ನೆಲ್ಯಾಡಿ: ಬಜತ್ತೂರು ಗ್ರಾಮದ ಒಡ್ಯಮೆ ಸಮೀಪದ ಕೂವೆಮಠ (ಶಿವತ್ತಮಠ) ಶ್ರೀ ನರಸಿಂಹ ಮಠದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರುಗೊಂಡ 2 ಲಕ್ಷ ರೂ.ದೇಣಿಗೆಯ ಚೆಕ್ ಅನ್ನು ಜೀರ್ಣೋದ್ದಾರ ಸಮಿತಿಗೆ ಹಸ್ತಾಂತರಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಎನ್., ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ ಅವರು ದೇವಸ್ಥಾನದ ಜೀರ್ಣೋದ್ದಾರ ಸಮಿತಿಯವರಿಗೆ ಚೆಕ್ ಹಸ್ತಾಂತರಿಸಿದರು. ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ಮಹೇಂದ್ರವರ್ಮ ಮೇಲೂರು, ಕೋಶಾಧಿಕಾರಿ ಶಾಂತಿಪ್ರಕಾಶ್ ಬರ್ನಜಾಲು, ಪ್ರಧಾನ ಕಾರ್ಯದರ್ಶಿ ರಂಜಿತ್ ಜೈನ್ ಮೇಲೂರು, ಕಾರ್ಯದರ್ಶಿ ಚಂದ್ರಶೇಖರ ಶಿವತ್ತಮಠ, ಜೊತೆ ಕಾರ್ಯದರ್ಶಿಗಳಾದ ಮಹೇಶ ಪಾತೃಮಾಡಿ, ಆನಂದ ಮೇಲೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೋಳಿತ್ತೊಟ್ಟು ವಲಯ ಮೇಲ್ವಿಚಾರಕಿ ಸುಜಾತ, ಉಪ್ಪಿನಂಗಡಿ ವಲಯ ಮೇಲ್ವಿಚಾರಕ ಶಿವಪ್ಪ, ಉಪ್ಪಿನಂಗಡಿ ವಲಯದ ಮಾಜಿ ಅಧ್ಯಕ್ಷ ಪ್ರಶಾಂತ ಪೆರಿಯಡ್ಕ, ಗೋಳಿತ್ತೊಟ್ಟು ವಲಯದ ಶೌರ್ಯ ಘಟಕದ ಸದಸ್ಯ ವೇದಕುಮಾರ್, ಗೋಳಿತ್ತೊಟ್ಟು, ಉಪ್ಪಿನಂಗಡಿ ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.