ಪುತ್ತೂರು: ಎರಡು ವರ್ಷಗಳಿಗೊಮ್ಮೆ ನಡೆಯುವ ಜಾಗತಿಕ ಮಟ್ಟದ ಸಿಂಗಾಪುರ ಏರ್ ಶೋ ಈ ಬಾರಿ ಫೆ.20ರಿಂದ 24ರವರೆಗೆ ಜರಗಲಿದ್ದು ಕೇಂದ್ರ ರಕ್ಷಣಾ ಸಂಶೋಧನಾ ವಿಭಾಗದ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶ್ ರಾವ್ ಭಾರತದಿಂದ ಪಾಲ್ಗೊಳ್ಳುವ ಪ್ರತಿಷ್ಠಿತ ಕಂಪನಿಯಿಂದ ಆಮಂತ್ರಿತರಾಗಿ ಭಾಗವಹಿಸಲಿದ್ಧಾರೆ.
ದೇಶದ ಯಶಸ್ವಿ ಯೋಜನೆಯಾದ ತೇಜಸ್ ಯುದ್ಧ ವಿಮಾನ ವಿನ್ಯಾಸ ಕೇಂದ್ರದಲ್ಲಿ ಕೂಡಾ ಮುಖ್ಯ ಪಿ.ಆರ್.ಓ ಆಗಿ ಗಮನಾರ್ಹ ಸೇವೆ ಸಲ್ಲಿಸಿರುವ ಜಯಪ್ರಕಾಶ್ ರಾವ್ ನಾಡಿನ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿರುವುದಲ್ಲದೆ 7 ಜನಪ್ರಿಯ ಕನ್ನಡ ಪುಸ್ತಕಗಳನ್ನು ಬರೆದಿರುತ್ತಾರೆ. ಅವರ ಸೇವಾವಧಿಯಲ್ಲಿ 3 ರಕ್ಷಣಾ ಸಚಿವರುಗಳಲ್ಲದೆ ಡಾ.ಕಲಾಂ ಅವರ ಶಿಷ್ಟಾಚಾರ ಹಾಗೂ ಸಮನ್ವಯ ಆಧಿಕಾರಿಯಾಗಿ ದುಡಿದಿದ್ದಾರೆ. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಅವರು ಓರ್ವ ಅಂತರಾಷ್ಟ್ರೀಯ ಮಟ್ಟದ ತರಬೇತುದಾರರಲ್ಲದೆ ಹಲವು ವಿದ್ಯಾಸoಸ್ಥೆಗಳು, ಎಂಜಿನಿಯರಿಯರಿಂಗ್ ಕಾಲೇಜು, ಪೊಲೀಸ್ ಅಕಾಡೆಮಿ, ಏ.ಟಿ.ಏ ಹಾಗೂ ವಿಶ್ವ ವಿದ್ಯಾಲಯಗಳ ಗೌರವ ಉಪನ್ಯಾಸಕರಾಗಿ ತಮ್ಮ ನಿವೃತ್ತ ಜೀವನ ನಡೆಸುತ್ತಿದ್ದಾರೆ.