ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯ ಪಡುಬೆಟ್ಟು ಒಕ್ಕೂಟದ ವಾರ್ಷಿಕೋತ್ಸವ ಸಮಾರಂಭವು ಪಡುಬೆಟ್ಟು ದ ಕ ಜಿ. ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .ಪಡುಬೆಟ್ಟು ಒಕ್ಕೂಟದ ಅಧ್ಯಕ್ಷ ಜಾನ್ ಮೊಂತೇರೋ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಅತಿಥಿ ಶ್ರೀ ಕ್ಷೇ. ಧ. ಗ್ರಾ. ಯೋಜನೆ ಕಡಬ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಮನೆಯಲ್ಲಾಗಲಿ ಸಂಘದಲ್ಲಾಗಲಿ ಸಣ್ಣಪುಟ್ಟ ವಿಚಾರಗಳ ಬಗ್ಗೆ ಮನಸ್ತಾಪವನ್ನು ಮಾಡದೆ ಅದನ್ನು ವಿಮರ್ಶೆ ಮಾಡಿಕೊಂಡು ಬಗೆಹರಿಸಿಕೊಳ್ಳುವುದು, ಸಂಘ ಅಂದರೆ ಒಂದು ದೋಣಿ ಇದ್ದ ಹಾಗೆ ಸಾಲ ಎಂದರೆ ಏಣಿ ಇದ್ದ ಹಾಗೆ ಎಂದರು.
ಕೇಂದ್ರ ಒಕ್ಕೂಟ ಅಧ್ಯಕ್ಷ ಸಂತೋಷ್ ಕೇನ್ಯ,ನೆಲ್ಯಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸಲಾಂ ಬಿಲಾಲ್, ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ನೆಲ್ಯಾಡಿ ವಲಯದ ಅಧ್ಯಕ್ಷ ಕುಶಾಲಪ್ಪಗೌಡ ಪಿ.ಎನ್.ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೖಸಿದರು.
ಶ್ರೀ ಶಾಸ್ತರೇಶ್ವರ ದೇವಸ್ಥಾನದ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು ಮಾತನಾಡಿ, ಸರಕಾರದ ಕೆಲಸಕ್ಕಿಂತ ಒಂದು ಹೆಜ್ಜೆ ಮುಂದಿಟ್ಟು ಕೆಲಸ ಮಾಡುವವರೆಂದರೆ ಖಾವಂದರು ಎಂದರು. ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ ಮಾತನಾಡಿ, ಒಕ್ಕೂಟದ ಸದಸ್ಯರ ಕುಟುಂಬ ಪ್ರಗತಿಪರ ಕುಟುಂಬಗಳಾಗಿ ಇನ್ನಷ್ಟು ಅಭಿವೃದ್ಧಿಯನ್ನು ಹೊಂದಲಿ ಎಂದರು.
ವಲಯದ ಮೇಲ್ವಿಚಾರಕರು ಸ್ವಾಗತಿಸಿದರು, ರಜನಿ ನಿರೂಪಿಸಿ, ಸೇವಾ ಪ್ರತಿನಿಧಿಯಾದ ಮೋಹಿನಿ ವಂದಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಶಾಸ್ತಾರೇಶ್ವರ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಂತರ ತಂಡದ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಅನೇಕ ಗಣ್ಯರು ಭಾಗವಹಿಸಿದ್ದರು.