ಪುತ್ತೂರು: ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಹಗಲಿರುಳೆನ್ನದೆ ಶಾಲೆಗಾಗಿ ಶ್ರಮಿಸುತ್ತಿದ್ದ ಪ್ರತಿಯೊಂದು ಸಮಸ್ಯೆಯ ಕರೆಗೂ ಪರಿಹಾರಕ್ಕಾಗಿ ಕೈಜೋಡಿಸುತ್ತಿದ್ದ ಬಾಬು ದರ್ಬೆತ್ತಡ್ಕ ಇವರ ಅಕಾಲಿಕ ಮರಣವು ದರ್ಬೆತ್ತಡ್ಕ ಪರಿಸರಕ್ಕೆ ತುಂಬಾ ದು:ಖವನ್ನುಂಟುಮಾಡಿದೆ . ಒಬ್ಬ ದಕ್ಷ ಶಿಕ್ಷಣ ಪ್ರೇಮಿಯನ್ನು ಕಳೆದುಕೊಂಡ ನೋವು ಸಂಕಟ ಎಲ್ಲರು ಅನುಭವಿಸುತ್ತಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಕುಟುಂಬದವರಿಗೆ ದು:ಖವನ್ನು ಸಹಿಸುವ ಶಕ್ತಿ ಯನ್ನು ನೀಡಿ ಜೀವನವನ್ನು ಮುನ್ನಡೆಸುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಅವರ ಸ್ಮರಣಾರ್ಥ ದರ್ಬೆತ್ತಡ್ಕ ಶಾಲೆಯಲ್ಲಿ ಫೆ. 17 ರಂದು ಎಸ್ ಡಿ ಎಂ ಸಿ, ಹಿರಿಯ ವಿದ್ಯಾರ್ಥಿಗಳ ಸಂಘ, ಶಾಲಾ ಅಧ್ಯಾಪಕ ವೃಂದ,ಅಕ್ಷರ ದಾಸೋಹದವರು,ಪೋಷಕರು ಮತ್ತು ಸರ್ವ ಶಿಕ್ಷಣ ಪ್ರೇಮಿಗಳ ಪರವಾಗಿ ಎಲ್ಲಾ ಹಿರಿಯರ ನಿರ್ಣಯದಂತೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಿ ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಭಗವಂತನಲ್ಲಿ ಪ್ರಾರ್ಥಿಸಿ ಅವರ ಕುಟುಂಬಕ್ಕೆ ಶಾಲೆ ಮತ್ತು ಊರವರೆಲ್ಲ ಸೇರಿ ಆರ್ಥಿಕ ಸಹಾಯವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್ ಎಸ್. ಎಸ್ ಡಿ ಎಂ ಸಿ ಅಧ್ಯಕ್ಷ ಕೊರಗಪ್ಪ ನಾಯ್ಕ್ ಮತ್ತು ಸದಸ್ಯರು. ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ತಾರಾನಾಥ ರೈ ಸೇರ್ತಾಜೆ. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕಲ್ಲಡ್ಕ ಮತ್ತು ಸದಸ್ಯರು, ಶಾಲಾ ಅಧ್ಯಾಪಕ ವೃಂದ, ಅಕ್ಷರ ದಾಸೋಹದವರು, ಶಾಲಾ ಮಕ್ಕಳು, ಪೋಷಕರು, ಮತ್ತು ಶಿಕ್ಷಣ ಪ್ರೇಮಿಗಳು ಮತ್ತು ಮೃತರ ಅಭಿಮಾನಿಗಳು ಉಪಸ್ಥಿತರಿದ್ದರು.