ಪುತ್ತೂರು:ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕವಿಗಳಾದ ಪಂಪ, ರನ್ನ, ರಾಘವಾಂಕ, ಕನಕದಾಸ ಕುವೆಂಪು, ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರನ್ನು ಸ್ಮರಿಸಿ ರಚಿಸಲಾದ ಗೀತಗುಚ್ಚ ಎಂಬ ನೃತ್ಯರೂಪಕದಲ್ಲಿ ಪುತ್ತೂರು ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಪಂಪನ ಆದಿಪುರಾಣ, ರನ್ನನ ಗದಾಯುದ್ಧ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಕನಕದಾಸರ ಕೀರ್ತನೆ, ರಸ ಋಷಿ ರಾಷ್ಟ್ರಕವಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆರವರ ನಾಕುತಂತಿ ಕೃತಿಗಳನ್ನು ಹಾಡು ಅಭಿನಯಿಸಿದರು. ಗೀತ ಗುಚ್ಚ, ಕಾವ್ಯ ಗುಚ್ಚ ಶ್ರಾವ್ಯಗುಚ್ಛ ಕನ್ನಡ ನಾಡಿನ ಸೊಬಗನು ಸ್ಮರಿಸುವ ಆನಂದಗುಚ್ಛ ಹಾಡಿಗೆ ವಿದ್ಯಾರ್ಥಿಗಳು ಅಭಿನಯಿಸಿದರು.ಹೇಮಸ್ವಾತಿ ಕುರಿಯಜೆ ಗಮಕವಾಚನ ಮಾಡಿದರು. ಶಾಲಾ ಶಿಕ್ಷಕಿ ಶೋಭಾ ಸಹಕರಿಸಿದರು.
ಬಿ ಎಸ್ ಕಾರಂತ ರಾಮಕುಂಜ ಕೀಬೋರ್ಡ್ ನಲ್ಲಿ, ಸುಹಾಸ್ ಹೆಬ್ಬಾರ್ ರಿದಂ ಪ್ಯಾಡ್ ನ ಮೂಲಕ , ಹರಿಣಾಕ್ಷಿ , ಕವಿತಾ , ಹೇಮಾ, ಶಿಲ್ಪರಾಣಿ, ಸೌಮ್ಯ, ನಳಿನಿ ಹಿನ್ನೆಲೆಯಲ್ಲಿ ಸಹಕರಿಸಿದರು. ಶಾಲಾ ಮುಖ್ಯ ಗುರು ತಾರಾನಾಥ ಸವಣೂರು ಗೀತಗುಚ್ಛ ರೂಪಕವನ್ನು ಸಮಗ್ರ ನಿರ್ದೇಶನ ಮಾಡಿ ಸಂಯೋಜನೆ ,ಕಲಾವಿದ ರಮೇಶ್ ಉಳಯ ರೂಪಕ ರಚಿಸಿದವರು.
ರೂಪಕದಲ್ಲಿ ಶ್ರೀದೇವಿ,ವರ್ಷ, ಚಿಂತನ, ಅನನ್ಯ, ಆರಾಧ್ಯ,ಇಶಾನಿ, ಪ್ರತೀಕ್ಷಾ, ಹವೀಶ್ ಭಾಗವಹಿಸಿದರು. ಆಕಾಶ್, ನಿಖಿಲ್, ಚೇತನ್ ಯಶ್ವಿತ್, ಹಂಸಿನಿ,ಆಕಾಶ್, ಶಿವಶನ್ಮಯಿ ಆದ್ಯಾ,ಧನುಷ್, ಪ್ರವೀಣ್ ರಾಜ್ ,ಧನ್ವಿತ್ ಗೌಡ ಪ್ರಣಿತ್ ಗೌಡ, ಆಶ್ಲೇಷ,ಅಶ್ವಿನಿ,ಸ್ನೇಹ, ಭೂಮಿಕ ಹಿತಶ್ರೀ, ಅಮೂಲ್ಯ, ಅನನ್ಯ, ಚಿರಾಗ್, ನಿಶಾಂತ್, ಚಾರ್ವಿ, ಪ್ರಮಿಳಾ ಕಲಾವಿದರಾಗಿ ಅಭಿನಯಿಸಿದರು. ವಿದ್ವಾನ್ ಗೋಪಾಲಕೃಷ್ಣ, ದೇವಳದ ಆಡಳಿತ ಮಂಡಳಿ, ಶಾಲೆಯ ಶಾಲಾಭಿವೃದ್ಧಿ ಸಮಿತಿ ಸಹಕರಿಸಿದರು.ಶಾಲಾ ಮುಖ್ಯಗುರು ತಾರಾನಾಥ ಸವಣೂರು , ಶ್ರೀಲತಾ ನಿರೂಪಿಸಿದರು.