ಬನ್ನೂರ್ ಗ್ರಾಮದಲ್ಲಿ ಪುತ್ತೂರು ಕ ಸಾ ಪದಿಂದ ಸಾಹಿತ್ಯ ಸಂಭ್ರಮ

0

ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚು: ಸ್ಮಿತಾ ಎನ್.

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ನೇತೃತ್ವದಲ್ಲಿ, ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಬನ್ನೂರು ಸಹಕಾರದಲ್ಲಿ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಪೋಷಕತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ 12 ಕಾರ್ಯಕ್ರಮ ದ. ಕ. ಜಿ.ಹಿ. ಪ್ರಾ. ಶಾಲೆ ಚಿಕ್ಕ ಮುಡ್ನೂರಲ್ಲಿ ಜ.27ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಮಿತಾ ಎನ್ “ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ ಒಲವು ಹೆಚ್ಚು ಇರುವುದರಿಂದ ಇಂದು ಪ್ರತಿಭಾ ಕಾರಂಜಿಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತಿದೆ. ಅಲ್ಲದೇ ಸಾಹಿತ್ಯ ಪರಿಷತ್ತಿನ ಈ ಗ್ರಾಮ ಸಾಹಿತ್ಯ ಸಂಭ್ರಮ ಅದಕ್ಕೆ ಪೂರಕವಾಗಿದೆ ಎಂದರು.

ಬನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಯ. ಎ, ಎಸ್. ಡಿ.ಎಂ. ಸಿ. ಅಧ್ಯಕ್ಷೆ ನಳಿನಿ ಕೆ ಸಂದರ್ಭೋಚಿತವಾಗಿ ಮಾತನಾಡಿದರು. ಸರ್ವಾಧ್ಯಕ್ಷತೆ ವಹಿಸಿದ ರೀಕ್ಷಿತ್ ಮಾತನಾಡಿ ಕೆ.ಸಿ.ಸಾಹಿತ್ಯ ಸಮ್ಮೇಳನದಂತಹ ರೂಪ ಪಡೆದು ನಡೆಯುತ್ತಿರುವ ಗ್ರಾಮ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷತೆಯಂತಹ ಜವಾಬ್ದಾರಿ ನೀಡಿ ಗ್ರಾಮೀಣ ಮಕ್ಕಳನ್ನು ಪ್ರೋತ್ಸಾಹಿಸುವ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರಿನ ಕಾರ್ಯ ಶ್ಲಾಘನೀಯವೆಂದರು”.


ಸಮಾರಂಭದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ “ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಇಂತಿಷ್ಟೇ ಜನರಿಗೆ ವೇದಿಕೆ ಒದಗಿಸಲು ಅವಕಾಶ, ಗ್ರಾಮೀಣ ಭಾಗದ ಮಕ್ಕಳು ಅವಕಾಶ ವಂಚಿತರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಜನಸಾಮಾನ್ಯರಲ್ಲಿಗೆ ತಲುಪಬೇಕು ಎನ್ನುವ ಉದ್ದೇಶದಿಂದ ಗ್ರಾಮ ಸಾಹಿತ್ಯ ಸಂಭ್ರಮ ಹಮ್ಮಿಕೊಳ್ಳಲಾಗಿದೆಯೆಂದರು”.

ಅಭಿನಂದನಾ ಕಾರ್ಯಕ್ರಮ:
ಬನ್ನೂರು ಗ್ರಾಮಕ್ಕೆ ಸಂಬಂಧಪಟ್ಟಂತೆ ತಿಮ್ಮಪ್ಪ ಪೂಜಾರಿ ರಂಗಭೂಮಿ, ಗಿರಿಜಾ ನಾಟಿವೈದ್ಯ, ರಶ್ಮಿತಾ ಸುರೇಶ್ ಸಾಹಿತ್ಯ, ದೇವಿಕಾ ಜೆ. ಜಿ. ಬನ್ನೂರು ಶಿಕ್ಷಣ ಮತ್ತು ಸಾಹಿತ್ಯ, ಸತೀಶ್ ಬಲ್ಯಾಯ ನಾಟಕ ಮತ್ತು ಚಲನಚಿತ್ರ ನಟ, ಪ್ರತಿಭಾ ಅರಿಯಡ್ಕ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕಲಿಯುಗ ಸೇವಾ ಸಮಿತಿ ಚಿಕ್ಕಮುಡ್ನೂರು ಇದರ ಸಂಚಾಲಕ ಸಂಪತ್ ಕುಮಾರ್ ಜೈನ್ ಅಭಿನಂದಿಸಿ ಶುಭ ಹಾರೈಸಿದರು.

ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಚಿಕ್ಕಮುಡ್ನೂರು ಇಲ್ಲಿನ ಮುಖ್ಯ ಗುರು ಪುಷ್ಪ ಕೆ ಸ್ವಾಗತಿಸಿ, ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿಗುರೆಲೆ ಸಾಹಿತ್ಯ ಬಳಗದ ನಿರ್ವಹಕಿ ಅಪೂರ್ವ ಕಾರಂತ್ ದರ್ಬೆ ವಂದಿಸಿದರು. ಚಿಗುರೆಲೆ ಸಾಹಿತ್ಯ ಬಳಗದ ಸದಸ್ಯೆ. ಸೌಜನ್ಯ. ಬಿ. ಎಂ. ಕೆಯ್ಯೂರು ಕಾರ್ಯಕ್ರಮ ನಿರೂಪಿಸಿದರು, ಚಂದ್ರ ಮೌಳಿ ಕಡಂದೇಲು ಸಹಕರಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಸಾಹಿತ್ಯಕ್ಕೆ ಬನ್ನೂರು ಗ್ರಾಮದ ಕೊಡುಗೆ ವಿಷಯ ಕುರಿತು ನಾಟಕ ಕರ್ತೃ, ಗ್ರಾಮ ಪಂಚಾಯತ್ ಬನ್ನೂರು ಸದಸ್ಯ ತಿಮ್ಮಪ್ಪ ಪೂಜಾರಿ ಮಾತನಾಡಿದರು. ತದನಂತರ ಕನ್ನಡದಲ್ಲೂ ಐ ಎಸ್ ಎ ಎಸ್ ಬರೆಯಿರಿ ಅಭಿಯಾನ ವಿಷಯ ಮಾಹಿತಿ ಕುರಿತು ಕ. ಸಾ. ಪ. ಪುತ್ತೂರು ಐ ಎ ಎಸ್ ದರ್ಶನ ಇದರ ಪ್ರೇರಕ ಭಾಷಣಕಾರ ಪ್ರಣವ್ ಭಟ್ ರಿಂದ ಕಾರ್ಯಾಗಾರ ನಡೆಯಿತು.


ಬಾಲ ಕವಿಗೋಷ್ಠಿ ಅಧ್ಯಕ್ಷತೆಯನ್ನು ಶ್ರೀ ರಾಮ ಪ್ರಥಮದರ್ಜೆ ಉಪನ್ಯಾಸಕಿ ರಶ್ಮಿತಾ ಸುರೇಶ್ ಜೋಗಿಬೆಟ್ಟು, ಬಾಲ ಕಥಾಗೋಷ್ಠಿ ಅಧ್ಯಕ್ಷತೆಯನ್ನು ಚಲನಚಿತ್ರ ಚಿತ್ರ ನಟ, ನಾಟಕ ಕಲಾವಿದ ಸತೀಶ್ ಬಲ್ಯಾಯ, ಸಾರ್ವಜನಿಕ ವಿಭಾಗದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷೆ ಶ್ರೀಕಲಾ ಕಾರಂತ್ ಅಳಿಕೆ ವಹಿಸಿದ್ದರು.

ಕವಿಗೋಷ್ಠಿಯಲ್ಲಿ ಸುನೀತಾ ಶ್ರೀರಾಮ್ ಕೊಯಿಲ, ಭರತ್ ವಳಾಲು, ಚಂದ್ರು. ಬಿ. ತಗೊಂಡ, ಪ್ರಣವ್ ಭಟ್, ಪ್ರಿಯಾ ಸುಳ್ಯ, ಸೌಜನ್ಯ ಬಿ. ಎಂ ಕೆಯ್ಯೂರು, ಅಪೂರ್ವ ಕಾರಂತ್ ದರ್ಬೆ, ರಶ್ಮಿತಾ ಸುರೇಶ್ ಜೋಗಿಬೆಟ್ಟು,ಹರ್ಷಿತ ಹರೀಶ್ ಕುಲಾಲ್ ಐವರ್ನಾಡು ಭಾಗವಹಿಸಿದ್ದರು. ವಿವಿಧ ಗೋಷ್ಠಿಗಳ ನಿರೂಪಣೆಯನ್ನು ಪ್ರಿಯಾ ಸುಳ್ಯ, ಹರ್ಷಿತ ಹರೀಶ್ ಕುಲಾಲ್ ಐವರ್ನಾಡು, ನವ್ಯ ಪುತ್ತೂರು, ವಿಂಧ್ಯಾ ಎಸ್ ರೈ ನಿರ್ವಹಿಸಿದರು.

LEAVE A REPLY

Please enter your comment!
Please enter your name here