ಪುತ್ತೂರು: ಸುದ್ದಿ ಅರಿವು ಕೃಷಿ ಕೇಂದ್ರದ ವತಿಯಿಂದ ಅಕ್ವೇರಿಯಂ ಮೀನು ಸಾಕಾಣಿಕೆಯ ಕುರಿತು ತರಬೇತಿ ಕಾರ್ಯಾಗಾರ ಹಾಗೂ ಉಚಿತ ಪ್ರದರ್ಶನ ಮತ್ತು ಮಾರಾಟವು ಮಾ.3ರಂದು ಎಪಿಎಂಸಿ ರಸ್ತೆಯಲ್ಲಿರುವ ಸುದ್ದಿ ಅರಿವು ಕೃಷಿ ಕೇಂದ್ರದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಮತ್ಸ್ಯಕನ್ಯಾ ಅಕ್ವೇರಿಯಂನ ಶಶಿಕುಮಾರ್ ಕಾರ್ಕಳ ಮನೆಯಲ್ಲಿರುವ ಅಲ್ಪ ಸ್ವಲ್ಪ ಜಾಗದಲ್ಲಿ ಟಾರ್ಪಲ್ ತೊಟ್ಟಿ, ಮೀನಿನ ಬಾಕ್ಸ್, ಪ್ಲಾಸ್ಟಿಕ್ ಬಕೆಟ್ ಇತ್ಯಾದಿಗಳಲ್ಲಿ ಅಕ್ವೇರಿಯಂ ಮೀನು ಸಾಕಿ ಸಂಪಾದನೆ ಗಳಿಸುವ ಕುರಿತು ವಿಸ್ತೃತವಾದ ಮಾಹಿತಿ ನೀಡಿದರು. ಪ್ರದೀಪ್ ಸುಬ್ರಹ್ಮಣ್ಯ, ಗಣೇಶ್ ದೇವಸ್ಯ, ಪ್ರಶಾಂತ್ ಬೆಳ್ಳಿಪ್ಪಾಡಿ, ಅಹಮದ್ ರಾಮಕುಂಜ, ಪ್ರೀತಂ ಬಡಗನ್ನೂರು, ಶ್ರೀಜಿತ್ ನೆಲ್ಯಾಡಿ, ಡಾ.ಪಿಕೆಎಸ್ ಭಟ್, ಸುಪ್ರಿತ್ ಸುಬ್ರಹ್ಮಣ್ಯ, ಪ್ರೀತಿ ಶಶಿಕುಮಾರ್, ಗಿರೀಶ್, ಚಂದು ಪೂಜಾರಿ, ಅರಿವು ಕೃಷಿ ಕೇಂದ್ರದ ಹರಿಣಾಕ್ಷಿ, ಚೈತ್ರಾ, ಹೊನ್ನಪ್ಪ, ಕುಶಾಲಪ್ಪ, ಶಿವಕುಮಾರ್ ಸೇರಿದಂತೆ ಹಲವು ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಅಪರಾಹ್ನ ಅಕ್ವೇರಿಯಂ ಮೀನುಗಳ ಉಚಿತ ಪ್ರದರ್ಶನ ಹಾಗೂ ಮಾರಾಟ ನಡೆಯತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.