ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಮಕ್ಕಳ ಗ್ರಾಮಸಭೆಯು ಫೆ.21 ರಂದು ತಿಂಗಳಾಡಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಲಕ್ಮೀ ಬಲ್ಲಾಳ್ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೆದಂಬಾಡಿ ಗ್ರಾಮ ಪಂಚಾಯತಿಯ ತಿಂಗಳಾಡಿ ಮತ್ತು ಕೆದಂಬಾಡಿ ಶಾಲೆಯ ಮಕ್ಕಳು ಈ ಗ್ರಾಮ ಸಭೆಯಲ್ಲಿ ಭಾಗವಹಿಸಿ ಹಲವಾರು ಬೇಡಿಕೆಗಳನ್ನು ವ್ಯಕ್ತಪಡಿಸಿದರು . ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಚೈಲ್ಯ್ಡ್ ರೈಟ್ ಸಂಸ್ಥೆಯ ಪುತ್ತೂರು ತಾಲೂಕು ಸಂಯೋಜಕಿ ಕಸ್ತೂರಿ ಬೊಳುವಾರು ಮಕ್ಕಳ ಹಕ್ಕುಗಳಿಗೆ ಸಂಬಂದಿಸಿದ ಕಾನೂನು ವ್ಯವಸ್ಥೆಗಳು ಮತ್ತು ಮಕ್ಕಳ ರಕ್ಷಣೆ ಶಿಕ್ಷಣ ಮತ್ತು ಪೋಷಣೆಯಲ್ಲಿ ಸಮುದಾಯ ಮತ್ತು ಗ್ರಾಮ ಪಂಚಾಯತುಗಳ ಜವಾಬ್ದಾರಿ ಕುರಿತು ಮಾಹಿತಿ ನೀಡಿದರು.
ಕೆದಂಬಾಡಿ ಶಾಲೆಯ ಮಕ್ಕಳು ಶಾಲೆಗೆ 4 ಎಕ್ರೆ ಜಾಗ ಇದ್ದು ಈ ಜಾಗದಲ್ಲಿ ಸುಂದರ ಉದ್ಯಾನವನ ನಿಮಾಣ ಮಾಡಬೇಕು ಮತ್ತು ಈ ಜಾಗದಲ್ಲಿ ಬೆಳೆದಿರುವ ಅಕೇಶಿಯಾ ಗಿಡಗಳನ್ನು ಕಡಿಯಬೇಕು, ಈಗಾಗಲೆ ಪಂಚಾಯತ್ ನಿಂದ ಶಾಲಾ ಆವರಣ ಗೋಡೆ ಮಾಡಿಕೊಟ್ಟಿದ್ದು ಉಳಿದ ಭಾಗವನ್ನು ಪೂರ್ತಿ ಮಾಡಿಸಬೇಕು . ಈ ಸಮಸ್ಯೆಯಿಂದ ಶಾಲಾ ಕೈತೋಟಕ್ಕೆ ದನಕರುಗಳು ಬರುತ್ತಿವೆ, ಶಾಲೆಗೆ ಸುಣ್ಣ ಬಣ್ಣ ಹಚ್ಚಬೇಕು, ಶಾಲೆಗೆ ಪಿಟಿ ಟೀಚರ್ ಒದಗಿಸಬೇಕು ಮತ್ತು ಆಟದ ಸಾಮಾಗ್ರಿ ಒದಗಿಸಬೇಕು, ಶಾಲೆಯ ವಿದ್ಯುತ್ ವಯರಿಂಗ್ ಕಿತ್ತು ಹೋಗಿದ್ದು ಇದನ್ನು ಸರಿ ಮಾಡಿಸ ಬೇಕು, ಶಾಲೆಗ ಸರಿಯಾಗಿ ನೀರಿನ ಸೌಲಭ್ಯವಿಲ್ಲದೆ ಇರುವುದರಿಂದ ಶೌಚಾಲಯ ಬಳಸಲು ಅಸಾಧ್ಯವಾಗಿದ್ದು ನೀರು ನಿರಂತರ ಪೂರೈಸಬೇಕು ಹಾಗು ಶಾಲಾ ಆಟದ ಮೈದಾನಕ್ಕೆ ಕಬ್ಬಡ್ಡಿ ಕೋರ್ಟ್ ನಿಮಿರ್ಸಬೇಕು ಹಾಗು ಶಾಲಾ ನೀರಿನ ಬಾವಿಗೆ ಕಸ ಬೀಳದಂತೆ ನೆಟ್ ಅಳವಡಿಸಬೇಕು ಎಂದು ಬೇಡಿಕೆ ಮಂಡಿಸಿದರು.
ತಿಂಗಳಾಡಿ ಶಾಲೆಯ ಮಕ್ಕಳು ಮಧ್ಯಾಹ್ನಾದ ಬಿಸಿ ಊಟ ಸವಿಯಲು ಭೋಜನ ಹಾಲ್ , ಪಂಚಾಯತು ಗ್ರಂಥಾಲಯದಲ್ಲಿ ಕುಳಿತುಕೊಳ್ಳಲು ಪೀಟೋಪಕರಣದ ವ್ಯವಸ್ಥೆ ಮಾಡಬೇಕು, ಶಾಲಾ ಗೇಟಿನ ಬಳಿ ಇಂಟರ್ಲಕ್ ಅಳವಡಿಕೆ ಮಾಡಿಸಬೇಕು, ಊಟ ಮಾಡಿದ ನಂತರ ಕೈ ತೊಳೆಯಲು ಬೇಸಿನ್ ವ್ವವಸ್ಥೆ ಆಗಬೇಕು, ಶಾಲೆಗಳಿಗೆ ಕಿಟಕಿ ಬಾಗಿಲು ಒದಗಿಸಬೇಕು, ಶಾಲಾ ಶೌಚಾಲಯ ಬಳಸಲು ಯೋಗ್ಯವಾಗಿಲ್ಲವಾಗಿರುವುದರಿಂದ ಹೊಸ ಶೌಚಾಲಯ ಒದಗಿಸಬೇಕು ಇತ್ಯಾದಿ ಬೇಡಿಕೆ ಗಳನ್ನು ಸಭೆಯ ಮುಂದೆ ಮಂಡಿಸಿದರು.
ಪಂಚಾಯತ್ ಸಿಬ್ಬಂದಿ ಗಣ ರ ಸಾಲಿನ ಮಕ್ಕಳ ಹಕ್ಕುಗಳ ಗ್ರಾಮ ಸಭೆಯ ವರದಿಯನ್ನು ಮಂಡಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಆರತಿ , ಆರೋಗ್ಯ ಇಲಾಖೆಯ ತಿಂಗಳಾಡಿ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ವಿದ್ಯಾ . ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ರವರು ಇಲಾಖಾ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತು ಸದಸ್ಯರಾದ ವಿಠಲ ರೈ, ಭಾಸ್ಕರ ರೈ, ಎಂ ಪ್ರವೀಣ್ ಶೆಟ್ಟಿ ಹಾಗು ತಿಂಗಳಾಡಿ ಶಾಲೆಯ ಮುಖ್ಯ ಶಿಕ್ಷಕಿ ವಿಜಯ ಲಕ್ಷ್ಮಿ ಹಾಗು ಮಕ್ಕಳ ಪ್ರತಿನಿಧಿಯಾಗಿ ಕೆದಂಬಾಡಿ ಶಾಲೆಯ ಕು. ಅನುಷಾ ಮತ್ತು ತಿಂಗಳಾಡಿ ಶಾಲೆಯ ಕು.ಆಶ್ಲೇಷಾ ಉಪಸ್ಥಿತರಿದ್ದರು . ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.