ಪುತ್ತೂರು: ಬನ್ನೂರು ಗ್ರಾಮದ ವ್ಯಾಪ್ತಿಗೆ 1 ಕೋಟಿ 35 ಸಾವಿರ ಅನುದಾನವು ಮಂಜೂರಾಗಿದ್ದು, ಸೇಡಿಯಾಪು – ಶಿರಾಡಿ ದೈವಸ್ಥಾನ ಸಂಪರ್ಕ ರಸ್ತೆ ಕಾಮಗಾರಿಗೆ ಮಾ. 6 ರಂದು ಶಾಸಕ ಆಶೋಕ್ ಕುಮಾರ್ ರೈ ಗುದ್ದಲಿ ಪೂಜೆ ಮೂಲಕ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಎಲ್ಲಾ ವರ್ಗದ ಜನರ ಒಲವು, ಪ್ರೀತಿ ಗಳಿಸುವಂತಹ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತರು ಕೂಡ ಅಭಿನಂದನೆ ಪ್ಲೆಕ್ಸ್ ಅಳವಡಿಸಿ, ನಮಗೆ ಶುಭಕೋರುತ್ತಿದ್ದಾರೆ. ಪಕ್ಷದ ಬಲವರ್ಧನೆ ಜೊತೆಗೆ ನಮಗೆ ಯಾರೇ ನೋವು ಕೊಟ್ಟರೂ, ಅವರಿಗೆ ಪ್ರೀತಿ ಸಹಾಯ ನೀಡುವ ಕೆಲಸವನ್ನು ನಿರಂತರ ಮಾಡುವ ಎಂದ ಅವರು, ಮಹಿಳೆಯನ್ನು ಸದೃಢಗೊಳಿಸೊ ಜೊತೆಗೆ ಹಲವು ಅಭಿವೃದ್ಧಿ ಕಾರ್ಯವೂ ಆಗಿದೆ. ಪುತ್ತೂರಿಗೆ ವೈದ್ಯಕೀಯ, ಪಶು ವೈದ್ಯಕೀಯ, ಕೆಎಂಎಫ್ ಇನ್ನೂ ಹಲವು ರೀತಿಯ ಉದ್ಯಮಗಳ ಆಗಮನದಿಂದ ಉದ್ಯೋಗ ಸೃಷ್ಟಿ ಜೊತೆಗೆ ಅಭಿವೃದ್ಧಿ ಸಾಧ್ಯ ವಾಗಲಿದ್ದು, ಗ್ಯಾರಂಟಿ ಯೋಜನೆಯಿಂದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುದಾನದ ಕೊರತೆಯಾಗಿದ್ದು, ಮುಂದಿನ ಬಜೆಟ್‌ನಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅನುದಾನವನ್ನು ಮೀಸಲಿಡುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆಯೆಂದು ಹೇಳಿ, ಹಾರೈಸಿದರು. ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ ಕೆ.ಬಿ, ವಲಯಾಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಸಹಿತ ಹಲವರು ಅತಿಥಿಗಳು ಹಾಗೂ ಗ್ರಾಮಸ್ಥರು ಇದ್ದರು.