ಉಪ್ಪಿನಂಗಡಿ: ನಿರ್ಮಾಣ ಹಂತದ ಮನೆಯ ಮೇಲಿನಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇಲ್ಲಿನ ಕರ್ವೇಲು ಎಂಬಲ್ಲಿ ಮಾ.3ರಂದು ನಡೆದಿದೆ.
ಕರ್ವೇಲು ನಿವಾಸಿ ಮುಹಮ್ಮದ್ ಮುಸ್ತಾಫ (35) ಮೃತ ವ್ಯಕ್ತಿ. ಇವರು ಕರ್ವೇಲ್ನಲ್ಲಿ ಮನೆಯನ್ನು ಕಟ್ಟಿಸುತ್ತಿದ್ದು, ಕಾರ್ಮಿಕರೊಂದಿಗೆ ಸೇರಿಕೊಂಡು ಮನೆಯ ಕಾಮಗಾರಿಯಲ್ಲಿ ದುಡಿಯುತ್ತಿದ್ದರು. ಇಂದು ಬೆಳಗ್ಗೆ ಮನೆಯ ಮೇಲೆ ನೀರು ಹಾಕುತ್ತಿದ್ದ ಸಂದರ್ಭ ಆಯ ತಪ್ಪಿ ಇವರು ಕೆಳಗಡೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಗರ್ಭಿಣಿ ಪತ್ನಿ, ಎಂಟು ಮತ್ತು ಆರರ ಹರೆಯದ ಒಂದು ಹೆಣ್ಣು ಹಾಗೂ ಗಂಡು ಮಗುವನ್ನು ಅಗಲಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.