ಪುತ್ತೂರು: ಶುದ್ಧ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ ಸೇರಿದಂತೆ ಅಕ್ಕಿ, ಗೋಧಿ, ಮೆಣಸು ಇತ್ಯಾದಿಗಳನ್ನು ಹುಡಿ ಮಾಡಿಕೊಡುವ ವ್ಯವಸ್ಥೆ ಇರುವ ಪಂಚಮಿ ಆಯಿಲ್ ಆಂಡ್ ಫ್ಲೋರ್ ಮಿಲ್ ಪೆರ್ಲಂಪಾಡಿ ಜಂಕ್ಷನ್ನಲ್ಲಿರುವ ಸುರಕ್ಷಾ ಸಂಕೀರ್ಣದಲ್ಲಿ ಜ.31ರಂದು ಬೆಳಿಗ್ಗೆ ಶುಭಾರಂಭಗೊಂಡಿತು. ಅರ್ಚಕ ಜಯರಾಮ ಬಡೆಕ್ಕಿಲ್ಲಾಯರವರು ಗಣಪತಿ ಹೋಮ ಹಾಗೂ ವೈಧಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಪಂಚಮಿಯ ಮಾಲಕರಾದ ಪ್ರದೀಪ್ ದೊಡ್ಡಮನೆಯವರ ತಾಯಿ ಕಮಲ ಹಾಗೂ ತಂದೆ ನಾರಾಯಣ ಗೌಡ ಕೊರ್ಬಂಡ್ಕ ದೊಡ್ಡಮನೆಯವರು ದೀಪ ಬೆಳಗಿಸಿ ಸಂಸ್ಥೆಯನ್ನು ಶುಭಾರಂಭಗೊಳಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು. ಮಾಲಕ ಪ್ರದೀಪ್ ದೊಡ್ಡಮನೆಯವರು ಅತಿಥಿಗಳನ್ನು ಸ್ವಾಗತಿಸಿ,ಸತ್ಕರಿಸಿ, ಸಹಕಾರ ಕೋರಿದರು.
ಪಂಚಮಿಯಲ್ಲಿ ದೊರೆಯುವ ಸೇವೆಗಳು
ಪಂಚಮಿ ಆಯಿಲ್ ಆಂಡ್ ಫ್ಲೋರ್ ಮಿಲ್ನಲ್ಲಿ ಪರಿಶುದ್ಧ ಕೊಬ್ಬರಿ ಎಣ್ಣೆ ಹಾಗೂ ಎಳ್ಳೆಣ್ಣೆ ದೊರೆಯುತ್ತದೆ. ಇದಲ್ಲದೆ ತೆಂಗಿನಕಾಯಿ, ಕೊಬ್ಬರಿಯನ್ನು ಉತ್ತಮ ದರದಲ್ಲಿ ಖರೀದಿ ಮಾಡಲಾಗುತ್ತದೆ. ಅಕ್ಕಿ, ಗೋಧಿ, ಮೆಣಸು, ಕೊತ್ತಂಬರಿ, ಅರಿಶಿನ, ಕರಿಮೆಣಸು ಇತ್ಯಾದಿಗಳನ್ನು ಹುಡಿ ಮಾಡಿ ಕೊಡುವ ವ್ಯವಸ್ಥೆಯೂ ಇಲ್ಲಿದೆ. ಗ್ರಾಮಸ್ಥರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಲಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9980898798 ಅಥವಾ 8277547962 ಗೆ ಸಂಪರ್ಕಿಸಬಹುದಾಗಿದೆ.