಳ ಪರ್ಯಂತ ನಗರ ಭಜನೆಯು ನಡೆದು ಜ:27ರಂದು ಬೆಳಿಗ್ಗೆ 6ಗಂಟೆಗೆ ದೇವಿ ಸನ್ನಿದಿಯಲ್ಲಿ ದೀಪೋಜ್ವಲನಗೊಂಡು ಜ28ರಂದು ಬೆಳಿಗ್ಗೆ  6ಗಂಟೆಗೆ ಏಕಾಹ ಭಜನಾ ಮಂಗಲೋತ್ಸವ ನಡೆಯಲಿದೆ.

ರಾತ್ರಿ ದಕ್ಷೀಣೋತ್ತರ ಜಿಲ್ಲೆಯ ಪ್ರಸಿದ್ದ  ಕಲಾವಿದರ ಹಾಗೂ ಹನುಮಗಿರಿ ಮೇಳದ ಅತಿಥಿ ಕಲಾವಿದರ ಸಮಾಗಮದಲ್ಲಿ  ಭಸ್ಮಾಸುರ ಮೋಹಿನಿ ಮತ್ತು ಶಬರಿಮಲೆ ಶ್ರೀ ಅಯ್ಯಪ್ಪ ಪೌರಾಣಿಕ ಯಕ್ಷಗಾನ ಬಯಲಾಟ ಜ.27ರಂದು ಶ್ರೀ ಕ್ಷೇತ್ರದ ವಠಾರದಲ್ಲಿ ನಡೆಯಲಿದೆ  ಎಂದು ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯುರು ಅಧ್ಯಕ್ಷ ದೇವಣ್ಣ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ 

LEAVE A REPLY

Please enter your comment!
Please enter your name here