ಪುತ್ತೂರು: ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಂಕೀರ್ಣದಲ್ಲಿರುವ ವಿಜಯ ಹೋಮಿಯೋ ಕ್ಲಿನಿಕ್ ನ 4ನೇ ವರ್ಷದ ಪಾದಾರ್ಪಣೆಯ ಅಂಗವಾಗಿ ಫೆ.8ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರ ವರೆಗೆ ಉಚಿತ ವೈದ್ಯಕೀಯ ಸಮಾಲೋಚನಾ ಕಾರ್ಯಕ್ರಮ ಜರುಗಲಿದೆ. ಕೆಮ್ಮು, ನೆಗಡಿ, ಜ್ವರ, ಆಸ್ತಮಾ, ಚರ್ಮದ ಸಮಸ್ಯೆಗಳು, ಅಜೀರ್ಣ (ಗ್ಯಾಸ್ಟ್ರಿಕ್), ಸಂಧಿವಾತ, ಮಧುಮೇಹ, ಬಿ.ಪಿ, ಥೈರಾಯಿಡ್ ಸಮಸ್ಯೆ, ಮೂತ್ರ ಹಾಗೂ ಪಿತ್ತಕೋಶದ ಕಲ್ಲು, ಕೂದಲು ಉದುರುವಿಕೆ, ಮಕ್ಕಳ ಖಾಯಿಲೆ, ಸ್ತ್ರೀ ರೋಗ, ಮೂಲವ್ಯಾಧಿ, ಮೂರ್ಛೆರೋಗ, ಬೆನ್ನು ಮೂಳೆಯ ಸಮಸ್ಯೆಗಳು, ನಿದ್ರಾಹೀನತೆ, ಮಾನಸಿಕ ತೊಂದರೆಗಳು ಮುಂತಾದವುಗಳಿಗೆ ಉಚಿತ ಸಮಾಲೋಚನೆ ಲಭ್ಯವಿರುತ್ತದೆ. ಔಷಧಿ ಶುಲ್ಕ ಅನ್ವಯಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಡಾ. ಎಂ. ಡಿ ಶೆಣೈ- 8105703455 ಹಾಗೂ ಡಾ. ವರ್ಷಿಣಿ ಶೆಣೈ – 9740681381ನ್ನು ಸಂಪರ್ಕಿಸಬಹುದೆಂದು ಡಾ. ಎಂ. ಡಿ ಶೆಣೈ ತಿಳಿಸಿದ್ದಾರೆ.