ಪುತ್ತೂರು: ಸರ್ವೇ ಗ್ರಾಮದ ಮರಿಯ ಎಂಬಲ್ಲಿ “ಹೊಸಮ್ಮ” ಗೃಹಪ್ರವೇಶದ ಪ್ರಯುಕ್ತ ಧೀಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ತಂಡದಿಂದ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ ತಾಳಮದ್ದಳೆ “ಜಾಂಬವತಿ ಕಲ್ಯಾಣ” ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕು| ಹೇಮಾ ಸ್ವಾತಿ, ಕುರಿಯಾಜೆ, ಕು| ಸಿಂಚನಾ ಮೂಡುಕೋಡಿ, ಚೆಂಡೆಯಲ್ಲಿ, ಶಂಕರನಾರಾಯಣ ಭಟ್, ಪದ್ಯಾಣ, ಮದ್ದಳೆಯಲ್ಲಿ ಲಕ್ಷ್ಮೀಶ ಶಗ್ರಿತ್ತಾಯ ,ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಮೊದಲನೇ ಭಾಗದ ಕೃಷ್ಣನಾಗಿ ಶ್ರೀವಿದ್ಯಾ ಜೆ ರಾವ್ , ಎರಡನೇ ಭಾಗದ ಕೃಷ್ಣನಾಗಿ, ಪದ್ಮಾ ಕೆ ಆರ್ ಆಚಾರ್ಯ, ಬಲರಾಮನಾಗಿ ಪ್ರೇಮಾ ಕಿಶೋರ್, ಜಾಂಬವನಾಗಿ ಶಾಲಿನಿ ಅರುಣ್ ಶೆಟ್ಟಿ ಪಾತ್ರಗಳನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಂಕರನಾರಾಯಣ ಭಟ್ ಪದ್ಯಾಣರವರನ್ನು ಸನ್ಮಾನಿಸಲಾಯಿತು. ಸರ್ವ ಕಲಾವಿದರನ್ನು ಮನೆಯವರು ಶಾಲು ಹೊದಿಸಿ ಗೌರವಿಸಿದರು.