ಪುತ್ತೂರು : ಗ್ರಾಮ ಪಂಚಾಯತ್ ಬಲ್ನಾಡು ಹಾಗೂ ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಕಲ್ಲಾರೆ ಇವುಗಳ ಜಂಟಿ ಆಶ್ರಯದಲ್ಲಿ ಫೆ.19 ರಿಂದ ಮಾ.4 ರ ವರೆಗೆ , ಸುಮಾರು 15 ದಿನಗಳ ತನಕ ನಡೆಯಲಿರುವ ಉಚಿತ ಪೂಟ್ ಫಲ್ಸ್ ಥೆರಪಿ ಶಿಬಿರಕ್ಕೆ ಫೆ.19 ರಂದು ಚಾಲನೆ ನೀಡಲಾಯಿತು.
ಉದ್ಘಾಟನೆಯನ್ನು ಮಂಗಳೂರು ಕರಾವಳಿ ಪ್ರಾಧಿಕಾರ ಇದರ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೆರವೇರಿಸಿ , ಶಿಬಿರದ ಯಶಸ್ವಿಗೆ ಹಾರೈಸಿದರು.
ಅಧ್ಯಕ್ಷತೆಯನ್ನು ಬಲ್ನಾಡು ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾ , ಬೆಳಿಯೂರು ಕಟ್ಟೆ ಹಾಲು ಉತ್ಪಾದಕರ ಸಹಕಾರಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ , ಬಲ್ಮಾಡು ಪಂಚಾಯತ್ ಉಪಾಧ್ಯಕ್ಷ ರವಿಚಂದ್ರ ನಾಜ ಮತ್ತು ಬಲ್ನಾಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ ಆರ್ ಹಾಜರಿದ್ದರು.
ಯಾವುದೇ ರೀತಿಯ ಔಷಧವಿಲ್ಲದೆಯೇ ರಕ್ತ ಸಂಚಾರ ಮತ್ತು ನರ ಸಂಬಂಧಿತ ಕಾಯಿಲೆಗಳಿಗೆ ಉಚಿತ ಥೆರಫಿಯೂ ಪ್ರತಿ ದಿನ ಬೆ.9 -30 ರಿಂದ ಸಂಜೆ 4-30 ರ ವರೆಗೆ ನಡೆಯಲಿದ್ದು , ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೆಮ್ಮದಿ ವೆಲ್ನೆಸ್ ಸೆಂಟರ್ ಕಲ್ಲಾರೆ ಇದರ ಮುಖ್ಯಸ್ಥರಾಗಿರುವ ಕೆ. ಪ್ರಭಾಕರ ಸಾಲ್ಯಾನ್ ನೀಡಿದರು.
ಹಲವರು ಮಂದಿ ಭಾಗವಹಿಸಿ , ಶಿಬಿರದಲ್ಲಿ ಪಾಲ್ಗೊಂಡು , ಥೆರಪಿಯ ಪ್ರಯೋಜನ ಪಡೆದುಕೊಂಡರು.
ಇವೆಲ್ಲಾ ಸಮಸ್ಯೆಗಳಿಂದ ಪಾರಾಗಬಹುದು….
*ಮಧುಮೇಹ * ಅಧಿಕ ರಕ್ತದೊತ್ತಡ * ಸಂಧಿವಾತ ,ವರಿಕೋಸ್ ವೇನ್ * ಸ್ನಾಯು ಸೆಳೆತ * ಊತ*ಸಯಾಟಿಕಾ * ಸರ್ವಿಕಲ್ ಸ್ಪಾಂಡಿಲೈಟಿಸ್ಪಾ ರ್ಕಿನ್ಸನ್ * ನಿದ್ರಾಹೀನತೆ * ಪಾರ್ಶ್ವವಾಯು * ಬೆನ್ನು ನೋವು ಹಾಗೂ ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ಸಮಸ್ಯೆಗಳಿಗೆ ಸಂಪೂರ್ಣ ವಿರಾಮ ಸಿಗಲಿದ್ದು , ಫೆ. 21 ರಂದು ಶಿಬಿರ ಕೊನೆಯಾಗಲಿದೆ.ಮಾಹಿತಿಗಾಗಿ ಮೊ.9164298414
ಫೆ.22: ಬನ್ನೂರು ಪಂಚಾಯತಿಯಲ್ಲಿ ಶಿಬಿರ ಉದ್ಘಾಟನೆ…
ಫೆ.22 ರಿಂದ ಮಾರ್ಚ್ 7 ತನಕ ಬನ್ನೂರು ಪಂಚಾಯತ್ ಸಭಾಂಗಣದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ನಡೆಯಲಿದ್ದು , ಫೆ.22 ರಂದು
ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸ್ಮಿತಾ ಎನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು , ಮುಖ್ಯ ಅತಿಥಿಗಳಾಗಿ ಬನ್ನೂರು ಪಂಚಾಯತ್ ಉಪಾಧ್ಯಕ್ಷ ಶೀನಪ್ಪ ಕುಲಾಲ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ ಭಾಗವಹಿಸಲಿದ್ದಾರೆ. ಶಿಬಿರದ ಬಗ್ಗೆ ಪೂರ್ಣ ಮಾಹಿತಿಯನ್ನು ಕಲ್ಲಾರೆ ಕಂಪಾನಿಯೋ ನೆಮ್ಮದಿ ವೆಲ್ನೆಸಗ ಸೆಂಟರ್ ಮುಖ್ಯಸ್ಥರಾದ ಪ್ರಭಾಕರ್ ಸಾಲ್ಯಾನ್ ನೀಡಲಿದ್ದಾರೆ.