ಆಲಂಕಾರು ಶ್ರೀ ದುರ್ಗಾಂಬಾ ಪ.ಪೂ ಕಾಲೇಜು- ಆಡಳಿತ ಅಧಿಕಾರಿಯಾಗಿ ಶ್ರೀಪತಿ ರಾವ್ ಎಚ್ ,ಮುಖ್ಯಗುರುಗಳಾಗಿ ನವೀನ್ ರೈ,ಪ್ರಾಂಶುಪಾಲೆಯಾಗಿ ರೂಪಾ ಎಂ.ಟಿ ನೇಮಕ

0

ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಆಡಳಿತ ಅಧಿಕಾರಿಯಾಗಿ ಶ್ರೀಪತಿ ರಾವ್ ಎಚ್ ಅವರನ್ನು ಆಡಳಿತ ಮಂಡಳಿ ನೇಮಕ ಮಾಡಿದೆ.
ಇದೇ ಸಂದರ್ಭದಲ್ಲಿ ಶ್ರೀ ದುರ್ಗಾಂಬಾ ಪ್ರೌಢ ಶಾಲೆಯಲ್ಲಿ ನಿವೃತ್ತಿಯಿಂದ ತೆರವಾದ ಮುಖ್ಯ ಗುರುಗಳ ಹುದ್ದೆಗೆ ನವೀನ್ ರೈ ಹಾಗೂ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿಗೆ ಪ್ರಾಂಶುಪಾಲೆ ರೂಪ ಎಂ ಟಿ ಅವರನ್ನು ಆಡಳಿತ ಮಂಡಳಿ ನೇಮಕ ಮಾಡಿದೆ.

ಕಾಲೇಜು ವಿಭಾಗದಲ್ಲಿ ಉಪ ಪ್ರಾಂಶುಪಾಲರಾಗಿ ಆಂಗ್ಲ ಭಾಷಾ ಉಪನ್ಯಾಸಕ ನಾರಾಯಣ ಗೌಡ ಹಾಗೂ ಪ್ರೌಢ ಶಾಲೆಯಲ್ಲಿ ಮುಖ್ಯ ಗುರುಗಳ ಅನುಪಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಲು ಮಹೇಶ್ ಲಮಾಣಿ ಪದವೀಧರ ಸಹ ಶಿಕ್ಷಕರು ಹಿಂದಿ ಅವರನ್ನು ನೇಮಕ ಮಾಡಲಾಯಿತು. ನೂತನವಾಗಿ ಆಯ್ಕೆ ಮಾಡಲಾದ ಇವರಿಗೆ ಆಡಳಿತ ಮಂಡಳಿಯ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ, ಆಡಳಿತ ಮಂಡಳಿ ಸದಸ್ಯರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗ, ದಯಾನಂದ ಗೌಡ ಆಲಡ್ಕ, ವಿಜಯ ಕುಮಾರ್ ರೈ ಮನವಳಿಕೆ, ತಾರನಾಥ ರೈ ನಗ್ರಿ, ರಾಮರಾಜ ನಗ್ರಿ, ಇಂದುಶೇಖರ ಶೆಟ್ಟಿ ಕುಕ್ಕೇರಿ, ಹೇಮಂತ್ ರೈ ಮನವಳಿಕೆ, ಶುಭ ಹಾರೈಸಿದರು

LEAVE A REPLY

Please enter your comment!
Please enter your name here