ಪುತ್ತೂರು: ಕಾರಣಿಕ ಕ್ಷೇತ್ರ ನಳೀಲು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಈ ನಡುವೆ ದೇವಸ್ಥಾನದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.
ನಳೀಲು ದೇವಸ್ಥಾನದಲ್ಲಿ ಉತ್ಸವ ಮೂರ್ತಿ ಹೊರತುಪಡಿಸಿ ಸುಬ್ರಹ್ಮಣ್ಯನ ಯಾವುದೇ ಶಿಲಾಮೂರ್ತಿ ಇರುವುದಿಲ್ಲ. ಇಲ್ಲಿ ಉದ್ಭವ ಹುತ್ತಕ್ಕೆ ನಿತ್ಯಪೂಜೆ ನಡೆಯುತ್ತದೆ. ದೇವಾಲಯದ ಈ ಹುತ್ತದಲ್ಲಿ ಸುಬ್ರಹ್ಮಣ್ಯ ನಾಗರಹಾವಿನ ರೂಪದಲ್ಲಿ ನೆಲೆಯಾಗಿದ್ದಾನೆ ಎಂಬ ಪ್ರತೀತಿ ಮತ್ತು ನಂಬಿಕೆ ಹಿಂದಿನಿಂದಲೂ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಇಂದು(ಫೆ.14) ದೇವಾಲಯದಲ್ಲಿ ನಾಗರಾಜ ಸಾರ್ವಜನಿಕರಿಗೆ ದರ್ಶನ ನೀಡಿದ್ದಾನೆ. ಗರ್ಭಗುಡಿಯ ದಕ್ಷಿಣ ದಿಕ್ಕಿನಲ್ಲಿರುವ ಸಣ್ಣ ಪ್ರವೇಶ ದ್ವಾರದ ಮೂಲಕ ನಾಗರಾಜ ಒಳ ಪ್ರವೇಶ ಮಾಡುತ್ತಿರುವುದು ಕಣ್ಣಿಗೆ ಬಿದ್ದಿದ್ದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಸುಬ್ರಹ್ಮಣ್ಯನ ಈ ಆಲಯದಲ್ಲಿ ಫೆ.16 ರಿಂದ 24ರವರೆಗೆ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ ನಡೆಯಲಿದ್ದು, ನಾಗರಾಜನ ದರ್ಶನದಿಂದ ಭಕ್ತರು ಪುಳಕಿತರಾಗಿದ್ದಾರೆ.
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್ , ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ ಕಾಳಿಯಂ ತಥಾ , ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಮ್ , ಸಾಯಂಕಾಲೇ ಪಠೇನ್ನಿತ್ಯಂ ಪ್ರಾತಃಕಾಲೇ ವಿಶೇಷತಃ, ಸಂತಾನಂ ಪ್ರಾಪ್ಯತೇ ನೂನಂ ಸಂತಾನಸ್ಯ ಚ ರಕ್ಷಕಾಃ , ಸರ್ವಬಾಧಾ ವಿನಿರ್ಮುಕ್ತಃ ಸರ್ವತ್ರ ವಿಜಯೀ ಭವೇತ್ , ಸರ್ಪದರ್ಶನಕಾಲೇ ವಾ ಪೂಜಾಕಾಲೇ ಚ ಯಃ ಪಠೇತ್ , ತಸ್ಯ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ , ಓಂ ನಾಗರಾಜಾಯ ನಮಃ ಪ್ರಾರ್ಥಯಾಮಿ ನಮಸ್ಕರೋಮಿ. ಎಂಬ ಪ್ರಾರ್ಥನೆಯಲ್ಲಿ ಭಕ್ತರು ಭಾವಪರವಶರಾಗಿದ್ಧಾರೆ.