ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಂತನಾ ದಿನಾಚರಣೆ

0

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್, ಗೈಡ್ಸ್ ಚಳುವಳಿಯ ಸಂಸ್ಥಾಪಕರಾದ ಲಾರ್ಡ್ ಬ್ಯಾಡನ್ ಪೊವೆಲ್ ರವರ ಜನ್ಮ ದಿನಾಚರಣೆ “ಚಿಂತನಾ ದಿನವನ್ನು” ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಬೆಳಗ್ಗೆ ಧ್ವಜ ವಂದನೆಯೊಂದಿಗೆ ಆರಂಭಗೊಂಡು, ಶಾಲಾ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ನೆರವೇರಿತು. ಲಾರ್ಡ್ ಬ್ಯಾಡನ್ ಪೊವೆಲ್ ರವರ ಭಾವ ಚಿತ್ರಕ್ಕೆ ಪುಷ್ಪನಮನದ ಬಳಿಕ ಸ್ಕೌಟ್ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಲಾರ್ಡ್ ಬ್ಯಾಡನ್ ಪೊವೆಲ್ ರವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ಶಿಕ್ಷಕಿಯರಾದ ವಿಲ್ಮಾ ಫೆರ್ನಾಂಡಿಸ್, ಭವ್ಯ, ನಳಿನಾಕ್ಷಿ, ಸುಶ್ಮಿತಾ, ದಿವ್ಯ, ಜೋಸ್ಲಿನ್, ಮಮತಾ ಹಾಗೂ ದೀಕ್ಷಾ ಉಪಸ್ಥಿತರಿದ್ದರು. ಕಬ್ ಶಿಕ್ಷಕಿ ಸುಶ್ಮಿತಾ ಸ್ವಾಗತಿಸಿದರು. ಕಬ್ ಶಿಕ್ಷಕಿ ದಿವ್ಯ ವಂದಿಸಿದರು. ಬುಲ್ ಬುಲ್ ಶಿಕ್ಷಕಿ ಜೋಸ್ಲಿನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here