ಪುತ್ತೂರು ಡಾ.ವಿದುಷಿ ಪವಿತ್ರ ರೂಪೇಶ್ ಅವರಿಗೆ ನ್ಯಾಷನಲ್ ಅಚೀವ್‌ಮೆಂಟ್ ಅವಾರ್ಡ್

0

ಪುತ್ತೂರು: ಬೆಳಕು ಸಾಹಿತ್ಯ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಯಚೂರುನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರಿನ ಡಾ| ವಿದುಷಿ ಪವಿತ್ರ ರೂಪೇಶ್ ಅವರಿಗೆ ನ್ಯಾಷನಲ್ ಅಚೀವ್‌ಮೆಂಟ್ ಅವಾರ್ಡ್ ನೀಡಿ ಗೌರವಿಸಲಾಗಿದೆ.


ಡಾ| ವಿದುಷಿ ಪವಿತ್ರಾ ರೂಪೇಶ್, ಹಲವು ವರ್ಷಗಳ ಬೋಧನಾ ಅನುಭವ ಹೊಂದಿದ್ದು ಸಂಗೀತ ಪರಿಷತ್ತು, ಮಾರ್ನಿಂಗ್ ರಾಗ, ಕರಾವಳಿ ಉತ್ಸವ, ಕನ್ನಡ ಸಾಂಸ್ಕೃತಿಕ ಸಭಾ, ಮಣಿಪಾಲ ವಿಶ್ವವಿದ್ಯಾಲಯ ಮತ್ತು ರಾಜ್ಯದಾದ್ಯಂತ ವಿವಿಧ ದೇವಾಲಯಗಳಲ್ಲಿ ,ಮಂಗಳೂರಿನ ವಿವಿಧ ಉತ್ಸವಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದು.

ಖ್ಯಾತ ಗಾಯಕಿ ವಿದುಷಿ. ಎಂ ಎಸ್ ವಿದ್ಯಾ, ಬೆಂಗಳೂರು, ಮಧುರ್ ಪಿ ಬಾಲಸುಬ್ರಹ್ಮಣ್ಯಂ, ಉಡುಪಿ, ವಿಡ್ವಾನ್ ಕೆ. ಯು. ರಾಘವೇಂದ್ರ ರಾವ್, ಉಡುಪಿ, ವಿದುಷಿ ಶಕುಂತಲಾ ಭಟ್., ಪುತ್ತೂರು, ವಿದುಷಿ. ಶುಭ ರಾವ್ ಮತ್ತು ಪ್ರಸ್ತುತ ವಿದ್ವಾನ್ ಡಾ. ಮುಲ್ಲೈವಾಸಲ್ ಚಂದ್ರಮೌಳಿ, ಅವರ ಆಪ್ತ ವರ್ಗದಲ್ಲಿ ಗುರುತಿಸಿಕೊಂಡಿದ್ದಾರೆ.

AIR ನ ಶ್ರೇಣೀಕೃತ ಕಲಾವಿದೆಯಾದ ಪವಿತ್ರಾ ಪ್ರತಿಷ್ಠಿತ CCRT ಸಂಗೀತ ವಿದ್ಯಾರ್ಥಿವೇತನವನ್ನು ಜೊತೆಗೆ ಸಂಗೀತ ಪರಿಷತ್ತು ಮತ್ತು ರೋಟರಿಯಂತಹ ಹೆಸರಾಂತ ಸಂಸ್ಥೆಗಳು ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ 1ನೇ ಬಹುಮಾನವನ್ನು ಗೆದ್ದಿದ್ದಾರೆ.

ಕರ್ನಾಟಕ ರಾಜ್ಯ ಮಂಡಳಿಯು ನಡೆಸುವ ವಿದ್ವತ್ ಮಟ್ಟದ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಬಿ. ಎಸ್ ಸಿ, ಬಿ. ಇಡ್, ಎಂ. ಎಸ್ ಸಿ. (Psychology ) ಹಾಗೂ ಸಂಗೀತ ದಲ್ಲಿ ವಿದ್ವತ್ ಪದವಿ ಪಡೆದುಕೊಂಡು ಬಳಿಕ ಯೋಗ ಸಂಸ್ಕೃತಮ್ ವಿಶ್ವವಿದ್ಯಾಲಾಯ ಪ್ಲೋರಿಡಾ ಯು ಎಸ್ ಎ. ಬೆಂಗಳೂರು ಇಲ್ಲಿ ದಕ್ಷಿಣಾದೀ ಸಂಗೀತಕ್ಕೆ “ಕರ್ಣಾಕಟ ಸಂಗೀತ” ಎಂಬ ಹೆಸರು ಹೇಗೆ ಪ್ರಾಪ್ತಿಯಾಯಿತ್ತು ಎಂಬ ಬಗ್ಗೆ ಒಂದು ಅಧ್ಯಾಯನಕ್ಕೆ ಸಂಬಂಧಿಸಿದ ಸಂಶೋಧನೆಗೆ ಇವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.

ಇವರ ದಕ್ಷಿಣಾದಿ ಸಂಗೀತಕ್ಕೆ “ಕರ್ಣಾಕಟ ಸಂಗೀತ” ಎಂಬ ಹೆಸರು ಹೇಗೆ ಪ್ರಾಪ್ತಿಯಾಯಿತ್ತು ಎಂಬ ಬಗ್ಗೆ ಒಂದು ಅಧ್ಯಾಯನಕ್ಕೆ ಸಂಬಂಧಿಸಿ ಡಾ.ಚಂದ್ರಿಕಾ ಡಿ.ಆರ್ ಬೆಂಗಳೂರು ಮತ್ತು ವಿದುಷಿ ಎಮ್ ಎಸ್ ವಿದ್ಯಾ ಬೆಂಗಳೂರು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದರು. ಈ ಕುರಿತು ಅವರಿಗೆ ಡಿ.3- 2023 ರಂದು ತಿರುವನಾಮಲ್ಲೈ ಎಸ್ ಕೆ ಪಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಾಲಾಯಿತು.

ಬೆಳಕು ಸಾಹಿತ್ಯ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಯಚೂರುನಲ್ಲಿ ನಡೆದ ಕಾರ್ಯಕ್ರಮ ಇವರಿಗೆ ನ್ಯಾಷನಲ್ ಅಚೀವ್‌ಮೆಂಟ್ ಅವಾರ್ಡ್ ನೀಡಲಾಗಿದೆ ಎಂದು ಟ್ರಸ್ಟ್ ನ ಸಂಚಾಲಕ ಅಣ್ಣಪ್ಪ ಮೇಟಿಗೌಡ ತಿಳಿಸಿದ್ದಾರೆ.
ಪವಿತ್ರ ರೂಪೇಶ್ ಪುತ್ತೂರು ಶೇಟ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕ ರೂಪೇಶ್ ಅವರ ಪತ್ನಿ. ಪ್ರಸ್ತುತ ಸವಣೂರು ಸರಕಾರಿ ಪದವಿಪೂರ್ವ ಕಾಲೇಜಲ್ಲಿ ಸಂಗೀತ ಶಿಕ್ಷಕಿಯಾಗಿ, ಪುತ್ತೂರಿನಲ್ಲಿ ಕಾಮಾಕ್ಷಿ ಸಂಗೀತ ಕಲಾ ಶಾಲೆ ಎಂಬ ಸಂಗೀತ ಶಾಲೆಯನ್ನು ನಡೆಸುತ್ತಿದ್ದು, ವಿವಿಧ ಹಂತದ ಸುಮಾರು 70 ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here