ಪುತ್ತೂರು: ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆಯ ಫಲಿತಾಂಶ ಘೋಷಣೆಯಾಗಿದ್ದು, ಆಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಈ ಕೆಳಗಿನ ವ್ಯಕ್ತಿಗಳು ನಿರ್ದೇಶಕರುಗಳಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಫೆ.28 ರಂದು ನಡೆಯಲಿದೆ ಎಂದು ರಿಟರ್ನಿಂಗ್ ಆಫೀಸರ್ ಶೋಭಾ ಎನ್.ಎಸ್ರವರು ಅಧಿಕೃತವಾಗಿ ತಿಳಿಸಿರುತ್ತಾರೆ.
ಶಾಂತಿಗೋಡು, ಮುಂಡೂರು, ಕೆಮ್ಮಿಂಜೆ ಗ್ರಾಮಗಳ ಮೂರ್ತೆದಾರರ ಕ್ಷೇತ್ರದಿಂದ ಗಣೇಶ್ ಸಾಲ್ಯಾನ್ ಪಜಿಮಣ್ಣು ಹಾಗೂ ದಾಮೋದರ್ ಪೂಜಾರಿ ಕೆ ಕರ್ಪುತ್ತಮೂಲೆ, ನರಿಮೊಗರು, ಸರ್ವೆ, ಸವಣೂರು, ಪುಣ್ಚಪ್ಪಾಡಿ ಗ್ರಾಮಗಳ ಮೂರ್ತೆದಾರರ ಕ್ಷೇತ್ರದಿಂದ ಎಚ್.ಅಣ್ಣಿ ಪೂಜಾರಿ ಹಿಂದಾರು, ಬೆಳಂದೂರು, ಕಾಮಣ, ಕುದ್ಮಾರು ಗ್ರಾಮಗಳ ಮೂರ್ತೆದಾರರ ಕ್ಷೇತ್ರದಿಂದ ಜಯಂತ್ ಪೂಜಾರಿ ಕೆ.ಕೊಡಂಗೆ, ಬೆಳಂದೂರು, ಕಾಮಣ, ಕುದ್ಮಾರು ಗ್ರಾಮಗಳ ಸಾಮಾನ್ಯ ಸ್ಥಾನದಿಂದ ಸತೀಶ್ ಕುಮಾರ್ ಕೆಡೆಂಜಿ,ನರಿಮೊಗರು, ಸರ್ವೆ, ಸವಣೂರು, ಪುಣ್ಚಪ್ಪಾಡಿ ಗ್ರಾಮಗಳ ಸಾಮಾನ್ಯ ಸ್ಥಾನದಿಂದ ಉದಯ ಕುಮಾರ್ ಕೋಲಾಡಿ, ಹಿಂದುಳಿದ ವರ್ಗ ಪ್ರವರ್ಗ ‘ಎ’ ಮೀಸಲು ಸ್ಥಾನದಿಂದ ಸಂತೋಷ್ ಕುಮಾರ್ ಮರಕ್ಕೂರ್, ಮಹಿಳಾ ಮೀಸಲು ಸ್ಥಾನದಿಂದ ಶ್ರೀಮತಿ ಗೀತಾ ಕೆ ಕುರೆಮಜಲು ಹಾಗೂ ಶ್ರೀಮತಿ ಪದ್ಮಾವತಿ ಮುಂಡೋಡಿರವರು ಆಯ್ಕೆಯಾಗಿದ್ದಾರೆ.