ನಿಡ್ಪಳ್ಳಿ: ಇಲ್ಲಿಯ ಎಂಪೆಕಲ್ಲು ನಿವಾಸಿ ಇಸ್ಮಾಯಿಲ್ ಹಾಜಿ(77) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಫೆ.28 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಹಿಂದೆ ವ್ಯಾಪಾರಸ್ಥರಾಗಿದ್ದು ಕೃಷಿಕರೂ ಆಗಿದ್ದು ಜನಾನುರಾಗಿಯಾಗಿದ್ದರು. ಪ್ರಸ್ತುತ ಕೊರಿಂಗಿಲ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಪತ್ನಿ ಅಲೀಮಾ, ಪುತ್ರರಾದ ಶರೀಫ್, ಹಮೀದ್, ಫಾರೂಕ್, ಪುತ್ರಿ ಜುಹುರಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.