ಪುತ್ತೂರು ಹೈಟೆಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬೇಕರಿ, ಆನ್‌ಲೈನ್ ಸಂಸ್ಥೆಯಿಂದ ನಗದು ಕಳವು

0

ಪುತ್ತೂರು:ಪುತ್ತೂರು ಹೈಟೆಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಬೇಕರಿ ಮತ್ತು ಆನ್ ಲೈನ್ ಸಂಸ್ಥೆಯಿಂದ ಲಕ್ಷಾಂತರ ರೂಪಾಯಿ ಕಳವಾಗಿರುವ ಘಟನೆ ಫೆ.೧೦ರ ತಡ ರಾತ್ರಿ ನಡೆದಿದೆ.

ಬಸ್ ನಿಲ್ದಾಣದ ಒಳಗಿನ ಬೇಕರಿಯೊಂದರ ರೋಲಿಂಗ್ ಶೆಟರ್‌ನ ಬೀಗ ಮುರಿದು ಒಳಗಿದ್ದ ಸಾವಿರಾರು ರೂಪಾಯಿ ನಗದು ಕಳವು ಮಾಡಲಾಗಿದೆ.ಅದೇ ರೀತಿ ಬಸ್‌ನಿಲ್ದಾಣದ ಕೆಳ ಅಂತಸ್ತಿನಲ್ಲಿರುವ ಸಂಸ್ಥೆಯಿಂದ ಲಕ್ಷಾಂತರ ರೂಪಾಯಿ ನಗದು ಕಳವಾಗಿದೆ ಎಂದು ತಿಳಿದು ಬಂದಿದೆ.ಕಳವು ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕೃತ್ಯ ಎಸಗಿರುವ ಆರೋಪಿ ಒಬ್ಬನೇ ಎನ್ನುವುದು ಖಚಿತವಾಗಿದೆ.ಪುತ್ತೂರು ಪೊಲೀಸರು ಸಿಸಿ ಕ್ಯಾಮರಾ ಪಡೆದು ಪರಿಶೀಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here