ಪುತ್ತೂರು: ಮುಹಿಯದ್ದೀನ್ ಜುಮಾ ಮಸೀದಿ ಮೈದಾನಿಮೂಲೆ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಖೀರತುಲ್ ಉಖ್ರಾ ಯಂಗ್ ಮೆನ್ಸ್ ಇದರ ವಾರ್ಷಿಕ ಮಹಾ ಸಭೆ ಮೈದಾನಿಮೂಲೆ ಜುಮಾ ಮಸೀದಿಯ ಗೌರವಾಧ್ಯಕ್ಷರಾದ ಸೈಯ್ಯದ್ ಮುಝಮ್ಮಿಲ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ಮಸೀದಿ ಸಭಾಂಗಣದಲ್ಲಿ ನಡೆಯಿತು. 2023-2024ರ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಕಾರ್ಯದರ್ಶಿ ಶಾಕಿರ್ ಹೋನೆಸ್ಟ್ ಮಂಡಿಸಿದರು. ನಂತರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಾರಿಸ್ ಉಜಿರೋಡಿ, ಪ್ರ.ಕಾರ್ಯದರ್ಶಿಯಾಗಿ ಶಾಕಿರ್ ಹೋನೆಸ್ಟ್, ಕೋಶಾಧಿಕಾರಿಯಾಗಿ ಮುನೀರ್ ನೀರ್ಪಾಡಿಯವರನ್ನು ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಫೀಕ್ ಎಂ.ಎಂ, ಜೊತೆ ಕಾರ್ಯದರ್ಶಿಗಳಾಗಿ ನಾಸೀರ್ ಎ ಕೆ, ಇಲ್ಯಾಸ್ ಕೆ ಎಂ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇರ್ಷಾದ್ ಯು ಕೆ, ಸಿದ್ದೀಕ್ ಶಾಂತಿಗೋಡ್, ನಾಸೀರ್ ಶಾಂತಿಗೋಡ್, ನೌಫಲ್ ಬುಖಾರಿ, ಇರ್ಷಾದ್ ಮುಗೇರ್, ಸಹದ್ ಎಂ ಎಂ, ನೌಫಲ್ ಯು ಕೆ, ರಫೀಕ್ ಬಾಳಾಯ, ಅಸ್ಕರ್ ನೀರ್ಪಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಮಾಅತ್ ಕಮೀಟಿಯ ಅಧ್ಯಕ್ಷರಾದ ಯೂಸುಫ್ ಹಾಜಿ ಕೈಕಾರ, ಕೋಶಾಧಿಕಾರಿ ಅಶ್ರಫ್ ಉಜಿರೋಡಿ, ಜೊತೆ ಕಾರ್ಯದರ್ಶಿ ಅಝೀಝ್ ನೀರ್ಪಾಡಿ, ಸದಸ್ಯರಾದ ಹಸೈನಾರ್ ಎಂ ಎಂ, ಮಹಮ್ಮದ್ ಉಜಿರೋಡಿ ಹಾಗೂ ಯಂಗ್ ಮೆನ್ಸ್ ಸದಸ್ಯರು, ಜಮಾಅತರು ಉಪಸ್ಥಿತರಿದ್ದರು.