ಪುತ್ತೂರು: ಮಾಯಿದೆ ದೇವುಸ್ ಚರ್ಚ್ ನ ಡೊನ್ ಬೊಸ್ಕೊ ಕ್ಲಬ್ ವತಿಯಿಂದ ದರ್ಬೆ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಫೆ.11 ರಂದು ನಡೆಯಲಿರುವ ಪುತ್ತೂರು, ಮರೀಲು, ಬನ್ನೂರು ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಆಟಗಾರರನ್ನೊಳಗೊಂಡ “ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಸೀಸನ್ -3” ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಜರಗಲಿದ್ದು, ಇದರ ಜೆರ್ಸಿ ಬಿಡುಗಡೆ ಕಾರ್ಯಕ್ರಮವು ಫೆ.4 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನೆರವೇರಿತು.
ಲೀಗ್ ಮಾದರಿಯಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾಟದಲ್ಲಿ ಸಿಝ್ಲರ್ ಸ್ಟೈಕರ್ಸ್, ಸೋಜಾ ಸೂಪರ್ ಕಿಂಗ್ಸ್, ಲೂವಿಸ್ ಕ್ರಿಕೆಟರ್ಸ್, ಫ್ಲೈಝೋನ್ ಅಟ್ಯಾಕರ್ಸ್, ಎಸ್.ಎಲ್ ಗ್ಲ್ಯಾಡಿಯೇಟರ್ಸ್, ಕ್ರಿಶಲ್ ವಾರಿಯರ್ಸ್ ಹೀಗೆ ಆರು ತಂಡಗಳು ಕೂಟದಲ್ಲಿ ಸೆಣಸಾಡಲಿದ್ದು, ಈ ತಂಡಗಳ ಜೆರ್ಸಿ(ಸಮವಸ್ತ್ರ) ಬಿಡುಗಡೆಯನ್ನು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ನೆರವೇರಿಸಿ ಶುಭ ಹಾರೈಸಿದರು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷ ಆಂಟನಿ ಒಲಿವೆರಾ, ಕಾರ್ಯದರ್ಶಿ ಜ್ಯೋ ಡಿ’ಸೋಜ, ಸಿಪಿಎಲ್ ಸಂಯೋಜಕರಾದ ಆಲನ್ ಮಿನೇಜಸ್, ರೋಹನ್ ಡಾಯಸ್, ರಾಕೇಶ್ ಮಸ್ಕರೇನ್ಹಸ್, ಕ್ಲಬ್ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ್ ಡಿ’ಸೋಜ, ಸಿಝ್ಲರ್ ಸ್ಟೈಕರ್ಸ್ ಮಾಲಕರಾದ ರೋಶನ್ ರೆಬೆಲ್ಲೋ, ಸೋಜಾ ಸೂಪರ್ ಕಿಂಗ್ಸ್ ಮಾಲಕ ದೀಪಕ್ ಮಿನೇಜಸ್, ಲೂವಿಸ್ ಕ್ರಿಕೆಟರ್ಸ್ ಮಾಲಕ ಲೆಸ್ಟರ್ ಲೂವಿಸ್, ಫ್ಲೈಝೋನ್ ಅಟ್ಯಾಕರ್ಸ್ ಮಾಲಕ ಪ್ರದೀಪ್(ಬಾಬಾ) ವೇಗಸ್, ಎಸ್.ಎಲ್ ಗ್ಲ್ಯಾಡಿಯೇಟರ್ಸ್ ಮಾಲಕ ಸಿಲ್ವೆಸ್ಟರ್ ಡಿ’ಸೋಜ, ಕ್ರಿಶಲ್ ವಾರಿಯರ್ಸ್ ಮಾಲಕರಾದ ಕಿರಣ್ ಡಿ’ಸೋಜ ಹಾಗೂ ಮೆಲ್ವಿನ್ ಪಾಯಿಸ್ ಸಹಿತ ಆಯಾ ತಂಡಗಳ ಐಕಾನ್ ಆಟಗಾರರು, ಸದಸ್ಯರು ಉಪಸ್ಥಿತರಿದ್ದರು.