ಬಡಗನ್ನೂರು: ಕನ್ನಡ್ಕ ಕಾಡಿನಲ್ಲಿ ಹಾಗೂ ಪದಡ್ಕ ಹಾಗೂ ಕನ್ನಡ್ಕ ಬಸ್ ತಂಗುದಾಣದಲ್ಲಿ ಕುಡಿದು ಹೆಂಗಸರಿಗೆ ಕಿರುಕುಳ ನೀಡುವವರ ವಿರುದ್ಧ ಪೊಲೀಸ್ ಇಲಾಖೆಗೆ ದೂರು ನೀಡುವ ಬಗ್ಗೆ ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು. ಈ ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ಮಾ.1ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಈಶ್ವರಮಂಗಲ ಸುಳ್ಯಪದವು ರಸ್ತೆಯ ಸಜಂಕಾಡಿ, ಪದಡ್ಕ ಹಾಗೂ ಕನ್ನಡ್ಕ ಬಸ್ ತಂಗುದಾಣದಲ್ಲಿ ಮತ್ತು ಕನ್ನಡ್ಕ ಕಾಡಿನ ಮಧ್ಯೆ ಕೇರಳ ಭಾಗದವರು ಹಗಲು ಹೊತ್ತಿನಲ್ಲಿ ಗುಂಪಾಗಿ ಬಂದು ಕುಡಿಯುತ್ತಿದ್ದು ಒಂದೊಮ್ಮೆ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕೊಂಡೊಯ್ಯವ ಸಂದರ್ಭದಲ್ಲಿ ಹಿಂಬಳಿಸುವ ಘಟನೆಯು ನಡೆದಿದೆ.ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಧರ್ಮೇಂದ್ರ ಕುಲಾಲ್ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಪೋಲಿಸ್ ಅಧಿಕಾರಿಗಳಿಗೆ ದೂರು ನೀಡುವ ಎಂದು ಪ್ರಭಾರ ಅಭಿವೃದ್ಧಿ ಅಧಿಕಾರಿ ಸಂದ್ಯಾಲಕ್ಷ್ಮೀ ಹೇಳಿದರು. ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಗ್ರಾ.ಪಂ ಗುಮಾಸ್ತ ಹುದ್ದೆಯಲ್ಲಿದ್ದ ಜಯಾಪ್ರಾದ್ ಕುತ್ಯಾಳ ರವರು ಮುಭಡ್ತಿಹೊಂದಿ ಕೊಳ್ತಿಗೆ ಗ್ರಾ.ಪಂ ಲೆಕ್ಕ ಸಹಾಯಕರಾಗಿ ವರ್ಗಾವಣೆ ಹೊಂದಿದ್ದು ತೆರವಾದ ಗುಮಾಸ್ತ ಹುದ್ದೆಯನ್ನು ಬಿಲ್ ಕಲೆಕ್ಷನ್ ಸುಕನ್ಯಾ ನಿರ್ವಹಿಸುತ್ತಿದ್ದರು. ತದನಂತರ ಗುಮಾಸ್ತ ಹುದ್ದೆಗೆ ಮುಭಡ್ತಿ ಮಾಡುವಂತೆ ಅರ್ಜಿ ಸಲ್ಲಿಸಿದರು. ಆದರೆ ಇಲ್ಲಿ ಜವಾನ ಹುದ್ದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಾರದಾ ಕೂಡ ಮುಭಡ್ತಿ ಪಂಕ್ಯತಿ ಯಲ್ಲಿದ್ದವರು ಇದರಿಂದ ಬಿಲ್ ಕಲೆಕ್ಷನ್ ಸುಕನ್ಯಾ ಮುಭಡ್ತಿ ನೀಡಬಾರದು. ಜವಾನ ಹುದ್ದೆಯಲ್ಲಿದ್ದ ತಾನು ಗುಮಾಸ್ತ ಹುದ್ದೆಗೆ ಅರ್ಹಳು ನನಗೆ ಮುಭಡ್ತಿ ನೀಡಬೇಕು. ಎಂದು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಕ್ರಮ ಕೈಗೊಳ್ಳುವುದು. ಮತ್ತು ಅಷ್ಟರವರೆಗೆ ಜವಾನ ಹುದ್ದೆಯಲ್ಲಿರುವ ಶಾರದಾ ಗುಮಾಸ್ತ ಹುದ್ದೆಯ ಕೆಲಸ ನಿರ್ವಹಿಸಬೇಕು ಎಂದು ನಿರ್ಣಯ ಮಾಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ ಗಿರಿಮನೆ, ವಸಂತ ಗೌಡ ಕನ್ನಾಯ, ಲಿಂಗಪ್ಪ ಮೋಡಿಕೆ, ರವಿಚಂದ್ರ ಸಾರೆಪ್ಪಾಡಿ, ಕುಮಾರ್ ಅಂಬಟೆಮೂಲೆ, ವೆಂಕಟೇಶ ಕನ್ನಡ್ಕ, ಪದ್ಮನಾಭ ಕನ್ನಡ್ಕ ಧರ್ಮೇಂದ್ರ ಕುಲಾಲ್ ಪದಡ್ಕ, ಸವಿತಾ ನೆರೋಳ್ತಡ್ಕ, ಹೇಮಾವತಿ ಮೋಡಿಕೆ, ಸುಜಾತ ಮೈಂದನಡ್ಕ, ಜ್ಯೋತಿ ಅಂಬಟೆಮೂಲೆ, ಕಲಾವತಿ ಗೌಡ ಪಟ್ಲಡ್ಕ, ದಮಯಂತಿ ಕೆಮತ್ತಡ್ಕ ಉಪಸ್ಥಿತರಿದ್ದರು. ಪ್ರಭಾರ ಅಭಿವೃದ್ಧಿ ಅಧಿಕಾರಿ ಸಂದ್ಯಾಲಕ್ಷ್ಮಿ ಸಾರ್ವಜನಿಕ ಮತ್ತು ಸರಕಾರಿ ಸುತ್ತೋಲೆ ಓದಿದರು. ಸಿಬ್ಬಂದಿಗಳು ಸಹಕರಿಸಿದರು.