ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿಸಿದ್ದೇನೆನ್ನುವ ಆರ್.ಅಶೋಕ್ ಅವರೇ ನಿಮಗೆ ನಾಚಿಕೆಯಾಗೋದಿಲ್ಲವೇ?-ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಪ್ರಶ್ನೆ

0

ಪುತ್ತೂರು:ರಾಷ್ಟ್ರದ ಕಾರ್ಯ, ಧರ್ಮ ರಕ್ಷಣೆಯ ಕಾರ್ಯ ಮಾಡುತ್ತಿರುವ ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿಸಿದ್ದೇನೆ ಎನ್ನುವ ಆರ್.ಅಶೋಕ್ ಅವರೇ, ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಪ್ರಶ್ನೆ ಮಾಡಿದ್ದಾರೆ.


ಕೋವಿಡ್ ಸಂದರ್ಭದಲ್ಲಿ ನೀವು ಆರಾಮದಿಂದ ಮಲಗಿದ್ದಾಗ ಸಮಾಜದ ಪ್ರತಿಯೊಂದು ಕಾರ್ಯ ಮಾಡಿದ ಬಜರಂಗದಳದ ಕಾರ್ಯಕರ್ತರನ್ನು ಹೇಗೆ ಮರೆತಿದ್ದೀರಿ?.ನೀವು ಅಽಕಾರಕ್ಕೇರಿದ್ದು ಕಾರ್ಯಕರ್ತರ ಸಂಘಟನೆ ಹಾಗು ಶ್ರಮದಿಂದಲೇ ಹೊರತು ನಿಮ್ಮ ಹಣದ ಮದದಿಂದ ಅಲ್ಲ.ದುರಹಂಕಾರದ ಮಾತನ್ನಾಡುತ್ತಿರುವ ಆರ್.ಅಶೋಕ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕೆಂದು ಭಾಜಪ ರಾಜ್ಯ ನಾಯಕರಿಗೆ ಆಗ್ರಹ ಮಾಡುತ್ತಿದ್ದೇವೆ ಎಂದು ಹಸಂತಡ್ಕ ತಿಳಿಸಿದ್ದಾರೆ.


ಧಾರ್ಮಿಕ ಸಂಸ್ಥೆಗಳ ಹಣ ದುರುಪಯೋಗ ಮಾಡದಂತೆ ಆಗ್ರಹ:
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿನಿಯಮದಡಿಯಲ್ಲಿ ಹಿಂದು ದೇವಾಲಯಗಳ ಸಾಮಾನ್ಯ ನಿಽಯನ್ನು ಪರ್ಸಂಟೇಜ್ ಆಧಾರದಲ್ಲಿ ದೋಚುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರಕಾರ ಮಾಡಲು ಹೊರಟಿದೆ.ತಾಕತ್ ಇದ್ದರೆ ಇತರೇ ಮತಗಳ ಧಾರ್ಮಿಕ ಕೇಂದ್ರಗಳ ಹಣವನ್ನು ಇತರೆ ಯೋಜನೆಗಳಿಗೆ ವಿನಿಯೋಗಿಸಿ,ಆಗ ಒಪ್ಪಿಕೊಳ್ತೇವೆ.ಇಲ್ಲವಾದಲ್ಲಿ ರಾಜ್ಯಾದ್ಯಂತ ಚಳುವಳಿಗಳನ್ನು ನಡೆಸಿ ನಮ್ಮ ಧಾರ್ಮಿಕ ಸಂಸ್ಥೆಗಳ ಹಣವನ್ನು ದುರುಪಯೋಗ ಮಾಡದಂತೆ ತಡೆದು ನಿಮ್ಮ ಸರಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಮುರಳಿಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.


ಶಿಕ್ಷಕಿ ಪ್ರಭಾ ವಿರುದ್ಧ ಕೇಸು ದಾಖಲಿಸಿ:
ಮಂಗಳೂರಿನ ಜೆರೋಸಾ ಶಾಲೆಯ ಘಟನೆಯಲ್ಲಿ ಶಾಸಕರು ಹಾಗು ನಮ್ಮ ಸಂಘಟನೆಯ ಪ್ರಮುಖರ ವಿರುದ್ಧ ಕೇಸು ದಾಖಲಿಸಿದ್ದೀರಿ ಮತ್ತು ಅದನ್ನು ನಾವು ಸ್ವೀಕಾರ ಮಾಡುತ್ತೇವೆ.ಆದರೆ ಸರಕಾರ, ಆಡಳಿತ ಧರ್ಮದ ಅನುಸಾರವಾಗಿ, ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಪ್ರಚೋದನಾಕಾರಿ ಹೇಳಿಕೆ ಕೊಟ್ಟ ಶಿಕ್ಷಕಿ ಪ್ರಭಾ ಅವರ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸದೇ ಇದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟವನ್ನು ನಡೆಸುತ್ತೇವೆ ಎಂದು ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉಳ್ಳಾಲದ ಶಿಕ್ಷಕಿಯನ್ನು ವಜಾಗೊಳಿಸಿದ ಕ್ರಿಶ್ಚಿಯನ್ ಸಂಸ್ಥೆಗಳೇ, ನೀವು ಇದೇ ರೀತಿ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸಿದರೆ ಯಾವೊಬ್ಬ ಹಿಂದುವೂ ನಿಮ್ಮ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವುದಿಲ್ಲವೆಂದು ತೀರ್ಮಾನ ಮಾಡಬೇಕಾದೀತು ಎಂದು ನಿಮಗೆ ಎಚ್ಚರಿಕೆ ನೀಡುತ್ತಿರುವುದಾಗಿಯೂ ಮುರಳಿಕೃಷ್ಣ ಹಸಂತಡ್ಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here