ಪುತ್ತೂರು: ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ದ.ಕ. ಜಿ. ಪಂ. ಮಾದರಿ ಹಿ. ಪ್ರಾ. ಶಾಲೆ, ಬೊಳುವಾರು ಪುತ್ತೂರು ಇದರ ಹಿರಿಯ ವಿದ್ಯಾರ್ಥಿ ಸಂಘದ ಸಭೆಯು ಮಾ.10ರಂದು ಬೆಳಿಗ್ಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರೇಷ್ಮಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾಗವಹಿಸಿದ ಹಿರಿಯ ವಿದ್ಯಾರ್ಥಿಗಳು ತಮ್ಮ ಸಲಹೆ, ಸೂಚನೆ, ವ್ಯಕ್ತಿ ಪರಿಚಯವನ್ನು ಮಾಡಿದರು. ಎಂ. ಈಶ್ವರ್ ನಾಯ್ಕ್ ಮಾತನಾಡಿ ಹಳೆ ವಿದ್ಯಾರ್ಥಿ ಸಂಘದ ಅಗತ್ಯತೆ ಮತ್ತು ಅನಿವಾರ್ಯತೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಬಳಿಕ 2024-25ನೇ ಸಾಲಿನ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಮಹಮ್ಮದ್ ನೌಷದ್ ಹಾಜಿ, ಉಪಾಧ್ಯಕ್ಷರಾಗಿ ಮಲ್ಲಿಕಾ ಬಿ., ಪ್ರಧಾನ ಕಾರ್ಯದರ್ಶಿಯಾಗಿ ಈಶ್ವರ ನಾಯ್ಕ ಎಂ, ಜತೆ ಕಾರ್ಯದರ್ಶಿಗಳಾಗಿ ಸತೀಶ್ ಕರ್ಮಲ, ಇಸ್ಮಾಯಿಲ್ ಬೊಳುವಾರ್, ಕೋಶಾಧಿಕಾರಿಗಳಾಗಿ ಉಮಾಕಾಂತ್ ಹೆಗ್ಡೆ, ಹಾಗೂ ಕು. ಅಪೂರ್ವ, ಕಾನೂನು ಸಲಹೆಗಾರರಾಗಿ ಬೆಳ್ತಂಗಡಿ ಸರಕಾರಿ ಅಭಿಯೋಜಕರಾದ ದಿವ್ಯರಾಜ್ ಹೆಗ್ಡೆ ಉರ್ಲಾಂಡಿ, ಸಂಘಟನಾ ಕಾರ್ಯದರ್ಶಿಗಳಾಗಿ ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು, ಶಿವಪ್ರಸಾದ್ ಹೆಗ್ಡೆ ಉರ್ಲಾಂಡಿ, ಹೇಮಲತಾ ಹೆಗ್ಡೆ, ಜಯಶ್ರೀ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಹೆಗ್ಡೆ ಉರ್ಲಾಂಡಿ, ಕು. ಕೀರ್ತನ, ಮಾಧ್ಯಮ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಬೊಳುವಾರು, ಕ್ರೀಡಾ ಕಾರ್ಯದರ್ಶಿಯಾಗಿ ಹರಿಪ್ರಸಾದ್, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಗುಣಶೀಲ ಪುತ್ತೂರು, ದೀಕ್ಷಿತ್ ಕುಮಾರ್, ಕು. ಜಾಹ್ನವಿ, ಅಬ್ದುಲ್ ಮಜೀದ್ ಬೊಳುವಾರು, ಕು. ನಿಶಾ, ಕು. ಧನ್ಯ ಆಯ್ಕೆಯಾದರು.
ಸಂಘದ ಗೌರವ ಸಲಹೆಗಾರರಾಗಿ ರಂಗಕರ್ಮಿ ಐ.ಕೆ. ಬೊಳುವಾರು, ಮೆಗಾ ಗ್ಲಾಸ್ ಹೌಸ್‌ನ ಆಸ್ಕರ್ ಆನಂದ್, ಡಾ. ರವಿಪ್ರಕಾಶ್, ಅಝೀಜ್ ಬಿ. ಆರ್., ಉಸ್ಮಾನ್ ಹೆಚ್, ಗೌರವಾಧ್ಯಕ್ಷರಾಗಿ ನಗರಸಭಾ ಮಾಜಿ ಅಧ್ಯಕ್ಷರಾದ ಗಣೇಶ್ ರಾವ್, ಲೋಕೇಶ್ ಹೆಗ್ಡೆ ಹಾಗೂ ಡಾ. ಕೆ ಚಂದ್ರಶೇಖರ್, ವಿದ್ಯಾರ್ಥಿ ಸಂಘದ ಸಂಚಾಲಕರಾಗಿ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಸವಿತಾ ಸಿ. ಎ. ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವು ಶಾಲಾ ಹಿರಿಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು ಶಾಲೆಯ ಪದವಿಧರ ಶಿಕ್ಷಕಿ ಹಾಗೂ ಹಿರಿಯ ವಿದ್ಯಾರ್ಥಿ ಮಲ್ಲಿಕಾ ಬಿ ಕಾರ್ಯಕ್ರಮ ನಿರೂಪಿಸಿದರು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಹಿರಿಯ ಶಿಕ್ಷಕಿ ಶ್ರೀಮತಿ ಮೋನಿಕಾ.ಪಿ.ಮಾಡ್ತಾ ಸ್ವಾಗತಿಸಿದರು