ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾಪೂಜೆ , ಕರಸೇವಕರಿಗೆ ಸನ್ಮಾನ
ಪುತ್ತೂರು: ಕೆದಂಬಾಡಿ ಗ್ರಾಮದ ಕೆರೆಮೂಲೆ ನಿವಾಸಿ ರಾಘವ ಗೌಡ ಕೆರೆಮೂಲೆ ಮತ್ತು ರೇಖಾ ರಾಘವ ಗೌಡರವರ ವೈವಾಹಿಕ ಜೀವನದ 25 ನೇ ವರ್ಷದ ಸಂಭ್ರಮಾಚರಣೆ ಫೆ.4 ರಂದು ನಡೆಯಿತು. ಕೆರೆಮೂಲೆ ಮನೆಯಲ್ಲಿ ನಡೆದ ಈ ಸಂಭ್ರಮಾಚರಣೆಯಲ್ಲಿ ಫೆ.3 ರಂದು ಸಂಜೆ ಕೃಷ್ಣ ಕುಮಾರ್ ಉಪಾಧ್ಯಾಯ ಪಟ್ಲಮೂಲೆಯವರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ದುರ್ಗಾಪೂಜೆ ನಡೆಯಿತು. ಫೆ.4 ರಂದು ವೈವಾಹಿಕ ಜೀವನದ 25 ರ ಸಂಭ್ರಮಾಚರಣೆ, ಕರಸೇವಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಾರಾಯಣ ಗೌಡ ವೀರಮಂಗಲ, ಕುಶಾಲಪ್ಪ ಗೌಡ ಅಲ್ಯಾಡಿ ಮಾಡಾವು, ಬಾಲಕೃಷ್ಣ ಗೌಡ ಸ್ವಾಮಿನಗರ, ಮುಂಡಾಲಗುತ್ತು ಸುಧಾಕರ ರೈ, ಮೋಹನ ಆಳ್ವ ಮುಂಡಾಲಗುತ್ತು, ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಜೈಶಂಕರ ರೈ ಬೆದ್ರುಮಾರು, ಕರುಣಾಕರ ರೈ ಕೋರಂಗ, ಐ.ಸಿ ಕೈಲಾಸ್ ಕೆದಂಬಾಡಿ, ಪದ್ಮಾವತಿ ಶೀನಪ್ಪ ರೈ ಕೊಡಂಕೀರಿ, ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಸುಜಾತ ಕೃಷ್ಣಕುಮಾರ್ ರೈ, ರತನ್ ರೈ ಕುಂಬ್ರ, ವಿಜಯ ಕುಮಾರ್ ರೈ ಕೋರಂಗ, ರಾಜೀವ ರೈ ಕೋರಂಗ, ಕರುಣಾಕರ ರೈ ಅತ್ರೆಜಾಲು, ನೇಮಣ್ಣ ಗೌಡ ಇದ್ಯಪೆ, ವಿಜಯಲಕ್ಷ್ಮೀ ಸಂಜೀವ ಗೌಡ ಮತ್ತು ಮಕ್ಕಳು, ಅವಿನಾಶ್ ಗೌಡ ಕುಂಟ್ಯಾನ, ರಾಮಣ್ಣ ಗೌಡ ಕುಂಟ್ಯಾನ, ನಿವೃತ್ತ ಯೋಧ ವಸಂತ ಗೌಡ ಅಮೈ, ನಿವೃತ್ತ ಯೋಧ ಚಂದ್ರಶೇಖರ ಗೌಡ ಪಟ್ಲಕಾನ, ನಾರಾಯಣ ಗೌಡ ಪಟ್ಲಕಾನ, ವೀಣಾ ಆರ್.ರೈ ಬೆದ್ರುಮಾರು, ಉಷಾ ಜಿ.ರೈ ಕೆರೆಮೂಲೆ, ಉದನೇಶ್ವರ ಉಪಾಧ್ಯಾಯ ಪಟ್ಲಮೂಲೆ, ಸುನೀತಾ ಬಾಬು ಗೌಡ ವಿಟ್ಲ, ಮುಂಡಾಳಗುತ್ತು ಸುರೇಶ್ ರೈ ಮಾಣಿಪ್ಪಾಡಿ, ನಾರಾಯಣ ಪೂಜಾರಿ ಕುರಿಕ್ಕಾರ ಸೇರಿದಂತೆ ರಾಘವ ಗೌಡ ಹಾಗೂ ರೇಖಾ ರಾಘವ ಗೌಡರವರ ಕುಟುಂಬಸ್ಥರು, ಬಂಧುಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.
ಕರಸೇವಕರಿಗೆ ಸನ್ಮಾನ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಹಿಂದೆ ನೂರಾರು ಮಂದಿ ಕರಸೇವಕರಾಗಿ ಸೇವೆ ಮಾಡಿದ್ದು ಅದರಲ್ಲಿ ಕೆದಂಬಾಡಿ ಗ್ರಾಮದ ಇದ್ಯಪೆ ಶಿವರಾಮ ಗೌಡರು ಒಬ್ಬರಾಗಿದ್ದಾರೆ. ಇವರಿಗೆ ರಾಘವ ಗೌಡ ಕೆರೆಮೂಲೆಯವರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಪೇಟಾ, ಶಾಲು, ಫಲಪುಷ್ಪ ಹಾಗೂ ದೀಪವನ್ನು ಕೊಟ್ಟು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿವರಾಮ ಗೌಡರವರು ಅಯೋಧ್ಯೆಯ ಘಟನೆಯ ಹಿಂದಿನ ದಿನಗಳನ್ನು ನೆನಪಿಸಿಕೊಂಡರು ನಾವು 21 ದಿನಗಳ ಕಾಲ ಜೈಲಿನಲ್ಲಿದ್ದ ಬಗ್ಗೆಯೂ ತಿಳಿಸಿ, ರಾಮ ಮಂದಿರ ನಿರ್ಮಾಣಗೊಂಡಿದ್ದು ಶ್ರೀರಾಮ ನಮ್ಮೆನ್ನೆಲ್ಲಾ ಕಾಪಾಡಲಿ, ರಾಘವ ಗೌಡರವರ ಕುಟುಂಬ ಸುಖ, ಸಂಪತ್ತು, ಸಂತೋಷದಿಂದ ಕೂಡಿರಲಿ ಎಂದು ಹೇಳಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಿವರಾಮ ಗೌಡರವರ ಪತ್ನಿ ನಿರ್ಮಲ ಶಿವರಾಮ ಗೌಡ, ಸಹೋದರ ದಾಮೋದರ ಗೌಡ ಇದ್ಯಪೆ ಉಪಸ್ಥಿತರಿದ್ದರು.
ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದಿಂದ ಶುಭಾಶಯ ಸಲ್ಲಿಕೆ
ಮದುವೆಯ 25 ವರ್ಷಗಳನ್ನು ತುಂಬು ನಗುವಿನೊಂದಿಗೆ ಸಂತಸದಿಂದ ಸಂಭ್ರಮಿಸಿದ ರಾಘವ ಗೌಡ ಮತ್ತು ರೇಖಾ ರಾಘವ ಗೌಡರವರಿಗೆ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಆಡಳಿತ ಸಮಿತಿ ಮತ್ತು ಶ್ರೀರಾಮ ಭಜನಾ ಮಂಡಳಿ ವತಿಯಿಂದ ಗೌರವಾರ್ಪಣೆ ನಡೆಯಿತು. ಶ್ರೀ ಲಕ್ಷ್ಮೀಯ ಬೆಳ್ಳಿಯ ಫೋಟೋವನ್ನು ದಂಪತಿಗೆ ಕೊಟ್ಟು ಮನೆ ಮತ್ತು ಮನಗಳಲ್ಲಿ ಲಕ್ಷ್ಮೀ ತುಂಬಲಿ, ಬಾಳು ಬಂಗಾರವಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಮಂದಿರದ ಆಡಳಿತ ಸಮಿತಿ ಮತ್ತು ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಘವ ಗೌಡರವರು, ನನ್ನನ್ನು ಶ್ರೀರಾಮ ಮಂದಿರದ ಓರ್ವ ಸೇವಕ ಎಂದು ಸಂಬೋಧಿಸಿ ಗೌರವಾರ್ಪಣೆ ಮಾಡಿರುವುದು ಖುಷಿ ತಂದಿದೆ. ಮಂದಿರದ ಕೆಲಸ ಕಾರ್ಯಗಳಲ್ಲಿ ಕೈಜೋಡಿಸಲು ನನಗೆ ದೊರಕಿದ ಪುಣ್ಯದ ಕೆಲಸವಾಗಿದೆ. ನಾನೊಬ್ಬ ದೈವ ಭಕ್ತ. ಸುಮಾರು 20 ವರ್ಷಗಳ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಸಂದರ್ಭದಲ್ಲೂ ನಾನು ಪ್ರತಿದಿನ ದೇವಸ್ಥಾನಕ್ಕೆ ಹೋಗಿ ದೇವರ ಸೇವೆ ಮಾಡುತ್ತಿದ್ದೆ. ದೇವರು ನಮ್ಮೆಲ್ಲರಿಗೂ ಒಳಿತನ್ನು ಮಾಡಲಿ ಎಂದು ಹೇಳಿ ನನ್ನ ಮದುವೆಯ ಈ 25 ವರ್ಷಗಳ ಸಂಭ್ರಮಕ್ಕೆ ಬಂದು ಹರಸಿ ಹಾರೈಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ, ಈ ಪ್ರೀತಿ ಮುಂದೆಯೂ ನಮ್ಮ ಮೇಲೆ ಇರಲಿ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ಕೇಕ್ ಕತ್ತರಿಸಿ, ಹೂಹಾರ ಹಾಕಿ ಸಂಭ್ರಮಾಚರಣೆ
ರಾಘವ ಗೌಡ ಮತ್ತು ರೇಖಾ ರಾಘವ ಗೌಡರವರ ಮದುವೆಯ 25 ನೇ ವರ್ಷವನ್ನು ವಿಶೇಷವಾಗಿ ಆಚರಿಸಲಾಯಿತು. ಮೊದಲಿಗೆ ದಂಪತಿ ದೀಪ ಬೆಳಗಿಸಿದರು ಬಳಿಕ ಪರಸ್ಪರ ಹೂ ಹಾರವನ್ನು ಬದಲಾಯಿಸಿಕೊಂಡರು. ಆ ಬಳಿಕ ಕೇಕ್ ಕತ್ತರಿಸಿ ಪರಿಸ್ಪರ ತಿನ್ನಿಸಿದರು. ಈ ಸಂದರ್ಭದಲ್ಲಿ ಮಕ್ಕಳಾದ ರೋಶನಿ ಆರ್.ಕೆ ಮತ್ತು ಪ್ರಜ್ವಲ್ ಆರ್.ಕೆ ಉಪಸ್ಥಿತರಿದ್ದರು.