ಪಾಣಾಜೆ: ಇಲ್ಲಿನ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಪೂಮಾಣಿ, ಕಿನ್ನಿಮಾಣಿ, ರಾಜನ್ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಪೂಮಾಣಿ ಕಿನ್ನಿಮಾಣಿ ರಾಜನ್ ದೈವಗಳ ಅನುಜ್ಞಾ ಕಲಶ, ನಂತರ ಬಾಲಾಲಯದಲ್ಲಿ ಪ್ರತಿಷ್ಠಾಪನೆಯು ಫೆ.29 ರಂದು ಕುಂಟಾರು ಬ್ರಹ್ಮಶ್ರೀ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಬೆಳಿಗ್ಗೆ ನಡೆದ ಭಕ್ತಾದಿಗಳ ವಿಶೇಷ ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕ ಶ್ರೀಧರ್ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯರವರ ನೇತೃತ್ವದಲ್ಲಿ ನಡೆದ ಸಭೆಯ ವೇದಿಕೆಯಲ್ಲಿ ಊರ ಗುರಿಕ್ಕಾರ ಜಗನ್ಮೋಹನ ರೈ ಸೂರಂಬೈಲು, ಆಡಳಿತ ಸಮಿತಿ ಕಾರ್ಯದರ್ಶಿ ಶುಭಕರ ರೈ ಪಡ್ಯಂಬೆಟ್ಟು, ಸದಾಶಿವ ರೈ ಸೂರಂಬೈಲು, ಗಣೇಶ್ ಭಟ್ ಜ್ಯೋತಿಸ್ಟೋರ್, ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ, ಶ್ರೀಹರಿ ನಡುಕಟ್ಟ, ತಮ್ಮಣ್ಣ ನಾಯ್ಕ ಸುಡುಕುಳಿ, ಭಾಸ್ಕರ ಪೂಜಾರಿ ನಡುಕಟ್ಟ ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.
ಸಭೆಯಲ್ಲಿ ಬೈಲುವಾರು ಸಮಿತಿಯನ್ನು ರಚಿಸಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆಯ ಬಳಿಕ ಭಕ್ತಾದಿಗಳಿಂದ ಕರಸೇವೆ ನಡೆಯಿತು.