ಬಡಗನ್ನೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್ ಶ್ರೀ ದೇಯಿ ಬೈದೆತಿ – ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರ ಗೆಜ್ಜೆಗಿರಿ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.27ರಂದು ಬೆಳಗ್ಗೆ ಗಣಪತಿ ಹೋಮ, ಗುರುಪೂಜೆ, ದೈವ ಸಾನಿಧ್ಯ ಶುದ್ಧಿಕಲಶ ನಡೆಯಿತು. ಬಳಿಕ ಶ್ರೀ ಧೂಮಾವತಿ ನೇಮೋತ್ಸವ, ಪ್ರಸಾದ ವಿತರಣೆ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಿತು.
ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಪೀತಾಂಬರ ಹೆರಾಜೆ, ಜಾತ್ರೋತ್ಸವ ಕಾರ್ಯಾಧ್ಯಕ್ಷ ಶೈಲೇಂದ್ರ ವೈ ಸುವರ್ಣ, ಗೌರವಾಧ್ಯಕ್ಷ ಜಯಂತ ನಡುಬೈಲ್, ಮೋಕ್ತೇಸರ ಶ್ರೀಧರ ಪೂಜಾರಿ, ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಚಿತ್ತರಂಜನ್ ಕಂಕನಾಡಿ ಗರಡಿ, ಮುಂಬೈ ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ ಅಮೀನ್, ಬಿಲ್ಲವ ಚೇಂಬರ್ ಅಧ್ಯಕ್ಷ ಎನ್.ಟಿ. ಪೂಜಾರಿ ಮುಂಬೈ, ಗುರು ಚಾರಿಟೇಬಲ್ ಅಧ್ಯಕ್ಷ ಜಯಾನಂದ ಪೂಜಾರಿ, ಚಂದ್ರಹಾಸ ಅಮೀನ್ ಗೋವಾ, ಪ್ರಶಾಂತ್ ಪೂಜಾರಿ ಮಸ್ಕತ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜೆ, ಸಂಜೀವ ಪೂಜಾರಿ ಕೂರೇಲು, ಪ್ರೇಮ್ ಸನಿಲ್ ಕನಕರಬೆಟ್ಟು, ಜಯರಾಮ ಪುಜಾರಿ ಶಕ್ತಿನಗರ, ಪೃಥ್ವಿರಾಜ್ ಕಂಕನಾಡಿ, ಕಂಕನಾಡಿ ಯುವವಾಹಿನಿ ಅಧ್ಯಕ್ಷ ಲೋಕೇಶ್ ಅಮೀನ್, ಕಂಕನಾಡಿ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ದಿನೇಶ್ ಅಂಚನ್, ಮಂಗಳೂರು ಯುವವಾಹಿನಿ ಮಹಿಳಾ ಘಟಕದ ಅಧ್ಯಕ್ಷೆ ಶುಭ ರಾಜೇಂದ್ರ ಹಾಗೂ ಸಮಿತಿ ಪದಾಧಿಕಾರಿಗಳು ಸದಸ್ಯರು ಮತ್ತು ಊರ ಭಕ್ತಾಧಿಗಳು ಭಾಗವಹಿಸಿದ್ದರು.
ಫೆ.28ರಂದು 5.30 ರಿಂದ ಗಣಹೋಮ, ಗುರುಪೂಜೆ ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯ ಧರ್ಮ ಚಾವಡಿಯಲ್ಲಿ ನವಕಕಲಶ ಪ್ರಧಾನಹೋಮ, ಅಲಂಕಾರ ಪೂಜೆ, ಮಹಾಪೂಜೆ, ಮಧ್ಯಾಹ್ನ 12.30 ಸತ್ಯ ಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30 ರಿಂದ ಮೂಲಸ್ಥಾನ ಗರಡಿಯಲ್ಲಿ ಶುದ್ದಹೋಮ ಕಲಶ 5.30 ರಿಂದ ಧೂಮಾವತಿ ಬಲಿ ಸೇವೆ, ಮೂಲಸ್ಥಾನ ಗರಡಿಯಲ್ಲಿ ಶುದ್ಧಕಲಶ ಕ್ರಿಯೆಗಳು, 6.30 ರಿಂದ ಸತ್ಯ ಧರ್ಮ ಚಾವಡಿಯಲ್ಲಿ ದೀಪಾರಾಧನೆ ಮಹಾಪೂಜೆ.
ರಾತ್ರಿ 7 ಕ್ಕೆ ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಡುವುದು ರಾತ್ರಿ, 8.30 ರಿಂದ ದೇಯಿಬೈದೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ, 9ರಿಂದ ದೇಯಿಬೈದಿತಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಬೈದರ್ಕಳ ನೇಮೋತ್ಸವ, ಸಮಾಧಿಯಲ್ಲಿ ದೀಪಾರಾಧನೆ,ರಾತ್ರಿ 10.30 ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಲಿರುವುದು.