ಬಲ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಸುಜ್ಞಾನ ರಂಗಮಂದಿರ ಉದ್ಘಾಟನೆ

0

ಕಡಬ: ಬಲ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ಹಾಗೂ ಪೂರ್ವ ವಿದ್ಯಾರ್ಥಿಗಳು ಹಾಗೂ ಬಲ್ಯ ಶಾಲೆಯ ಸಮಸ್ತ ವಿದ್ಯಾಭಿಮಾನಿಗಳ ಸಹಕಾರದಿಂದ ಸುಮಾರು ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ನೂತನ ರಂಗಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನೂತನ ಪ್ರತಿಭಾ ಸುಜ್ಞಾನ ರಂಗಮಂದಿರವನ್ನು ಶ್ರೀ ಬಿ.ಎಂ ಲಿಂಗಪ್ಪ ಗೌಡ ಬಾಬ್ಲುಬೆಟ್ಟು ಅವರು ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಕುಟ್ರುಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮನಾರವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ನೂತನ ರಂಗಮಂದಿರ ನಿರ್ಮಾಣದ ಶ್ರಮಿಕರಿಗೆ ಗೌರವಾರ್ಪಣೆ, ನೂತನ ರಂಗ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಹಾಗೂ ಶಾಲೆಗೆ ವಸ್ತುರೂಪದ ಕೊಡುಗೆ ನೀಡಿದವರಿಗೆ ಗೌರವಾರ್ಪಣೆ ನಡೆಯಿತು. ಪೂರ್ವ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಡೆದ ಕ್ರೀಡಾಸಂಭ್ರಮ 2023-24 ಕ್ರೀಡಾಕೂಟದ ಬಹುಮಾನ ವಿತರಣೆ, ಪೂರ್ವ ವಿದ್ಯಾರ್ಥಿ ಸಂಘದ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಹಾಗೂ ನೂತನ ರಂಗಮಂದಿರ ಸಮಿತಿಯ ಅಧ್ಯಕ್ಷರಾದ ಬಿ ಎಂ ಪೂರ್ಣೇಶ್ ಗೌಡ ಬಾಬ್ಲುಬೆಟ್ಟು ರವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಶಾಲೆಯ ಪೂರ್ವ ವಿದ್ಯಾರ್ಥಿ, ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಗುಡ್ಡಪ್ಪ ಗೌಡ ನೆಲ್ಲ-ಬಲ್ಯ ಇವರು ದಿಕ್ಸೂಚಿ ಭಾಷಣ ಮಾಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ವಿಲ್ಸನ್ ವಿ. ಟಿ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಮೀನಾಕ್ಷಿ ನೆಲ್ಲ, ಪ್ರಕಾಶ್ ಬಾಕಿಲ, ಪುಷ್ಪಾ.ಕೆ, ತುಕ್ರಪ್ಪ ನೆಲ್ಲ , ಕೆ.ಆರ್. ಆಚಾರ್ಯ ಪುತ್ತೂರು, ವಾಣಿ ನಾಗೇಶ್ ಬನಾರಿ, ರವಿ ಪ್ರಸಾದ್ ಆಲಾಜೆ, ನಾರಾಯಣ ಕೊಲ್ಲಿಮಾರು, ವಿಮಲ್ ಕುಮಾರ್ ನೆಲ್ಯಾಡಿ, ಸತೀಶ್ಚಂದ್ರ ಶೆಟ್ಟಿ, ಶೇಖರ ಗೌಡ ದೇರಾಜೆ, ಕೊರಗಪ್ಪ ಗೌಡ ಪುಳಿತ್ತಡಿ, ತಿಮ್ಮಣ್ಣ ಭಟ್ ದೇವರಡ್ಕ , ಅಮ್ಮಣಿ , ಜನಾರ್ದನ ಗೌಡ , ಹಾಗೂ ಶಾಲಾ ನಾಯಕ ಧನುಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 600ಕ್ಕಿಂತ ಹೆಚ್ಚು ಜನ , ಪೂರ್ವ ವಿದ್ಯಾರ್ಥಿಗಳು, ಊರ ಪರ ಊರ ಶಾಲಾ ವಿದ್ಯಾಭಿಮಾನಿಗಳು, ಗಣ್ಯರು ಭಾಗವಹಿಸಿದ್ದರು .ಈ ಹಿಂದೆ ಬಲ್ಯ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಗುರುಗಳಾದ ರುಕ್ಮಿಣಿ ಪಿಜಕಳ, ಪೆರ್ಗಡೆ ಗೌಡ ದೇರಾಜೆ, ಅಚ್ಚಮ್ಮ, ಜಿ. ಮಾಯಿಲಪ್ಪ ಇವರನ್ನು ಗೌರವಿಸಲಾಯಿತು. ನೂತನ ರಂಗಮಂದಿರಕ್ಕೆ ಹಾಗೂ ಶಾಲೆಗೆ ವಿಶೇಷವಾಗಿ ಸಹಕರಿಸಿದ ಹಲವಾರು ಜನರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಮತ್ತು ಪೂರ್ವ ವಿದ್ಯಾರ್ಥಿಗಳಿಂದ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ. ಕೆ ಸ್ವಾಗತಿಸಿ, ರಂಗ ಮಂದಿರ ನಿರ್ಮಾಣ ಸಮಿತಿಯ ಕೋಶಾಧಿಕಾರಿ ಗಣೇಶ್ ಭಟ್ ದೇವರಡ್ಕ ವಂದಿಸಿದರು, ಶೇಖರಗೌಡ ಪನ್ಯಾಡಿ ಕಾರ್ಯಕ್ರಮ ನಿರೂಪಿಸಿದರು, ರಂಗಮಂದಿರ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಉದಯ್ ಕುಮಾರ್ ಪುತ್ತಿಲ ಹಾಗೂ ಶಾಲಾ ಶಿಕ್ಷಕಿಯರು ಸಹಕರಿಸಿದರು.

LEAVE A REPLY

Please enter your comment!
Please enter your name here