ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಬೈಪಾಸ್ ರಸ್ತೆಯ ಲೋಬೋ ಕಂಪೌಂಡ್‌ನಲ್ಲಿ ಅಡಿಕೆ, ತೆಂಗಿನಕಾಯಿ ಹಾಗೂ ಕಾಡುತ್ಪತ್ತಿ ಖರೀದಿ ಕೇಂದ್ರ ಗುಂಡಿಜೆ ಟ್ರೇಡರ‍್ಸ್ ಫೆ.19ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು. ಸಾಮಾಜಿಕ,ಧಾರ್ಮಿಕ ಮುಖಂಡ ಜಯಂತ ಪೊರೋಳಿ, ಉದ್ಯಮಿಗಳಾದ ವಿದ್ಯಾಧರ್ ಜೈನ್, ಯು.ರಾಮ, ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ., ರೈತ ಮುಖಂಡ ರೂಪೇಶ್ ರೈ ಅಲಿಮಾರು, ಎಪಿಎಂಸಿ ಮಾಜಿ ಸದಸ್ಯ ಶೀನಪ್ಪ ಗೌಡ ವಳಕಡಮ, ಕೊಯಿಲ ಗ್ರಾ.ಪಂ.ಸದಸ್ಯ ಸೀತಾರಾಮ ವಳಕಡಮ, ಅಶ್ವಿನಿ ಟ್ರೇಡರ‍್ಸ್‌ನ ಮಾಲಕ ಪ್ರಕಾಶ್, ಹೇಮರಾಜ್ ನಾಗೋಜಿ ಮತ್ತಿತರರು ಭೇಟಿ ಮಾಡಿ ಶುಭಹಾರೈಸಿದರು.
ಗುಂಡಿಜೆ ಟ್ರೇಡರ‍್ಸ್‌ನ ಮಾಲಕ ವಸಂತ ಅವರ ತಂದೆ ಶೀನಪ್ಪ ಗೌಡ ಗುಂಡಿಜೆ, ಸಹೋದರರಾದ ಆನಂದ ಗೌಡ ಗುಂಡಿಜೆ, ಯತೀಶ್, ಮನೆಯವರಾದ ಮಧುಶ್ರೀ ಆನಂದ್, ನಯನ ಯತೀಶ್, ಪ್ರಾಪ್ತಿ, ಸ್ವಾತಿಯವರು ಅತಿಥಿಗಳನ್ನು ಸತ್ಕರಿಸಿದರು. ಅನಿತಾವಂಸತ್ ಗುಂಡಿಜೆ ಸ್ವಾಗತಿಸಿದರು.
ಉತ್ತಮ ಬೆಲೆಗೆ ಖರೀದಿ:ಗುಂಡಿಜೆ ಟ್ರೇಡರ‍್ಸ್‌ನ ಮಾಲಕರೂ, ಉಪ್ಪಿನಂಗಡಿ ಫಿಶ್‌ಲ್ಯಾಂಡ್ ಹೋಟೆಲ್‌ನ ಮಾಲಕರೂ ಆದ ವಸಂತ ಗುಂಡಿಜೆ ಅವರು ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿ, ನಮ್ಮಲ್ಲಿ ಅಡಿಕೆ, ತೆಂಗಿನಕಾಯಿ ಹಾಗೂ ಕಾಡುತ್ಪತ್ತಿಯನ್ನು ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಬೆಲೆಗೆ ಖರೀದಿ ಮಾಡಲಾಗುವುದು. ರೈತರು ಸಹಕಾರ ನೀಡುವಂತೆ ಹೇಳಿದರು.