ನೆಲ್ಯಾಡಿ ಗ್ರಾ.ಪಂ.: ಮಾದೇರಿ 2ನೇ ವಾರ್ಡ್‌ನ ಎಸ್‌ಸಿ,ಎಸ್‌ಟಿ/ ಅಂಗವಿಕಲರಿಗೆ ಚೆಕ್ ವಿತರಣೆ

0

ನೆಲ್ಯಾಡಿ: ನೆಲ್ಯಾಡಿ ಗ್ರಾ.ಪಂ.ನ ಮಾದೇರಿ 2ನೇ ವಾರ್ಡ್‌ನ ಎಸ್‌ಸಿ, ಎಸ್‌ಟಿ ಹಾಗೂ ಅಂಗವಿಕಲರಿಗೆ ಗ್ರಾ.ಪಂ.ನ ಅನುದಾನದಲ್ಲಿ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು.
ಶೇ.25ರ ನಿಧಿಯಿಂದ ಸೃಜನ್ ಜಾರಂಗೇಲು, ರುಕ್ಮಯ ಪಲಸತ್ತಡ್ಕ, ಕಾವ್ಯ ತೋಟ ದರ್ಖಾಸು, ಸುಮಿತ್ರ ತೋಟ ದರ್ಖಾಸು, ಗೋಜ ಜಾರಂಗೇಲು, ಬಾಬು ಅಜಿಲ ಅವರಿಗೆ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು.

ಅಂಗವಿಕಲರ ಶೇ.5ರ ನಿಧಿಯಿಂದ ಹೇಮಂತ್ ಟಿ.ಎಸ್.ತೋಟ, ಸುಂದರಿ ವೆಂಕಪ್ಪ ಗೌಡ, ಬಾಲಕೃಷ್ಣ ಗೌಡ ಸರೋಳಿಕಾನ, ಬಾಬು ಗೌಡ ಸರೋಳಿಕಾನ ಅವರಿಗೆ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು. ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಉಪಾಧ್ಯಕ್ಷೆ ರೇಷ್ಮಾಶಶಿ, ಸದಸ್ಯರಾದ ಆನಂದ ಗೌಡ ಪಿಲವೂರು, ಜಯಂತಿ ಮಾದೇರಿ, ಪುಷ್ಪಾ ಪಡುಬೆಟ್ಟು, ರವಿಪ್ರಸಾದ್ ಶೆಟ್ಟಿ ರಾಮನಗರ, ಜಯಾನಂದ ಬಂಟ್ರಿಯಾಲ್, ಅಬ್ದುಲ್ ಜಬ್ಬಾರ್, ಮೊಹಮ್ಮದ್ ಇಕ್ಬಾಲ್, ಪಿಡಿಒ ಆನಂದ ಗೌಡ, ಲೆಕ್ಕ ಸಹಾಯಕ ಅಂಗು ಅವರು ಚೆಕ್ ವಿತರಿಸಿದರು.

LEAVE A REPLY

Please enter your comment!
Please enter your name here