ವಿವೇಕಾನಂದ ಪಾಲಿಟೆಕ್ನಿಕ್ ನ ಸಿವಿಲ್ ವಿಭಾಗ ಮುಖ್ಯಸ್ಥ ರವಿರಾಮ ಸಿದ್ಧಮೂಲೆ ಸಾಧನೆಗೆ ಎ.ಸಿ.ಸಿ.ಇ(ಐ) ಎಮಿನೆಂಟ್ ಇಂಜಿನೀಯರ್ 2025 ಪ್ರಶಸ್ತಿ

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನ ಸಿವಿಲ್ ವಿಭಾಗ ಮುಖ್ಯಸ್ಥ ರವಿರಾಮ ಸಿದ್ಧಮೂಲೆ ಸಿವಿಲ್ ಇಂಜಿನೀಯರಿಂಗ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳಿಗಾಗಿ ಕೊಡಮಾಡುವ ಎ.ಸಿ.ಸಿ.ಇ(ಐ) ಎಮಿನೆಂಟ್ ಇಂಜಿನೀಯರ್ 2025ರ ಪ್ರಶಸ್ತಿಯನ್ನು ಇತ್ತೀಚೆಗೆ ಪಡೆದರು. ಬೆಳ್ತಂಗಡಿಯಲ್ಲಿ ನಡೆದ ಅಖಿಲ ಭಾರತೀಯ ಮಟ್ಟದ ಇಂಜಿನೀಯರ್‌ಗಳ ಸಂಘಟನೆಯಾದ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ‍್ಸ್ (ಇಂಡಿಯ) ಇದರ ಸ್ಥಾಪನಾ ದಿನದ ನೆನಪಿನಲ್ಲಿ ಕೊಡುವ ಈ ಪ್ರಶಸ್ತಿಯನ್ನು ಪಡೆದುಕೊಂಡರು.


ರವಿರಾಮ ಸಿದ್ಧಮೂಲೆಯವರು 1987ರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಗೆ ಉಪನ್ಯಾಸಕರಾಗಿ ನೇಮಕವಾಗಿ, ವಿಭಾಗ ಮುಖ್ಯಸ್ಥರಾಗಿ ಬಹಳ ಪ್ರಸಿದ್ಧಿಯನ್ನು ಪಡೆದಿರುತ್ತಾರೆ. ಉತ್ತಮ ನಾಯಕತ್ವ ಗುಣವುಳ್ಳ ಇವರು ಬಹುಮುಖ ಪ್ರತಿಭೆಯುಳ್ಳವರು. ಸರ್ವೆ ಮತ್ತು ಎಸ್ಟಿಮೇಶನ್ ಮಾಡುವುದರಲ್ಲಿ ಇವರದು ಎತ್ತಿದ ಕೈ. ಪುತ್ತೂರಿನ ಇಂಜಿನೀಯರ್‌ಗಳ ಸಂಘಟನೆ ಪೇಸ್ ಸಂಸ್ಥೆಯ ಮೂಲಕ ನೂತನವಾಗಿ ಕ್ಷೇತ್ರಕ್ಕೆ ಕಾಲಿಡುವ ಇಂಜಿನೀಯರ್ ಗಳಿಗೆ ಅನುಕೂಲಕ್ಕಾಗಿ ಪರಿಚಯ ಎಂಬ ತಾತ್ರಿಕ ಪುಸ್ತಕವನ್ನು ಹೊರ ತಂದಿರುತ್ತಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಚರಿತ್ರೆ ಏಳುನಾಡು ಸೀಮಾಧಿಪತಿ ಪುತ್ತೂರು ಶ್ರೀ ಮಹಾಲಿಂಗೇಶ್ವರ, ದೇವಾಲಯ ವಿನ್ಯಾಸಗಳಿಗೆ ಅಗತ್ಯವಾಗಿ ಬೇಕಾಗುವ ವಾಸ್ತು ಶಾಸ್ತ್ರ ಗ್ರಂಥ ತಂತ್ರ ಸಮುಚ್ಛಯ-ಶಿಲ್ಪ ಇತ್ತೀಚೆಗೆ ಪ್ರಕಟಿಸಲ್ಪಟ್ಟಿದೆ. ತನ್ನ ದೊಡ್ಡ ತಂದೆಯವರೊಂದಿಗೆ ಸೇರಿ ಬರೆದ ಗೃಹವಾಸ್ತು ಕುರಿತ ಮನುಷ್ಯಾಲಯ ಚಂದ್ರಿಕಾ ವಾಸ್ತು ಪುಸ್ತಕವನ್ನು ಪರಿಷ್ಕೃತ ಗೊಳಿಸಿ ಮರು ಮುದ್ರಣ ಮಾಡಿರುತ್ತಾರೆ.


ವಿವೇಕಾನಂದ ವಿದ್ಯಾವರ್ಧಕ ಸಂಘದ ಇಂಜಿನೀಯರ್ ಗಳ ತಂಡದಲ್ಲಿ ಇದ್ದು ಸಲಹೆ ನೀಡುತ್ತಿದ್ದಾರೆ. ಪುತ್ತೂರಿನ ಜನತೆಗೆ ತಾಂತ್ರಿಕ ಶಿಕ್ಷಣದ ಅಗತ್ಯಗಳ ಕುರಿತು ಸುದ್ದಿ ಪತ್ರಿಕೆಯೊಂದಿಗೆ ಮಾಹಿತಿ ನೀಡುತ್ತಿರುತ್ತಾರೆ. ಬೆಳ್ತಂಗಡಿಯಲ್ಲಿ ನಡೆದ ಎ.ಸಿ.ಸಿ.ಇ(ಐ) ಬೆಳ್ತಂಗಡಿಯ ಪದಗ್ರಹಣ ಸಮಾರಂಭದಲ್ಲಿ ಇ. ಕೆ.ಎಸ್. ಬಾಬುನಾರಾಯಣ್, ಮುಲ್ಕಿಯ ಇ. ಜೀವನ್ ಕೆ ಶೆಟ್ಟಿ, ಇ. ಜಗದೀಶ್ ಪ್ರಸಾದ್, ಸುರೇಶ್ ಬಂಗೇರಾ ಮತ್ತಿತರರು ಉಪಸ್ಥಿತರಿದ್ದು ಈ ಪ್ರಶಸ್ತಿಯನ್ನು ನೀಡಿದರು.

LEAVE A REPLY

Please enter your comment!
Please enter your name here