ಪುತ್ತೂರು: ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಜನರಿಗೆ ಲಭ್ಯವಾಗಬೇಕು ಎಂಬ ಉದ್ದೆಶದಿಂದ ಪುತ್ತೂರು ಸವಣೂರು ಮುಖ್ಯ ರಸ್ತೆಯ ಸರ್ವೆ ಎಂಬಲ್ಲಿಯ ಗೋಪಿಕಾ ಸಂಕೀರ್ಣದಲ್ಲಿ ಕ್ಷೇಮ ಚಿಕಿತ್ಸಾಲಯವು ಫೆ.1ರಂದು ಶುಭಾರಂಭಗೊಂಡಿತು. ಕಾನಾವು ಸ್ಕಿನ್ ಕ್ಲಿನಿಕ್ ನ ಡಾ.ನರಸಿಂಹ ಶರ್ಮ ದೀಪ ಬೆಳಗಿಸಿ ಚಿಕಿತ್ಸಾಲಯವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಂಡೂರು ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಎನ್. ಯಸ್.ಡಿ. ಕುಕ್ಕುಜೆ ಕೃಷ್ಣಭಟ್, ಡಾ. ಆದಿತ್ಯನಾರಾಯಣ ಭಟ್ ಅವರ ತಂದೆ ಕುಮಾರ ಸುಬ್ರಹ್ಮಣ್ಯ ಮುಳಿಯಾಲ, ತಾಯಿ ಸರ್ವೇಶ್ವರಿ, ಮತ್ತು ಊರ ಗಣ್ಯರು ಬಂಧು ಮಿತ್ರರು ಉಪಸ್ಥಿತರಿದ್ದರು.
ಬೆಳಗ್ಗೆ ವೇ.ಮೂ.ಮಿತ್ತೂರು ತಿರುಮಲೇಶ್ವರ ಭಟ್ ದಾಸಮೂಲೆ ಗಣಪತಿ ಹವನ ನೆರವೇರಿಸಿ ಕೊಟ್ಟರು. ಡಾ.ಆದಿತ್ಯನಾರಾಯಣ ಭಟ್ ಮಾತನಾಡಿ ಸಾಯಂಕಾಲ 5 ಗಂಟೆಯಿಂದ ರಾತ್ರೆ 9ರ ತನಕ, ಹಾಗೂ ಆದಿತ್ಯವಾರದಂದು ಬೆಳಿಗ್ಗೆ 8ರಿಂದ 1ರ ತನಕ, ಅಪರಾಹ್ನ 3ರಿಂದ ರಾತ್ರಿ 8.30ರ ತನಕ ಚಿಕಿತ್ಸೆಗೆ ಲಭ್ಯವಿರುವುದಾಗಿ ತಿಳಿಸಿ ಇದರ ಸದುಪಯೋಗವನ್ನು ಗ್ರಾಮದ ಜನತೆ ಪಡೆದುಕೊಳ್ಳುವಂತೆ ತಿಳಿಸಿದರು.