ಪುತ್ತೂರು: ಪವರ್ ಸ್ಕೂಲ್ ಮತ್ತು ಇಂಡಿಯಾ ಸುಧಾರ್ ಕಂಪನಿಗಳ ಸಹಯೋಗದೊಂದಿಗೆ ತರಗತಿಯ ಸೌಂದರ್ಯೀಕರಣ ಮತ್ತು ಸುಮಾರು 2 ಲಕ್ಷ ಮೌಲ್ಯದ ಎರಡು ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಶಾಂತಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿದರು. ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಫೆ.2 ರಂದು ನಡೆಯಿತು.
ನರಿಮೊಗರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಹರಿಣಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಂಪನಿಗಳ ನಿರ್ದೇಶಕರುಗಳಾದ ಪ್ರಕಾಶ್ ಸೆಲ್ಲಪ್ಪನ್, ಸೌಂದರಾಜನ್ ವೆಂಕಟರಮಣಿ , ದಿನೇಶ್ ಪುರುಷೋತ್ತಮನ್ ಹಾಗೂ ಹಿರಿಯ ಅಭಿಯಂತರರಾದ ಪದ್ಮಿನಿರವರುಗಳು ಶಾಲಾ ಮುಖ್ಯ ಗುರು ಸವಿತಾರವರಿಗೆ ಕೊಡುಗೆಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ವೇಗಸ್ , ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಮೇಶ್, ಸದಸ್ಯರುಗಳಾದ ನಾಗಮ್ಮ ಬಾಲಕೃಷ್ಣ ಗೌಡ ತೋಟ, ಸುಧಾಕರ್ ಕುಲಾಲ್ , ಸುಧೀರ್ ರೈ ಕುದುರೆಪ್ಪಾಡಿ, ಎಸ್ ಡಿ ಎಂ ಸಿ ಅಧ್ಯಕ್ಷ ಯೋಗೀಶ್ ಪಿ ನಾಯ್ಕ್, ಉಪಾಧ್ಯಕ್ಷ ನಾಗೇಶ್ ಸಾರಕೆರೆ , ಎಸ್‌ಡಿಎಂಸಿ ಸದಸ್ಯರುಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯಗುರು ಸವಿತಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ಕೃಷ್ಣವೇಣಿ ಕೆ ಪಿ ಭಟ್ ಸ್ವಾಗತಿಸಿ, ಸಹ ಶಿಕ್ಷಕ ಸುನಿಲ್ ಎಂ.ಆರ್ ವಂದಿಸಿದರು.ಸಹ ಶಿಕ್ಷಕಿ ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು.