ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಶಾಲಾ ವಾರ್ಷಿಕೋತ್ಸವ

0

ವಿಟ್ಲ: ಜನಪ್ರಿಯ ಸಂಸ್ಥೆಯ ಹಿಂದಿರುವ ವ್ಯಕ್ತಿಯ ಬಗ್ಗೆ ಬಹಳಷ್ಟು ಗೌರವವಿದೆ. ವಿದ್ಯೆ ಆರೋಗ್ಯ ವಿಚಾರದಲ್ಲಿ ನಾವಿಬ್ಬರು ಜೊತೆಯಾಗಿ‌ ಸಾಗುತ್ತಿರುವವರು.
ಪ್ರತಿಯೊಬ್ಬ ಮನುಷ್ಯನಿಗೂ ವಿದ್ಯೆ, ಆರೋಗ್ಯ ಅತೀ ಮುಖ್ಯ. ಪ್ರತಿಯೊಬ್ಬರು ವಿದ್ಯಾವಂತ, ಆರೋಗ್ಯವಂತರಾಗಿದ್ದರೆ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ನೀಡುವ ಕೆಲಸ ಈ ಸಂಸ್ಥೆಯಿಂದ ಆಗುತ್ತಿರುವುದು ಅಭಿನಂದನೀಯ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮೋಹನ್ ಆಳ್ವರವರು ಹೇಳಿದರು.
ಅವರು ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ʼನಭಾ-2024ʼನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶಕ್ಕೆ ಸಾವಿರಾರು ವರುಷಗಳ ಇತಿಹಾಸವಿದೆ. ದೇಶ ಸಮಗ್ರ ಬೆಳವಣಿಗೆಯಾಗಿದೆ. ಯುವಶಕ್ತಿಗಳಿಗೆ ಉತ್ತಮ ಮಾರ್ಗದರ್ಶನ ಅಗತ್ಯ. ದೇಶದಲ್ಲಿ ಕಂದಕಗಳು ಸೃಷ್ಠಿಯಾಗುತ್ತಿದೆ. ಕೇಂದ್ರ ರಾಜ್ಯ ಸರಕಾರದ ಮೇಲೆ ನಮಗೆ ಅಪಾರ ಗೌರವವಿದೆ. ಖಾಸಗಿ ವ್ಯಕ್ತಿಗಳು ಸಾಮಾಜಿಕ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದ್ಯೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬದ್ರಿಯಾ ಕುಟುಂಬ ಮಾಡುತ್ತಿರುವ ಕೆಲಸ ಅಭಿನಂದನೀಯವಾಗಿದೆ. ಖಾಸಗಿ ವಿದ್ಯಾಸಂಸ್ಥೆಗಳು ವ್ಯಾಪಾರೀಕರಣ ಮಾಡುತ್ತಿಲ್ಲ. ನಮ್ಮ ವಿದ್ಯಾಸಂಸ್ಥೆಗಳನ್ನು ಕಾಲಘಟ್ಟಕ್ಕೆ ತಕ್ಕಂತೆ ಬದಲಾವಣೆ ತರಬೇಕಾಗಿರುವುದು ಅನಿವಾರ್ಯ. ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾಗಿರುವುದು ಪೋಷಕರ ಕರ್ತವ್ಯ. ಮಕ್ಕಳ ಪ್ರಾಥಮಿಕ, ಪ್ರೌಢ ಶಿಕ್ಷಣ ಉತ್ತಮವಾದರೆ ಯೋಜನೆ ಅನುಷ್ಠಾನ ಮಾಡಲು ಸಾಧ್ಯ. ಮಕ್ಕಳ ವೈಫಲ್ಯವನ್ನು ತಿದ್ದಬೇಕಾದುದು ಪೋಷಕರ ಕರ್ತವ್ಯ. ಸಾಮಾಜಿಕ ಜಾಲತಾಣದಿಂದ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ವಿದ್ಯಾಸಂಸ್ಥೆ ಕಟ್ಟುವ ನಾವು ಬಹಳಷ್ಟು ಎಚ್ಚರದಿಂದ ಇರಬೇಕಾಗುತ್ತದೆ. ಮತ ಧರ್ಮದಲ್ಲಿ ನಾವು ಸದಾ ಎಚ್ಚರದಿಂದ ಇರಬೇಕು. ಪ್ರತಿಯೋರ್ವರನ್ನು ಗೌರವಿಸುವುದು ಅತೀ ಅಗತ್ಯ. ನಮ್ಮ ಪೂರ್ವಜರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರು ಮುನ್ನಡೆಯೋಣ. ಪ್ರೀತಿ ಇದ್ದೆಡೆ ಧ್ವೇಷವಿಲ್ಲ. ನಮ್ಮ ಧರ್ಮ ಮತವನ್ನು ಅರಿತು ಬಾಳುವುದು ಅಗತ್ಯ. ಮಕ್ಕಳಿಗೆ ಸೌಂದರ್ಯ ಪ್ರಜ್ಞೆ ಅಗತ್ಯ ಎಂದರು.

ಎಸ್.ಎಂ.ಆರ್ ಗ್ರೂಪ್ಸ್ ನ ಆಡಳಿತ ನಿರ್ದೇಶಕರಾದ ಎಸ್.ಎಂ. ರಶೀದ್ ಹಾಜಿರವರು ಮಾತನಾಡಿ ಬಶೀರ್ ಅವರ ಹೆಸರೇ ಬಹಳ ಜನಪ್ರೀಯವಾಗಿದೆ. ಶಾಲೆಯ ವ್ಯವಸ್ಥೆ ಬಹಳಷ್ಟು ಸುಂದರವಾಗಿದೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ. ಶಿಕ್ಷಣದಲ್ಲಿ ಕ್ವಾಲಿಟಿ ಅಗತ್ಯ. ಶಾಲೆಗಳು ಜಾತ್ಯಾತೀತವಾಗಿರಬೇಕು ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಂ.ಎಸ್.ಮಹಮ್ಮದ್ ರವರು ಮಾತನಾಡಿ, ಬಹಳಷ್ಟು ಸಂಭ್ರಮದ ಕಾರ್ಯಕ್ರಮವಿದು. ಪೇಟೆ ಪಟ್ಟಣಗಳಲ್ಲಿ ನಡೆಯುವ ಶೈಲಿಯ ಕಾರ್ಯಕ್ರಮ ಕಂಬಳಬೆಟ್ಟುವಿನಲ್ಲಿ ನಡೆಯುತ್ತಿದೆ. ಸಾಮಾಜಿಕ ಕೆಲಸದಲ್ಲಿ ಬದ್ರಿಯ ಕುಟುಂಬದ ಸಾಧನೆ ಅಪಾರ, ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಬದ್ರಿಯಾ ಕುಟುಂಬದ ಸದಸ್ಯರು ನಡೆಯುತ್ತಿದ್ದಾರೆ‌. ಡಾ. ಅಬ್ದುಲ್ ಬಶೀರ್ ರವರ ಇಚ್ಚಾಶಕ್ತಿಯಿಂದ ಅವರು ಇಷ್ಟೊಂದು ಮೇಲಕ್ಕೇರಲು ಸಾಧ್ಯವಾಗಿದೆ. ನಾವು ಊಹಿಸದ ರೀತಿಯಲ್ಲಿ ಸಂಸ್ಥೆ ಬೆಳೆದುನಿಂತಿದೆ. ಡಾ.ಅಬ್ದುಲ್ ಬಶೀರ್ ರವರ ಉದ್ದೇಶ ಸಾರ್ಥಕತೆಯನ್ನು ಪಡೆಯುವಂತಾಗಿದೆ. ಉದ್ದೇಶ ಉತ್ತಮವಾಗಿದ್ದರೆ ಯಶಸ್ಸು ಸಾಧ್ಯ. ಪೋಷಕರು ಮಕ್ಕಳಿಗೆ ಸಂಪತ್ತು ಮಾಡಿಡುವ ಬದಲು ಅವರನ್ನೇ ಸಂಪತ್ತನ್ನಾಗಿ ಮಾಡಿ. ಮಕ್ಕಳಿಗೆ ಶಿಸ್ತನ್ನು ಕಲಿಸುವ ಕೆಲಸ ಅತೀ ಅಗತ್ಯ ಎಂದರು.

ಜನಪ್ರಿಯ ಶಾಲಾ ಅಧ್ಯಕ್ಷರಾದ ಫಾತಿಮ ನಸ್ರೀನ ಬಶೀರ್, ಜನಪ್ರಿಯ ಫೌಂಡೇಶನ್ ನ ನಿರ್ದೇಶಕರಾದ ಕಿರಾಶ್ ಪರ್ತಿಪ್ಪಾಡಿ, ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನಿರ್ದೇಶಕರಾದ ನೌಶೀನ್ ಬದ್ರಿಯಾ, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ‌ ಬದ್ರಿಯಾ, ಮಂಗಳೂರು ಜನಪ್ರೀಯ ಆಸ್ಪತ್ರೆಯ ನಿರ್ದೇಶಕರಾದ
ಡಾ.ಮಹಮ್ಮದ್ ನೂಮಾನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಯರಾದ ಲಿಬಿನ್ ಕ್ಸೇವಿಯರ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಶಾಲಾ ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಸ್ವಾಗತಿಸಿದರು. ಯುನೈಟೆಡ್ ನೇಷನ್ಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಡಾ. ರವಿ ಕುಮಾರ್ ಎಲ್.ಪಿ. ವಂದಿಸಿದರು.

ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಕೆಲಸ ಮಾಡುತ್ತಾ ಬಂದಿದ್ದೇವೆ
ಎಲ್ಲಾ ಜಾತಿಯವರು ಸರ್ವ ಸಮಾನರು. ಸಮಾಜದ ಸರ್ವ ಜಾತಿಯವರನ್ನು ಸಮಾನವಾಗಿ ಕಾಣುವವರು ನಾವು. ವೈದ್ಯನಾಗಿ ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ನನ್ನಿಂದ ಆಗುವ ಸಹಕಾರವನ್ನು ಸಮಾಜಕ್ಕೆ ನೀಡುತ್ತಾ ಬರುತ್ತಿದ್ದೇನೆ. ದುಡ್ಡು ಮಾಡುವ ದೃಷ್ಟಿಯಿಂದ ಸಂಸ್ಥೆಯ ಹುಟ್ಟಾಗಿಲ್ಲ. ಗ್ರಾಮೀಣ ಭಾಗದ ಜನರಿಗೆ ಅತೀ ಖಡಿಮೆ ಮೊತ್ತದಲ್ಲಿ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುವ ನಿಟ್ಟಿನಲ್ಲಿ ಈ ಸಂಸ್ಥೆಯ‌ನ್ನು ಹುಟ್ಟುಹಾಕಿದ್ದೇನೆ. ಈ ಭಾಗದ ಜನರು ನಮಗೆ ಆರಂಭದ ದಿನಗಳಿಂದಲೂ ಉತ್ತಮ ರೀತಿಯಲ್ಲಿ ಸಹಕಾರವನ್ನು ನೀಡುತ್ತಾ ಬಂದಿದ್ದೀರಿ. ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಮನುಷ್ಯನಲ್ಲಿರುವ ಉತ್ತಮ ಗುಣಗಳು ಆತನನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.
ಡಾ. ಅಬ್ದುಲ್ ಬಶೀರ್ ವಿ.ಕೆ.
ಅಧ್ಯಕ್ಷರು, ಜನಪ್ರಿಯ ಫೌಂಡೇಶನ್

LEAVE A REPLY

Please enter your comment!
Please enter your name here