ಕಾಣಿಯೂರು ಗ್ರಾ.ಪಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ರಘು ಎನ್.ಬಿ ಅಧಿಕಾರ ಸ್ವೀಕಾರ

0

ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯಾಗಿ ಸುಬ್ರಹ್ಮಣ್ಯದ ರಘು ಎನ್.ಬಿ ಅಧಿಕಾರ ಸ್ವೀಕರಿಸಿದ್ದಾರೆ. ಕಾಣಿಯೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿಯಾಗಿದ್ದ ಎಂ ದೇವರಾಜ್ ರವರು ಜ. 31ರಂದು ಸೇವಾ ನಿವೃತ್ತಿಗೊಂಡ ಹಿನ್ನಲೆಯಲ್ಲಿ ಗ್ರಾ.ಪಂ, ನ ಅಭಿವೃದ್ಧಿ ಅಧಿಕಾರಿಯಾಗಿ ಪ್ರಸ್ತುತ ಬಳ್ಪ ಗ್ರಾಮ ಪಂಚಾಯತ್ ಕಾರ್ಯದರ್ಶಿ ರಘು ಎನ್.ಬಿ ಅವರನ್ನು ನೇಮಕಗೊಳಿಸಿ ಅದೇಶಿಸಿದ್ದಾರೆ. ಕಾಣಿಯೂರು ಗ್ರಾ.ಪಂ.ನಲ್ಲಿ ವಾರದಲ್ಲಿ ಮೂರು ದಿವಸ ಕರ್ತವ್ಯ ನಿರ್ವಹಿಸಲಿದ್ದಾರೆ.

ರಘು ಎನ್. ಬಿ


ಅಧಿಕಾರ ಹಸ್ತಾಂತರ:
ಕಾಣಿಯೂರು ಗ್ರಾ.ಪಂ. ನ ನೂತನ ಪಂಚಾಯತ್ ಅಭಿವೃದ್ಧಿಯಾಗಿ ನೇಮಕಗೊಂಡಿರುವ ರಘು ಎನ್. ಬಿ ಅವರಿಗೆ ನಿವೃತ್ತಿಗೊಂಡಿರುವ ಪಿಡಿಓ ದೇವರಾಜ್ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಗ್ರಾ. ಪಂ. ಸದಸ್ಯ ಗಣೇಶ್ ಉದನಡ್ಕ, ಪಂಚಾಯತ್ ಸಿಬ್ಬಂದಿಗಳಾದ ತಿಮ್ಮಪ್ಪ ಗೌಡ ಬಿರುಕುಡಿಕೆ, ಚಿತ್ರಾ, ಕುಮಾರ್, ಶಶಿಕಲಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here