ಕಾವು: ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸತತವಾಗಿ 23 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೃಷ್ಣಪ್ರಸಾದ್ ಕೊಚ್ಚಿರವರಿಗೆ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮವು ಫೆ.3ರಂದು ಕಾವು ಸಹಕಾರ ಸಂಘದ ಶಿವಸದನ ಸಭಾಭವನದಲ್ಲಿ ನಡೆಯಿತು.
ಸಂಘದ ಸ್ಥಾಪಕಾಧ್ಯಕ್ಷ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ನನ್ಯ ಅಚ್ಚುತ ಮೂಡೆತ್ತಾಯರವರು ಅಭಿನಂದನಾ ಭಾಷಣ ಮಾಡಿದರು. ಸಂಘದ ಅಧ್ಯಕ್ಷ ಚಂದ್ರಶೇಖರ್ ರಾವ್ ನಿಧಿಮುಂಡರವರು ಸಭಾಧ್ಯಕ್ಷತೆ ವಹಿಸಿದ್ದರು. ಕೆಎಂಎಫ್ ನಿರ್ದೇಶಕ ನಾರಾಯಣ ಪ್ರಕಾಶ್, ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್, ಪಶುವೈದ್ಯ ಡಾ. ಅನುದೀಪ್, ವಿಸ್ತರಣಾಧಿಕಾರಿ ಮಾಲತಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ, ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ಬಾಲಕೃಷ್ಣ ಕೆದಿಲಾಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಚಂದ್ರಶೇಖರ್ ರಾವ್ ನಿಧಿಮುಂಡ ಸ್ವಾಗತಿಸಿ, ನಿರ್ದೇಶಕ ದಿವ್ಯನಾಥ ಶೆಟ್ಟಿ ಕಾವು ವಂದಿಸಿದರು. ಸುನೀಲ್ ನಿಧಿಮುಂಡ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ನಿರ್ದೇಶಕರಾದ ಜಗನ್ನೀವಾಸ ನಿಧಿಮುಂಡ, ದಿವಾಕರ ಪ್ರಭು, ದಿವ್ಯನಾಥ ಶೆಟ್ಟಿ, ಚಂದ್ರಶೇಖರ ಪಿ, ನಾರಾಯಣ ರೈ, ನಾರಾಯಣಶರ್ಮ, ನಿರ್ಮಲಾ, ಚಂದ್ರಾವತಿ, ಪ್ರಭಾರ ಕಾರ್ಯದರ್ಶಿ ಸುಪ್ರೀತ್ ಕುಮಾರ್ ರವರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಕಾರ್ಯಕ್ರಮದ ಬಳಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಅಭಿನಂದನೆ :
ಸಂಘದಲ್ಲಿ ಸತತವಾಗಿ ಕಳೆದ 23 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೃಷ್ಣಪ್ರಸಾದ್ ಕೊಚ್ಚಿಯವರಿಗೆ ಅವರ ಪತ್ನಿ ಗೀತಾ ಪ್ರಸಾದ್ ರವರ ಜತೆಯಲ್ಲಿ ಸಂಘದ ವತಿಯಿಂದ ಶಾಲು ಹೊದಿಸಿ ಪೇಟ ತೊಡಿಸಿ, ಹೂವಿನ ಹಾರ ಹಾಕಿ ಫಲಪುಷ್ಪ ಸ್ಮರಣಿಕೆ ನೀಡಿ, ಹಾಲಿನ ಉತ್ಪನ್ನಗಳನ್ನು ನೀಡಿ ಗೌರವಿಸಲಾಯಿತು.