ಪುತ್ತೂರು: ಮುಂಡೂರು ಸ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ದತ್ತಿನಿಧಿ ಹಾಗೂ ಬಹುಮಾನ ವಿತರಣೆ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಅಧ್ಯಕ್ಷತೆ ವಹಿಸಿದ್ದರು.
ಪಜಿಮಣ್ಣು ಶ್ರೀನಿವಾಸರಾವ್ ಕಾವೇರಮ್ಮ ಮೆಮೋರಿಯಲ್ ಟ್ರಸ್ಟ್ ಇದರ ಗೌರವಾಧ್ಯಕ್ಷರಾದ ಎಂ ಪಿ ಜಯರಾಮ್ ಭಟ್ ಸ್ಥಾಪಿಸಿರುವ ಹಾಗೂ ಡಾ.ಸುಕುಮಾರ, ಸತ್ಯಭಾಮ, ಸೂರ್ಯನಾರಾಯಣ ಹಾಗೂ ಬಾಲಚಂದ್ರ ರಾವ್ ಇವರ ದತ್ತಿ ನಿಧಿಯ ಹಣವನ್ನು ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪಜಿಮಣ್ಣು ಶ್ರೀನಿವಾಸ್ ರಾವ್ ಕಾವೇರಮ್ಮ ಟ್ರಸ್ಟ್ ಅಧ್ಯಕ್ಷರಾದ ಎಂ ಪಿ ಜಯರಾಮ್ ಭಟ್ ಅತಿಥಿಯಾಗಿ ಉಪಸ್ಥಿತರಿದ್ದು, ಶಾಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೂಡಂಬೈಲು ರವಿ ಶೆಟ್ಟಿ ನೇಸರ ಕಂಪ ಇವರು ಶಾಲೆಗೆ ಕೊಡುಗೆಯಾಗಿ ನೀಡಿದ ಬ್ಯಾಂಡ್ ಸೆಟ್ನ ಸವಿ ನೆನಪಿಗಾಗಿ ಅವರ ಸಹೋದರ ಸುಧೀರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅಲ್ಲದೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಶಾಲೆಯ ಹಿರಿಯ ವಿದ್ಯಾರ್ಥಿನಿಯರಾದ ಕುಮಾರಿ ಮಧುಶ್ರೀ ಕುಮಾರಿ ಸಹನ ಕುಮಾರಿ ಹಿತ ಶ್ರೀ ಹಾಗೂ ಆಯಿಷತ್ ಸಹದಿಯ ಅವರನ್ನು ಸನ್ಮಾನಿಸಲಾಯಿತು.
ಆಟೋಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು ಬಹುಮಾನದ ಪ್ರಾಯೋಜಕರಾಗಿ ಶಾಲಾ ಹಿರಿಯ ವಿದ್ಯಾರ್ಥಿ ಕೃಷ್ಣರಾಜ ವೈಲಾಯ ಸಹಕರಿಸಿದರು.
ಅತಿಥಿಗಳಾಗಿ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್ ಸಂದರ್ಬೋಚಿತವಾಗಿ ಮಾತನಾಡಿ ಶುಭ ಕೋರಿದರು. ಶಾಲಾ ಎಸ್ಡಿಎಂಸಿ ನಾಮ ನಿರ್ದೇಶಿತ ಸದಸ್ಯ ಉಮೇಶ್ ಅಂಬಟ ಹಾಗೂ ಎಸ್ಡಿಎಂಸಿ ಉಪಾಧ್ಯಕ್ಷರಾದ ಸಂಗೀತ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಗುರುಗಳಾದ ಉತ್ತಮ ಪಡ್ಪು, ಸಂಗೀತ ಶಿಕ್ಷಕಿ ಸಂಧ್ಯಾ ಹಾಗೂ ಚಿತ್ರಕಲಾ ಶಿಕ್ಷಕರಾದ ಶಿವಸುಬ್ರಹ್ಮಣ್ಯ ಅವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ವೇತಾವಸಾನ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.
ಶಾಲಾ ಮುಖ್ಯ ಗುರು ವಿಜಯ ಪಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತುಗಳನ್ನಾಡಿದರು. ಹಿರಿಯ ಶಿಕ್ಷಕ ರಾಮಚಂದ್ರ ಸನ್ಮಾನ ಪತ್ರ ವಾಚಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವನಿತ ಹಾಗೂ ಜಿಪಿಟಿ ಶಿಕ್ಷಕಿ ಅನ್ನಪೂರ್ಣ ದತ್ತಿ ನಿಧಿಯ ಅರ್ಹ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸಹಶಿಕ್ಷಕ ಅಬ್ದುಲ್ ಬಶೀರ್ ಕೆ ವಂದಿಸಿದರು. ಟಿಜಿಟಿ ಶಿಕ್ಷಕರಾದ ರವೀಂದ್ರ ಶಾಸ್ತ್ರಿ ನಿರೂಪಣೆ ಮಾಡಿದರು. ಶಿಕ್ಷಕ ವೃಂದದವರು ಸಹಕರಿಸಿದರು.
ಪಜಿಮಣ್ಣು ಶ್ರೀನಿವಾಸರಾವ್ ಕಾವೇರಮ್ಮ ಮೆಮೋರಿಯಲ್ ಟ್ರಸ್ಟ್ ಇದರ ಗೌರವಾಧ್ಯಕ್ಷರು, ಶಾಲಾ ದಾನಿಯೂ ಆಗಿರುವ ಎಂ ಪಿ ಜಯರಾಮ್ ಭಟ್ ಇವರ ಪ್ರಾಯೋಜಕತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭೋಜನದ ವ್ಯವಸ್ಥೆ ಮಾಡಲಾಯಿತು.
ಜ.25ರಂದು ಶಾಲೆಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಲೆಯ ಇನ್ನೋರ್ವ ದಾನಿ ಪದ್ಮನಾಭ ಕೊಡಿಂಕೀರಿಯವರ ಪ್ರಾಯೋಜಕತ್ವದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆಯವನ್ನು ಆ ದಿನದಂದು ಮಾಡಲಾಯಿತು.