ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ಸಾಮೂಹಿಕ ಸೂರ್ಯನಮಸ್ಕಾರದೊಂದಿಗೆ ನಡೆದ ಸಂಭ್ರಮದ ರಥಸಪ್ತಮಿ

0

ಜೀವನಶೈಲಿ ಬದಲಿಸಿ ನಿಮ್ಮ ಆರೋಗ್ಯ ಉತ್ತಮವಾಗಿಸಿ -ಡಾ. ಪ್ರದೀಪ್ ಕುಮಾರ್ ಕರೆ

ಆಲಂಕಾರು: ಇಂದು (ಫೆ.17) ಶ್ರೀ ಭಾರತಿ ವಿದ್ಯಾಸಂಸ್ಥೆಯ ಶಾಲಾ ಮೈದಾನದಲ್ಲಿ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕವೃಂದದವರು ಸಾಮೂಹಿಕವಾಗಿ ಮಂತ್ರಸಹಿತ ಸೂರ್ಯನಮಸ್ಕಾರ ಸೇರಿದಂತೆ, ಯೋಗ ವ್ಯಾಯಾಮಗಳನ್ನು ಮಾಡಿ ರಥಸಪ್ತಮಿಯ ವಿಶೇಷ ದಿನವನ್ನು ವಿನೂತನವಾಗಿ ಆಚರಿಸಲಾಯಿತು.

ಬಳಿಕ ನಡೆದ ಸರಳ ಸಭಾಚಾವಡಿಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಈಶ್ವರಗೌಡ ಪಜ್ಜಡ್ಕ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ಧ ಡಾ. ಪ್ರದೀಪ್, ಕನ್ಸಲ್ಟಿಂಗ್ ಪಿಸಿಶಿಯನ್ ಕೊಟಕ್ಕಲ್ ಆರ್ಯ ವೈದ್ಯ ಶಾಲಾ ಪುತ್ತೂರು ಮಾತನಾಡಿ, ಯೋಗದಿಂದಾಗುವ ಲಾಭ ಮತ್ತು ರಥಸಪ್ತಮಿಯ ದಿನದ ವಿಶೇಷವನ್ನು ಹಂಚಿಕೊಂಡರು. ಅತಿಥಿಯಾಗಿ ಜೊತೆಯಾದ ಹಿರಿಯ ವಿದ್ಯಾರ್ಥಿನಿ ಮತ್ತು ಸಂಗೀತ ಶಿಕ್ಷಕಿಯಾದ ವಿದುಷಿ ಶಿಲ್ಪಾ ಸಿ. ಯಚ್ ಕೇವಳ ಸಮಯೋಚಿತವಾಗಿ ಮಾತನಾಡಿ, ನಾವು ರಥಸಪ್ತಮಿಯ ಮಹತ್ವವನ್ನು ತಿಳಿದು ಆಚರಿಸಿದಾಗ ಇನ್ನಷ್ಟು ಪ್ರಯೋಜನ ನಮಗೆ ದೊರೆಯುತ್ತದೆ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಶಾಲಾ ಗೌರವಾಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು, ಅಧ್ಯಕ್ಷ ಡಾ. ಸುರೇಶ್ ಕುಮಾರ್ ಕೂಡುರು, ಕಾರ್ಯದರ್ಶಿ ಇಂದುಶೇಖರಶೆಟ್ಟಿ, ಸಾಮೂಹಿಕ ಸೂರ್ಯನಮಸ್ಕಾರ ಸಹಿತ ಯೋಗವ್ಯಾಯಾಮದ ಮಾರ್ಗದರ್ಶಕರಾದ ಶಾಲಾ ಮುಖ್ಯಮಾತಾಜಿ ಆಶಾ. ಎಸ್ ರೈ ಹಾಗೂ ಆಂಗ್ಲ ವಿಭಾಗದ ಮುಖ್ಯಶ್ರೀಮಾನ್ ಸತೀಶ್ ಕುಮಾರ್ ಜಿ. ಆರ್ ಉಪಸ್ಥಿತರಿದ್ದರು. ಯೋಗಶಿಕ್ಷಕರಾದ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಕೆ, ಮಾತಾಜಿ ಲೀಲಾವತಿ ಕಾರ್ಯಕ್ರಮ ವ್ಯವಸ್ಥೆಗೊಳಿಸಿದರು. ಶಾಲಾ ಆಡಳಿತ ಮಂಡಳಿ ಪ್ರಮುಖರು, ಮಾತಾಜಿ ಶ್ರೀಮಾನ್ ವೃಂದದವರು, ಸಿಬ್ಬಂದಿ ವೃಂದ, ಪಾಲಕ ವೃಂದ, ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮಾತಾಜಿ ಸುಪ್ರಿತಾ ಶೆಟ್ಟಿ ವಂದನಾರ್ಪಣೆಗೈದರು. ಶ್ರೀಮಾನ್ ಚಂದ್ರಹಾಸ ಕೆ. ಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here