ಪುತ್ತೂರಿನಲ್ಲಿ ವಿಝ್ಡಮ್ ಸಂಸ್ಥೆಗಳ ನೆಟ್‌ವರ್ಕ್ ಸೆಂಟರ್ ಉದ್ಘಾಟನೆ

0

ವಿದ್ಯಾರ್ಥಿಗಳ ಭವಿಷ್ಯದ ಜೀವನಕ್ಕೆ ವಿಝ್ಡಂ ಸಂಸ್ಥೆ ಮುನ್ನುಡಿ-ಸಂಜೀವ ಮಠಂದೂರು

ಪುತ್ತೂರು: ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಕೋನವಿಟ್ಟುಕೊಂಡು, ಅವರ ಸ್ವಾವಲಂಬಿ ಜೀವನಕ್ಕೆ ಮುನ್ನುಡಿ ಬರೆಯಲು ವಿಝ್ಡಮ್ ಸಂಸ್ಥೆಯು ಕಾರ್ಯಪ್ರವೃತ್ತವಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರುರವರು ಹೇಳಿದರು.

ಚಿತ್ರ: ನವೀನ್ ರೈ ಪಂಜಳ

ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವ, ಅವರ ಸುಂದರ ಕನಸಿಗೆ ಜೀವ ತುಂಬುವ ಸಂಸ್ಥೆಯಾಗಿರುವ ವಿಝ್ಡಮ್ ಇನ್ಸ್ಟಿಟ್ಯೂಶನ್ಸ್ ನೆಟ್‌ವರ್ಕ್ ಇದರ ಪುತ್ತೂರಿನ ಶಾಖೆಯು ದರ್ಬೆ ಅಶ್ವಿನಿ ಹೊಟೇಲ್ ಬಳಿಯ ಆರಾಧ್ಯ ಆರ್ಕೇಡ್‌ನ ಪ್ರಥಮ ಮಹಡಿಯಲ್ಲಿ ಫೆ.28 ರಂದು ಲೋಕಾರ್ಪಣೆಗೊಂಡಿದ್ದು, ಇದರ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಕಾಲದಲ್ಲಿ ದೇಶದ ಸಾಕ್ಷರತೆ ಶೇ.5 ರಿಂದ ಶೇ.7 ಇತ್ತು. ಇಂದು ಇದು ಶೇ.90ಕ್ಕೇರಿದೆ. ದಕ್ಷಿಣ ಕನ್ನಡ ಜಿಲ್ಲೆಯು ಶೇ.99 ಸಾಕ್ಷರತೆ ಹೊಂದಿದೆ. 1992ರಲ್ಲಿ ಸಾಕ್ಷರತಾ ಆಂದೋಲನದ ಮೂಲಕ ದ.ಕ ಜಿಲ್ಲೆಯನ್ನು ಶೇ.100 ಸಾಕ್ಷರತಾ ಜಿಲ್ಲೆಯನ್ನಾಗಿ ಮಾಡಬೇಕೆನ್ನುವ ಕನಸು ಇಂದು ಸಾಕಾರಗೊಂಡಿದೆ. ಪ್ರಸ್ತುತ ವಿದ್ಯಾಮಾನದಲ್ಲಿ ವಿದ್ಯೆ ಕಲಿತವರು ತನಗೆ ವೈಟ್ ಕಾಲರ್ ಕೆಲಸ ಬೇಕೆನ್ನುವ ಆದಮ್ಯ ಆಸೆ ಇದ್ದರೂ, 140 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ಎಲ್ಲರಿಗೂ ಉದ್ಯೋಗ ನೀಡಲು ಕಷ್ಟಸಾಧ್ಯ. ಅದಕ್ಕಾಗಿ ಆಭ್ಯರ್ಥಿಗಳನ್ನು ತನ್ನ ಕಾಲ ಮೇಲೆ ನಿಲ್ಲುವಂತೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಝ್ಡಮ್ ಸಂಸ್ಥೆಯು ಇಂದು ಬೆಳೆದು ನಿಂತಿದೆ.


ವಿಝ್ಡಮ್ ಸಂಸ್ಥೆಯಿಂದ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ವೇದಿಕೆ-ವಂ|ಸ್ಟ್ಯಾನಿ ಪಿಂಟೊ:
ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಮುತ್ತಿನನಗರಿ ಪುತ್ತೂರಿನಲ್ಲಿ ವಿಝ್ಡಮ್ ಸಂಸ್ಥೆಯು ಹುಟ್ಟು ಹಾಕುವ ಮೂಲಕ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ಹಾಗೂ ಜೀವನಕ್ಕೆ ತಕ್ಕುದಾದ ವೇದಿಕೆಯನ್ನು ನಿರ್ಮಿಸಿಕೊಟ್ಟಿದೆ. ಪದವಿ ಆದ ಬಳಿಕ ವಿದ್ಯಾರ್ಥಿಗಳು ತಮ್ಮ ಜೀವನೋಪಾಯಕ್ಕೆ ಯಾವುದು ಉತ್ತಮ ಕೆಲಸ ಎಂಬ ಚಿಂತೆ ಆವರಿಸುವಂತೆ ಮಾಡುವುದು ಸಹಜ. ಭಾರತ ದೇಶದ ಜನರು ಇಡೀ ವಿಶ್ವದಲ್ಲಿ ಕಾಣ ಸಿಗುತ್ತಾರೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ರಷ್ಯಾ-ಉಕ್ರೇನ್ ಯುದ್ಧ ಉದಾಹರಣೆಯಾಗಿದೆ. ಉಕ್ರೇನ್ ಎಂಬ ಪುಟ್ಟ ರಾಷ್ಟ್ರದಲ್ಲಿ ಎಂಬಿಬಿಎಸ್ ವ್ಯಾಸಂಗ ಕಲಿಯಲು ಇಲ್ಲಿನ ಸಾವಿರಾರು ವಿದ್ಯಾರ್ಥಿಗಳು ತೆರಳುವುದು ನೋಡಿದಾಗ ವಿದ್ಯಾಭ್ಯಾಸದ ಮಹತ್ವ ಎದ್ದು ಕಾಣುತ್ತದೆ. ಇದೀಗ ವಿದ್ಯಾರ್ಥಿಗಳ ಸುಂದರ ಭವಿಷ್ಯಕ್ಕೆ ವಿಝ್ಡಮ್ ಸಂಸ್ಥೆ ಪುತ್ತೂರಿಗೆ ಕಾಲಿಟ್ಟಿದ್ದು, ವಿಝ್ಡಮ್ ಸಂಸ್ಥೆ ಇರುವ ರಸ್ತೆಯು ಮುಂದಿನ ದಿನಗಳಲ್ಲಿ ಸ್ಮಾರ್ಟ್ ರಸ್ತೆಯಾಗಿ ಪರಿಣಮಿಸುತ್ತಿದ್ದು ವಿದ್ಯಾರ್ಥಿಗಳು ಸ್ಮಾರ್ಟ್ ಆಗಿ ಹೊರಹೊಮ್ಮಲಿ ಎಂದರು.


ಅಕ್ಷಯ ಕಾಲೇಜು, ವಿಝ್ಡಮ್ ಸಂಸ್ಥೆಯಿಂದ ಉತ್ತಮ ಹೆಜ್ಜೆ-ಅಬ್ದುಲ್ ರಹಿಮಾನ್:
ಕುಂಬ್ರ ಮರ್ಕಝುಲ್ ಹುದಾ ವುಮೆನ್ಸ್ ಕಾಲೇಜಿನ ಚೇರ್‌ಮ್ಯಾನ್ ಅಬ್ದುಲ್ ರಹಿಮಾನ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಉನ್ನತ ಶಿಕ್ಷಣಕ್ಕೆ ಬಹಳಷ್ಟು ಬೇಡಿಕೆಯಿದೆ ಮಾತ್ರವಲ್ಲ ಅನಿವಾರ್ಯತೆಯೂ ಹೌದು. ತಾಂತ್ರಿಕ ಕೌಶಲ್ಯತೆಯುಳ್ಳ ಉನ್ನತ ಶಿಕ್ಷಣ ಪಡೆದಾಗ ಭವಿಷ್ಯದಲ್ಲಿ ಜೀವನವೂ ಉಜ್ವಲವೆನಿಸುವುದು. ಪ್ರಸ್ತುತ ವಿದ್ಯಾಮಾನದಲ್ಲಿ ವಿದ್ಯೆ, ಪದವಿಗೆ ತಕ್ಕಂತೆ ಉದ್ಯೋಗ ಸಿಗುತ್ತಿಲ ಎನ್ನುವ ಕೊರಗು ವಿದ್ಯಾರ್ಥಿಗಳಲ್ಲಿದೆ. ವಿದ್ಯೆ, ಪದವಿ ಜೊತೆಗೆ ಪ್ರಾವೀಣ್ಯತೆಯನ್ನು ಮೈಗೂಡಿಸಿಕೊಂಡಲ್ಲಿ ಉದ್ಯೋಗ ಕೂಡ ಅರಸಿಕೊಂಡು ಬರುತ್ತದೆ. ಕೈತುಂಬಾ ಸಂಬಳ, ಗೌರವ ಇವೆರಡೂ ಇದ್ದರೆ ಅದು ಯಶಸ್ವಿ ಜೀವನಕ್ಕೆ ಭದ್ರ ಬುನಾದಿಯಾಗಬಲ್ಲುದು ಎಂದ ಅವರು ಅಕ್ಷಯ ಕಾಲೇಜು ಹಾಗೂ ವಿಝ್ಡಮ್ ಸಂಸ್ಥೆಯವರು ಪುತ್ತೂರಿನಲ್ಲಿ ಇಂತಹ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜೀವನಕ್ಕೆ ಉತ್ತಮ ಹೆಜ್ಜೆಯನ್ನಿಟ್ಟಿದ್ದಾರೆ ಎಂದರು.

ಪ್ರೇರಣಾ, ವಿಝ್ಡಮ್ ಸಂಸ್ಥೆಗಳು ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯತೆ ವೃದ್ಧಿಗಾಗಿ ದುಡಿಯುತ್ತವೆ-ಪ್ರವೀಣ್ ಕುಂಟ್ಯಾನ:
ಪ್ರೇರಣಾ ಸಂಸ್ಥೆಯ ಎಕ್ಸಿಕ್ಯೂಟಿವ್ ನಿರ್ದೇಶಕ ಪ್ರವೀಣ್ ಕುಂಟ್ಯಾನ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಜೀವನದ ಬಗ್ಗೆ ದೂರದೃಷ್ಟಿ ಇದೆ ಆದರೆ ಸ್ಪಷ್ಟತೆಯಿಲ್ಲ. ಜೀವನದ ದೂರದೃಷ್ಟಿಯ ಜೊತೆಗೆ ಹೀಗೆಯೇ ಸಾಗಬೇಕು ಎನ್ನುವ ಸ್ಪಷ್ಟತೆಯ ಅರಿವಪ್ರೇರಣಾ ಹಾಗೂ ವಿಝ್ಡಮ್ ಸಂಸ್ಥೆಯಿಂದ ಸಿಗುತ್ತದೆ. ಪ್ರೇರಣಾ ಹಾಗೂ ವಿಝ್ಡಮ್ ಇವೆರಡು ಸಂಸ್ಥೆಗಳು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗಾಗಿ, ಕೌಶಲ್ಯತೆ ವೃದ್ಧಿಗಾಗಿ ದುಡಿಯುತ್ತವೆ. ಪ್ರೇರಣಾ ಸಂಸ್ಥೆಯು ಕೂಡ ಮುಂದಿನ ದಿನಗಳಲ್ಲಿ ವಿಝ್ಡಮ್ ಸಂಸ್ಥೆಯೊಂದಿಗೆ ಕೈಜೋಡಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯದ ಅಭಿವೃದ್ಧಿಗೆ ದುಡಿಯೋಣ ಎಂದರು.

ವಿಝ್ಡಮ್ ಸಂಸ್ಥೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಅಡಿಪಾಯ-ಕರುಣಾಕರ್ ರೈ:
ಆರಾಧ್ಯ ಆರ್ಕೇಡ್ ಮಾಲಕ ದೇರ್ಲ ಕರುಣಾಕರ್ ರೈ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಆಶಾಕಿರಣವಾಗಿರುವ ವಿಝ್ಡಮ್ ಸಂಸ್ಥೆಯು ನಮ್ಮ ಆರಾಧ್ಯ ಕಟ್ಟಡದಲ್ಲಿ ಪ್ರಾರಂಭಗೊಂಡಿರುವುದು ನಮಗೆ ಖುಷಿ ತಂದಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಳ್ಳೆಯ ಅಡಿಪಾಯವನ್ನು ಸೃಷ್ಟಿಸುವ ಈ ಸಂಸ್ಥೆಯು ಉತ್ತರೋತ್ತರ ಬೆಳೆಯಲಿ, ಈ ಸಂಸ್ಥೆಯಿಂದ ಎಲ್ಲರಿಗೂ ಪ್ರಯೋಜನ ಸಿಗುವಂತಾಗಲಿ ಎಂದರು.

ವಿಝ್ಡಮ್ ಸಂಸ್ಥೆ ಪುತ್ತೂರಿನಲ್ಲಿ ಉದ್ಘಾಟನೆಗೊಂಡಿರುವುದು ಬಹಳ ಅನುಕೂಲವಾಗಿದೆ-ರೂಪರೇಖ ಆಳ್ವ:
ವಿಝ್ಡಮ್ ಇನ್ಸ್ಟಿಟ್ಯೂಟ್ ಮೂಲಕ ಪ್ರಸ್ತುತ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಪುತ್ತೂರಿನವರೇ ಆಗಿರುವ ಶಮಂತ್ ಆಳ್ವರವರ ತಾಯಿ ರೂಪರೇಖ ಆಳ್ವ ಮಾತನಾಡಿ, ನನ್ನ ಮಗ ಶಮಂತ್ ಆಳ್ವನ ಕನಸಿಗೆ ಕೈ ಹಿಡಿದದ್ದೆ ಈ ವಿಝ್ಡಮ್ ಸಂಸ್ಥೆ. ಕಾಲೇಜು ಪದವಿ ಮುಗಿಸಿದ ಶಮಂತ್ ಆಳ್ವ ಪ್ರಸ್ತುತ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವುದಕ್ಕೆ ಈ ವಿಝ್ಡಮ್ ಸಂಸ್ಥೆ ಕಾರಣ. ಹಲವಾರು ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡುವ ಹೆಬ್ಬಯಕೆ ಇರುತ್ತದೆ. ಅದಕ್ಕಾಗಿ ಪುತ್ತೂರಿನಲ್ಲಿ ತರಬೇತಿ ಸಂಸ್ಥೆ ಇಲ್ಲದ ಕಾರಣ ಮಂಗಳೂರಿಗೆ ಹೋಗಬೇಕಾಗುತ್ತದೆ. ಆದರೆ ಈಗ ಅದೇ ತರಬೇತಿ ಸಂಸ್ಥೆ ಪುತ್ತೂರಿನಲ್ಲಿ ಉದ್ಘಾಟನೆಗೊಂಡಿರುವುದು ಪುತ್ತೂರು ಹಾಗೂ ಇಲ್ಲಿನ ಆಸುಪಾಸಿನ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ ಮಾತ್ರವಲ್ಲ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಲಿದೆ ಎಂದರು.

ವಿದ್ಯಾರ್ಥಿಗಳ ಭವಿಷ್ಯದ ಆಶಾಕಿರಣ ಈ ವಿಝ್ಡಮ್ ಸಂಸ್ಥೆ-ಜಯಂತ್ ನಡುಬೈಲು:
ಅಕ್ಷಯ ಕಾಲೇಜಿ ಚೇರ್‌ಮ್ಯಾನ್ ಜಯಂತ್ ನಡುಬೈಲು ಸ್ವಾಗತಿಸಿ, ಮಾತನಾಡಿ, ಧಾರ್ಮಿಕ, ಶೈಕ್ಷಣಿಕ, ಬ್ಯಾಂಕಿಂಗ್, ಉದ್ಯಮ ಕ್ಷೇತ್ರವಾಗಿ ಮುತ್ತಿನನಗರಿ ಪುತ್ತೂರು ಶೀಘ್ರವಾಗಿ ಬೆಳೆಯುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮುಂದೆ ಏನು ಎಂಬ ಚಿಂತೆ?. ಯಾವ ಡಿಗ್ರಿ ಮಾಡಬೇಕು, ಯಾವ ಉನ್ನತ ವಿದ್ಯಾಭ್ಯಾಸ ಕಲಿಯಬೇಕು, ತಾನು ಕಲಿತ ಕೂಡಲೇ ಉದ್ಯೋಗ ಸಿಗಬೇಕು ಎನ್ನುವ ಉದ್ಧೇಶದಿಂದ ಯಾವ ರೀತಿಯ ಕೋರ್ಸ್ ತೆಗೆದುಕೊಳ್ಳಬೇಕು ಎಂಬ ಅರಿವನ್ನು ಈ ವಿಝ್ಡಮ್ ಸಂಸ್ಥೆಯು ನೀಡುತ್ತದೆ. ಈ ವಿಝ್ಡಮ್ ಸಂಸ್ಥೆಯು ದುಬೈ, ಹಾಸನ, ಮಂಗಳೂರು ಹೀಗೆ ಏಳು ಕಡೆ ಕಾರ್ಯಾಚರಿಸುತ್ತಿದೆ. ಪುತ್ತೂರಿನಲ್ಲಿಯೂ ಆಫೀಸ್ ಮಾಡಿ ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯ ಕಲ್ಪಿಸಬೇಕು ಎನ್ನುವ ಉದ್ಧೇಶದಿಂದ ಇಲ್ಲಿ ಸ್ಥಾಪನೆಗೊಂಡಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ ಎಂದರು.

ವಿಝ್ಡಮ್ ಇನ್ಸ್ಟಿಟ್ಯೂಟ್ ಮೂಲಕ ಪ್ರಸ್ತುತ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಪುತ್ತೂರಿನವರೇ ಆಗಿರುವ ಪ್ರಖ್ಯಾತ್ ರೈ ಚಿಕ್ಕಪ್ಪ ಭಾಸ್ಕರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಮಿತಾ ಪ್ರಾರ್ಥಿಸಿದರು. ವಿಝ್ಡಮ್ ಇನ್ಸ್ಟಿಟ್ಯೂಶನ್ ಸೆಂಟರ್‌ನ ಸಂಸ್ಥಾಪಕ ಡಾ.ಗುರು ತೇಜ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಉದ್ಧೇಶವನ್ನು ತಿಳಿಸಿದರು. ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಉಪನ್ಯಾಸಕರಾದ ಕಿಶನ್ ರಾವ್, ರಾಕೇಶ್, ವಿಝ್ಡಮ್ ಇನ್‌ಸ್ಟಿಟ್ಯೂಷನ್ಸ್ ನೆಟ್‌ವರ್ಕ್ ಸಂಸ್ಥೆಯ ಸಂಸ್ಥಾಪಕಿ ಡಾ.ಫ್ರಾನ್ಸಿಸ್ಕ ತೇಜ್, ಟೀಮ್ ಹೆಡ್ ಭರತ್ ಕುಮಾರ್, ಶ್ರದ್ಧಾ, ಮೇಘಶ್ರೀರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ವಿಝ್ಡಮ್ ಇನ್ಸ್ಟಿಟ್ಯೂಶನ್ಸ್ ನೆಟ್‌ವರ್ಕ್ ಉಪಾಧ್ಯಕ್ಷ ದೀಪಕ್ ಬೋಲೂರ್ ವಂದಿಸಿದರು. ವಿಝ್ಡಮ್ ಇನ್ಸ್ಟಿಟ್ಯೂಶನ್ಸ್ ನೆಟ್‌ವರ್ಕ್ ಫ್ರಾಂಚೈಸಿ ಪಾಲುದಾರ ವಿನಿತ್ ಕುಮಾರ್, ಕೇಂದ್ರದ ಮುಖ್ಯಸ್ಥ ಭರತ್ ಕುಮಾರ್ ಸಹಕರಿಸಿದರು. ಅಕ್ಷಯ ಕಾಲೇಜಿನ ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಆಕಾಂಕ್ಷೆಗಳ ಕನಸಿಗೆ‌ ಜೀವ ತುಂಬುತ್ತದೆ ಈ ವಿಝ್ಡಮ್ ಸಂಸ್ಥೆ..
ವಿಝ್ಡಮ್ ಸಂಸ್ಥೆಗೆ ಕೇವಲ ಐದಾರು ವರ್ಷಗಳೇ ಆಗಿದ್ದರು, ಈ ಸಂಸ್ಥೆಯ ಮುಖೇನ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಭವಿಷ್ಯದ ಬದುಕನ್ನು ಕಂಡುಕೊಳ್ಳಲು ಸಫಲರಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಆಕಾಂಕ್ಷೆಗಳ ಕನಸುಗಳಿಗೆ ಜೀವ ತುಂಬುವಂತಹ ಕಾರ್ಯ ಈ ವಿಝ್ಡಮ್ ಸಂಸ್ಥೆಯು ನಿರಂತರವಾಗಿ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಅರ್ಹತೆಯ ಆಧಾರದ ಮೇಲೆ ಪ್ರವೇಶ ಮತ್ತು ವಿದ್ಯಾರ್ಥಿವೇತನವನ್ನು ಪಡೆಯುವಲ್ಲಿ ಸಹಾಯ, ಭಾರತದ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಾನ್ವಿತ ವಿಶ್ವವಿದ್ಯಾಲಯಗಳಿಗೆ ಮಾರ್ಗದರ್ಶನ, ನೆಟ್‌ವರ್ಕ್ ಕೌಶಲ್ಯ-ಕೇಂದ್ರಿತ ಕಾರ್ಯಾಗಾರ, ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಸವಾಲುಗಳಿಗೆ ಉತ್ತಮವಾಗಿ ಸಿದ್ಧರಾಗಲು ಮತ್ತು ಜಾಗತಿಕ ಮಟ್ಟದಲ್ಲಿ ಉತ್ಕೃಷ್ಟರಾಗಲು ಸಜ್ಜುಗೊಳಿಸುವಂತೆ ಈ ವಿಝ್ಡಮ್ ಸಂಸ್ಥೆಯು ಸದಾ ಮುಂದಿದೆ. ಈ ವಿಝ್ಡಮ್ ಸಂಸ್ಥೆಯನ್ನು ನಿಜಕ್ಕೂ ಮುನ್ನೆಡೆಸುವವರು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಿದ್ದಾರೆ. ಇಲ್ಲಿನ ಸ್ಮಾರ್ಟ್ ರಸ್ತೆಯಲ್ಲಿ ಸ್ಮಾರ್ಟ್ ವಿಝ್ಡಮ್ ಹೊರಹೊಮ್ಮಲಿ.
-ಡಾ.ಫ್ರಾನ್ಸಿಸ್ಕ ತೇಜ್, ಸಂಸ್ಥಾಪಕರು, ವಿಝ್ಡಮ್ ಇನ್ಸ್ಟಿಟ್ಯೂಶನ್ಸ್ ನೆಟ್‌ವರ್ಕ್

ವಿಶೇಷತೆಗಳು..
-6000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
-ಜಾಗತಿಕವಾಗಿ 1200 ವಿಶ್ವವಿದ್ಯಾಲಯಗಳಲ್ಲಿ ಪಾಲುದಾರರು
-5.7 ಕೋಟಿ ಮೌಲ್ಯದ ವಿದ್ಯಾರ್ಥಿ ವೇತನ ಲಭಿಸಿದೆ
-4.9 ಗೂಗಲ್ ವಿಮರ್ಶೆಗಳು
-2300+ಸಾಲದ ಅನುದಾನದ ಮಾರ್ಗದರ್ಶನ ಮಾಡಲಾಗಿದೆ

ಮುಂದಿನ ಯೋಜನೆಗಳು..
-ಉನ್ನತ ಶಿಕ್ಷಣ ಕಲಿಕೆ ಮತ್ತು ನಿಯೋಜನೆಗಳು
-ಸೈಕೊಮೆಟ್ರಿಕ್ ಮೌಲ್ಯಮಾಪನಗಳು ಮತ್ತು ಸಮಾಲೋಚನೆ
-ಸಂಶೋಧನೆ ಹಾಗೂ ಭೌದ್ದಿಕ ಪ್ರಗತಿಗಾಗಿ ಅಧ್ಯಯನ, ಪ್ರವಾಸಗಳು
-ನಿಯೋಜನೆಗಳೊಂದಿಗೆ ಕೌಶಲ್ಯಗಳ ತರಬೇತಿ
-ವಿದ್ಯಾರ್ಥಿಗಳು-ಸ್ಟಾರ್ಟ್‌ಅಪ್‌ಗಳನ್ನು ಪೋಷಿಸಲು ಮತ್ತು ಮಾರ್ಗದರ್ಶನ ಮಾಡಲು ವಿನ್ ಇನ್ಕ್ಯುಬೇಟರ್

LEAVE A REPLY

Please enter your comment!
Please enter your name here