ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ ಫೆ.3ರಂದು ಕಿಡ್ಸ್ ಫೆಸ್ಟ್ 2024(ಮಕ್ಕಳ ಹಬ್ಬ) ವಿಜ್ರಂಭಣೆಯಿಂದ ನಡೆಯಿತು. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಅವರು ದೀಪ ಬೆಳಗಿಸಿ ಕಿಡ್ಸ್ ಫೆಸ್ಟ್‌ಗೆ ಚಾಲನೆ ನೀಡಿ ಶುಭಹಾರೈಸಿದರು. ನಂತರ ಮಕ್ಕಳಿಗಾಗಿ ರಿಂಗ್ ತ್ರೋ, ಬಲೂನ್ ಬ್ಲಾಸ್ಟಿಂಗ್, ಡ್ರಾಯಿಂಗ್ ಮತ್ತು ಪೈಂಟಿಂಗ್, ನಂಬರ್ ಶೂಟ್, ಬ್ಲೋವಿಂಗ್ ಬಬಲ್ಸ್ ಹಾಗೂ ವಿವಿಧ ರೀತಿಯ ಸ್ಪರ್ಧೆಗಳು ನಡೆಯಿತು.
ಪುಟಾಣಿ ಮಕ್ಕಳು ತಮ್ಮ ಹೆತ್ತವರೊಂದಿಗೆ ಆಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ವಿಶೇಷ ಆಕರ್ಷಣೆಯಾಗಿ ನಡೆದ ಆಹಾರ ಮೇಳದಲ್ಲಿ ಪೋಷಕರೇ ತಯಾರಿಸಿದ ಎಳ್ಳು ಜ್ಯೂಸ್, ಸಿಹಿ ಖಾದ್ಯಗಳು, ಕ್ಯಾರೆಟ್ ಹಲ್ವಾ, ಪುದೀನಾ ಜ್ಯೂಸ್, ಕಲ್ಲಂಗಡಿ ಜ್ಯೂಸ್, ಕಲ್ಲಂಗಡಿ, ಪೈನಾಪಲ್ ಸ್ಟಾಲ್, ಪಾನಿಪುರಿ, ಮಸಾಲಪುರಿ, ತರಕಾರಿಗಳು, ಫ್ರುಟ್ಸ್ ಸಲಾಡ್, ಮಸಾಲ ಮಜ್ಜಿಗೆ ಹಾಗೂ ವಿವಿಧ ಬಗೆಯ ಆಹಾರ ಪದಾರ್ಥಗಳ ಮಾರಾಟವೂ ಭರ್ಜರಿಯಾಗಿ ನಡೆಯಿತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ರಾಮಕುಂಜ ಗ್ರಾ.ಪಂ.ಪಿಡಿಒ ಲಲಿತಾ ಜಿ.ಡಿ., ಕಸಾಪ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ ರಾಮಕುಂಜ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ರಾಮಕುಂಜ ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಾಲತಿ ಕದ್ರ, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಪ್ರಶಾಂತ್ ಆರ್., ಕೆ.ಮಹಾಲಿಂಗೇಶ್ವರ ಭಟ್, ಉಮೇಶ್, ಗುಮ್ಮಣ್ಣ ಗೌಡ, ಶೀನಪ್ಪ ಗೌಡ, ಕುಶಾಲಪ್ಪ ಗೌಡ, ದೇವಿಪ್ರಸಾದ್, ನಾಗಪ್ಪ ಗೌಡ ಮರುವಂತಿಲ ಅವರು ಶುಭಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾರ್ಗದರ್ಶನ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ಎ., ಸಂಸ್ಥೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಸಹಕರಿಸಿದರು.