ನೆಲ್ಯಾಡಿ: ಪ್ರತಿಷ್ಟಿತ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿಯನ್ನು ಹಿರಿಯ ಶಿಕ್ಷಕಿ ಹಾಗೂ ಜಾನಪದ ಕಲಾವಿದೆಯಾಗಿರುವ ನೆಲ್ಯಾಡಿಯ ಮೇರಿಜಾನ್ ಅವರಿಗೆ ನೀಡಲಾಗಿದೆ.
ಮಂಗಳೂರಿನ ಪಣಂಬೂರಿನಲ್ಲಿ ನಡೆದ ಜಾನಪದ ಪರಿಷತ್ನ ಕಾರ್ಯಕ್ರಮದಲ್ಲಿ ಮೇರಿಜಾನ್ ಅವರಿಗೆ ಪ್ರಶಸ್ತಿ ಹಾಗೂ ಗೌರವ ಪತ್ರ ನೀಡಲಾಯಿತು. ಇವರು ನೆಲ್ಯಾಡಿಯ ಪಿ.ಎಂ.ಶ್ರೀ ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಮೇರಿಜಾನ್ ಅವರ ಪತಿ ಭಾರತೀಯ ಭೂ ಸೇನೆಯ ನಿವೃತ್ತ ಸೈನಿಕರಾಗಿದ್ದಾರೆ. ಇವರು ಇಬ್ಬರು ಮಕ್ಕಳೊಂದಿಗೆ ನೆಲ್ಯಾಡಿಯಲ್ಲಿ ವಾಸ್ತವ್ಯವಿದ್ದಾರೆ. ಪ್ರಶಸ್ತಿ ಪಡೆದ ಮೇರಿಜಾನ್ ಅವರನ್ನು ನೆಲ್ಯಾಡಿ ಸಂತ ಅಲ್ಪೊನ್ಸ ಚರ್ಚ್ನಲ್ಲಿ ಗೌರವಿಸಿ ಮಾತನಾಡಿದ ಫಾ.ಶಾಜಿ ಮ್ಯಾಥ್ಯು ಅವರು, ಶಿಕ್ಷಣ ಮತ್ತು ಕಲೆಯ ಸಮ್ಮಿಲನದ ಮೂಲಕ ಮೌಲ್ಯಾಧರಿತ ಶಿಕ್ಷಣ ನೀಡಲು ಸಾಧ್ಯ ಎಂಬುದನ್ನು ಮೇರಿಜಾನ್ ತೋರಿಸಿಕೊಟ್ಟಿದ್ದಾರೆ ಎಂದರು.