ವಿದ್ಯಾರಶ್ಮಿಯಲ್ಲಿ ಯುಕೆಜಿಯ ಘಟಿಕೋತ್ಸವ

0

ಪುತ್ತೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2023-24ನೆ ಸಾಲಿನ ಯು.ಕೆ.ಜಿ. ತರಗತಿಯ ವಿದ್ಯಾರ್ಥಿಗಳ ಘಟಿಕೋತ್ಸವ ದಿನ (ಗ್ರಾಜ್ಯುಯೇಷನ್ ಡೇ) ನಡೆಯಿತು. ಸಮಾರಂಭವನ್ನು ಶ್ರೀ ಕಸ್ತೂರಿಕಲಾ ಎಸ್. ರೈ ಉದ್ಘಾಟಿಸಿದರು. ಅತಿಥಿಯಾಗಿ ಆರೆಲ್ತಡಿ ಅಂಗನವಾಡಿಯ ಶಿಕ್ಷಕಿ ಮಮತಾ ಸಿ. ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಮಕ್ಕಳನ್ನು ರೂಪಿಸುವ ಕೆಲಸ ಕೇವಲ ಶಾಲೆಯದ್ದು ಮಾತ್ರವಲ್ಲ, ಬದಲಿಗೆ ಅದು ಶಿಕ್ಷಕರು ಮತ್ತು ಪೋಷಕರು ಇಬ್ಬರಿಗೂ , ಎರಡೂ ಕೈ ಸೇರಿದಾಗ ಚಪ್ಪಾಳೆ ಆಗುವಂತೆ ಶಾಲೆ ಮತ್ತು ಮನೆಗಳು ಎರಡೂ ಸೇರಿದಾಗ ಮಗುವಿನ ಶಿಕ್ಷಣ ಸಮರ್ಪಕವಾಗಲು ಸಾಧ್ಯ ಎಂದರು.


ಶಾಲಾ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಟ್ರಸ್ಟಿ ರಶ್ಮಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ಪ್ರಾಂಶುಪಾಲ ಸೀತಾರಾಮ ಕೇವಳ, ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಒಂದನೆ ತರಗತಿಯ ಐಷಾನಿ ಆರಿಗ ಅವರು ಸಂವಿಧಾನದ ಪೀಠಿಕೆ ವಾಚಿಸಿ, ಯು.ಕೆ.ಜಿ. ತರಗತಿಯ ವಿದ್ಯಾರ್ಥಿಗಳು ಪ್ರಾರ್ಥಿಸಿ,ಅವಿ ಅಶ್ವಿನ್ ಶೆಟ್ಟಿ ಸ್ವಾಗತಿಸಿ, 9ನೆ ತರಗತಿಯ ಆಯಿಷತ್ ಜಸ್ನಾ ನಿರೂಪಿಸಿ, ಸಲ್ವಾ ಫಾತಿಮಾ ವಂದಿಸಿದರು.

LEAVE A REPLY

Please enter your comment!
Please enter your name here