ಪುತ್ತೂರು: ಮಂಗಳೂರಿನ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದ “ನಮ್ಮ ಪುತ್ತೂರು ಮೇಳ” ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನೆಹರೂ ನಗರದ ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ಎಡ್ವರ್ಡ್ ಕಂನ್ವೆನ್ಷನ್ ಹಾಲ್ನಲ್ಲಿ ಫೆ.24ರಂದು ಆರಂಭಗೊಂಡಿತು. ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ.ವಿಜಯ ಹಾರ್ವಿನ್ರವರು ರಿಬ್ಬನ್ ಕಟ್ ಮಾಡಿ ಮೇಳ ಉದ್ಘಾಟಿಸಿ ಮಾತನಾಡಿ ಮೊದಲ ಬಾರಿಗೆ ಸುದಾನದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿದೆ. ಸಣ್ಣ ವ್ಯಾಪಾರ ಮಾಡುವ ಮಹಿಳೆಯರಿಗೆ ಪ್ರಯೋಜನವಾಗಲಿ. ಮಹಿಳಾ ಉದ್ಯಮಿಗಳಿಗೆ ಶುಭವಾಗಲಿ ಎಂದು ಹೇಳಿದರು.
ಮಂಗಳೂರಿನ ಕುಶಲಕರ್ಮಿಗಳು ಸಿದ್ಧಪಡಿಸಿದ ವಿವಿಧ ಬ್ರ್ಯಾಂಡ್ಗಳ ಸೀರೆ, ಕುರ್ತಾ, ರೆಡಿಮೇಡ್ ಬ್ಲೌಸ್, ಬೆಡ್ ಲಿನನ್, ಪರ್ಸ್, ಆಭರಣ, ಸೌಂದರ್ಯ ಸಾಧನಗಳು ಮೇಳದಲ್ಲಿ ಲಭ್ಯವಿದೆ. ಸಂಯೋಜಕರಾದ ಸ್ವೀಡಲ್ ಪ್ರಿನ್ಸಿಯಾ, ಮೇಘನಾ ಪಕ್ಕಳ, ಸುದಾನ ಶಾಲೆಯ ಶೋಭಾ ನಾಗರಾಜ್, ರೋಟರಿ ಸಂಸ್ಥೆಯ ರಾಜೇಶ್ವರಿ ಆಚಾರ್, ಸೆನೊರಿಟಾ ಆನಂದ್, ನಾಯರ್ ಕನ್ಸ್ಟ್ರಕ್ಷನ್ನ ಲವ್ಲಿ ಸೂರಜ್ ನಾಯರ್ ಉಪಸ್ಥಿತರಿದ್ದರು.
ಫೆ.25 ಕೊನೆಯ ದಿನ
“ನಮ್ಮ ಪುತ್ತೂರು ಮೇಳ 2024” ಪ್ರದರ್ಶನ ಮತ್ತು ಮಾರಾಟ ಬೆಳಿಗ್ಗೆ 10.೦೦ ರಿಂದ ಸಂಜೆ 7.೦೦ ರವರೆಗೆ ನಡೆಯಲಿದ್ದು ಫೆ.25 ಕೊನೆಯ ದಿನವಾಗಿದೆ.