ಡೊನ್ ಬೊಸ್ಕೊ ಕ್ಲಬ್ ನಿಂದ ಸಿಪಿಎಲ್-ಸೀಸನ್ 3 ಉದ್ಘಾಟನೆ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ನ ಡೊನ್ ಬೊಸ್ಕೊ ಕ್ಲಬ್ ಕ್ಲಬ್ ನ ಆಶ್ರಯದಲ್ಲಿ ಪುತ್ತೂರು, ಮರೀಲು, ಬನ್ನೂರು ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಆಟಗಾರರನ್ನೊಳಗೊಂಡ “ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್)-ಸೀಸನ್ 3” ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯು ಫೆ.11 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿತು.

ಸಂತ ಫಿಲೋಮಿನಾ ಪ್ರೌಢಶಾಲೆಯ ಹತ್ತಿರವಿರುವ ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ಪ್ರತಿಮೆಗೆ ಕ್ಲಬ್ ಕಾರ್ಯದರ್ಶಿ ಜ್ಯೋ ಡಿ’ಸೋಜ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ್ ಡಿ’ಸೋಜರವರು ಜಂಟಿಯಾಗಿ ಹೂಹಾರ ಹಾಕಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಉದ್ಘಾಟಿಸಲಾಯಿತು. 

ಲೀಗ್ ಮಾದರಿಯಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ಸೋಜಾ ಸೂಪರ್ ಕಿಂಗ್ಸ್, ಸಿಝ್ಲರ್ ಸ್ಟೈಕರ್ಸ್, ಲೂವಿಸ್ ಕ್ರಿಕೆಟರ್ಸ್, ಫ್ಲೈಝೋನ್ ಅಟ್ಯಾಕರ್ಸ್, ಎಸ್.ಎಲ್ ಗ್ಲ್ಯಾಡಿಯೇಟರ್ಸ್, ಕ್ರಿಶಲ್ ವಾರಿಯರ್ಸ್ ತಂಡಗಳು ಸೆಣಸಾಡಲಿದೆ.

ಕ್ಲಬ್ ಉಪಾಧ್ಯಕ್ಷ ರೋಯ್ಸ್ ಪಿಂಟೊ, ಜೊತೆ ಕಾರ್ಯದರ್ಶಿ ಬ್ಯಾಪ್ಟಿಸ್ಟ್ ರೊಡ್ರಿಗಸ್, ಕ್ರಿಕೆಟ್‌ ಸಂಯೋಜಕರಾದ ಆಲನ್ ಮಿನೇಜಸ್, ರಾಕೇಶ್ ಮಸ್ಕರೇನ್ಹಸ್ ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here